ರಾಮಚಂದ್ರ ಗುಹಾ

ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿ ಇರುವಾಗ ಪಿ.ಎಂ ಕೇರ್ಸ್ ಏಕೆ?: ಕೇಂದ್ರ ಸರ್ಕಾರಕ್ಕೆ ರಾಮಚಂದ್ರ ಗುಹಾ ಪ್ರಶ್ನೆ
ಕೊರೋನಾ ವಿರುದ್ಧ ಹೊರಾಟ ನಡೆಸುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಪ್ರಧಾನ ಮಂತ್ರಿ ತುರ್ತು ಸಂದರ್ಭಗಳಲ್ಲಿ ನಾಗರಿಕರ ಸಹಾಯ ಮತ್ತು ಪರಿಹಾರ (ಪಿಎಂ. ಕೇರ್ಸ್) ನಿಧಿಯನ್ನು ಹೊಸದಾಗಿ ಪ್ರಾರಂಭಿಸಿರುವುದನ್ನು ಇತಿಹಾಸಕಾರ ರಾಮಚಂದ್ರ ಗುಹಾ ಪ್ರಶ್ನಿಸಿದ್ದಾರೆ.

ಸಿಎಎ ಪ್ರತಿಭಟನೆ ವೇಳೆ ಪೊಲೀಸರು ಹಲ್ಲೆ ಮಾಡಿದ್ದಕ್ಕೆ ನನಗೆ ಯಾರೂ ಕ್ಷಮೆ ಕೇಳಿಲ್ಲ: ರಾಮಚಂದ್ರ ಗುಹಾ
ಕಳೆದ ಡಿಸೆಂಬರ್ ನಲ್ಲಿ ನಗರದಲ್ಲಿ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸರು ಹಲ್ಲೆ ನಡೆಸಿದ ಘಟನೆಗೆ ತಮ್ಮಲ್ಲಿ ಇದುವರೆಗೆ ಯಾರೂ ಕ್ಷಮೆ ಕೇಳಿಲ್ಲ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ತಿಳಿಸಿದ್ದಾರೆ.

1947ರಲ್ಲಿ ನೆಹರೂ ಅವರಿಗೆ ಪಟೇಲರು ಸಂಪುಟಕ್ಕೆ ಸೇರುವುದು ಇಷ್ಟವಿರಲಿಲ್ಲವೇ?:ಟ್ವಿಟ್ಟರ್ ನಲ್ಲಿ ಜೈಶಂಕರ್-ರಾಮಚಂದ್ರ ಗುಹಾ ಜಟಾಪಟಿ
ಕೇಂದ್ರ ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ಇತಿಹಾಸತಜ್ಞ ರಾಮಚಂದ್ರ ಗುಹಾ ನಡುವೆ ಕುತೂಹಲಕಾರಿ ಟ್ವೀಟ್ ವಾರ್ ನಡೆದಿದೆ.

ರಾಹುಲ್ ಗಾಂಧಿ ರಾಜಕೀಯದಲ್ಲಿರುವುದೇ ನರೇಂದ್ರ ಮೋದಿಗೆ ದೊಡ್ಡ ಲಾಭ: ರಾಮಚಂದ್ರ ಗುಹಾ
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಆರಿಸಿ ಸಂಸತ್ತಿಗೆ ಕಳುಹಿಸಿ ಕೇರಳ ಬಹಳ ದೊಡ್ಡ ತಪ್ಪು ಮಾಡಿದೆ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.

ಪೌರತ್ವ ಕಾಯ್ದೆ ವಿರುದ್ಧ ಪ್ರತಿಭಟನೆ: ಶಾಸಕ ರಿಜ್ವಾನ್ ಆರ್ಶದ್, ಇತಿಹಾಸತಜ್ಞ ರಾಮಚಂದ್ರ ಗುಹಾ ವಿರುದ್ಧ ಕೇಸು ದಾಖಲು
ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆ ಹಿನ್ನಲೆಯಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಸೆಕ್ಷನ್ 144 ಜಾರಿ ಮಾಡಲಾಗಿದ್ದು ಕಾಂಗ್ರೆಸ್ ಶಾಸಕ ರಿಜ್ವಾನ್ ಆರ್ಶದ್ ಮತ್ತು ಇತಿಹಾಸತಜ್ಞ ರಾಮಚಂದ್ರ ಗುಹಾ ವಿರುದ್ಧ ಕೇಸು ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ತಿಳಿಸಿದ್ದಾರೆ.

ರಾಹುಲ್ ಗಾಂಧಿ ಪ್ರಮುಖ ಎದುರಾಳಿ ಆಗಿದಿದ್ದರೆ ಮೋದಿಯವರು ಇಂದು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ: ರಾಮಚಂದ್ರ ಗುಹಾ
ಭಾರತ ದೇಶದಲ್ಲಿ ಸದ್ಯ ರಾಷ್ಟ್ರವಾದದ ಬದಲಿಗೆ ಅತಿರೇಕದ ರಾಷ್ಟ್ರಪ್ರೇಮ ಅಬ್ಬರ ಕಂಡುಬರುತ್ತಿದ್ದು ಇದು ದೇಶಕ್ಕೆ ಮಾರಕ, ರಾಹುಲ್ ಗಾಂಧಿ ಪ್ರಮುಖ ಎದುರಾಳಿಯಾಗಿದಿದ್ದರೆ ಇಂದು ನರೇಂದ್ರ ಮೋದಿಯವರು ಈ ಸ್ಥಾನದಲ್ಲಿ ಇರುತ್ತಿರಲಿಲ್ಲ ಎಂದು ಇತಿಹಾಸ ತಜ್ಞ ರಾಮಚಂದ್ರ ಗುಹಾ ಹೇಳಿದ್ದಾರೆ.

ರಾಜ್ಯಾದ್ಯಂತ ತೀವ್ರಗೊಂಡ ಸಿಎಎ ಪ್ರತಿಭಟನೆ: ಬೆಂಗಳೂರಿನಲ್ಲಿ ಇತಿಹಾಸತಜ್ಞ ರಾಮಚಂದ್ರ ಗುಹಾ ಬಂಧನ
ಕೇಂದ್ರ ಸರ್ಕಾರ ಇತ್ತೀಚೆಗೆ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ಪ್ರತಿಭಟನೆ ತೀವ್ರವಾಗಿದ್ದು ಗುರುವಾರ ಬೆಂಗಳೂರಿನಲ್ಲಿ ಖ್ಯಾತ ಇತಿಹಾಸತಜ್ಞ ರಾಮಚಂದ್ರ ಗುಹಾ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಗುಂಪು ಹತ್ಯೆ ಕುರಿತು ಮೋದಿಗೆ ಬಹಿರಂಗ ಪತ್ರ: ಅಪರ್ಣ, ರಾಮಚಂದ್ರ ಗುಹಾ ಸೇರಿ 49 ಗಣ್ಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲು
ದೇಶದಲ್ಲಿ ಹೆಚ್ಚುತ್ತಿರುವ ಗುಂಪು ಹತ್ಯೆ ಸಂಬಂಧ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ಬಹಿರಂಗ ಪತ್ರ ಬರೆದಿದ್ದ ಮಣಿರತ್ನಂ, ರಾಮಚಂದ್ರ ಗುಹಾ, ಅಪರ್ಣ ಸೇನ್ ಸೇರಿದಂತೆ 49 ಗಣ್ಯರ ವಿರುದ್ಧ ಮುಜಾಫರ್ ಪುರದಲ್ಲಿ ಶುಕ್ರವಾರ ದೇಶದ್ರೋಹ ಪ್ರಕರಣ ದಾಖಲಾಗಿದೆ.

ಗೋಮಾಂಸ ಸೇವನೆ ಕುರಿತು ಟ್ವೀಟ್: ಖ್ಯಾತ ಅಂಕಣಕಾರ ರಾಮಚಂದ್ರ ಗುಹಾಗೆ ಬೆದರಿಕೆ ಕರೆ
ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ...

