ರಾಜ್ಯ

ಗೋಮಾಂಸ ಸೇವನೆ ಕುರಿತು ಟ್ವೀಟ್: ಖ್ಯಾತ ಅಂಕಣಕಾರ ರಾಮಚಂದ್ರ ಗುಹಾಗೆ ಬೆದರಿಕೆ ಕರೆ

ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ...

ಗೋಮಾಂಸ ಸೇವನೆ ಕುರಿತು ಟ್ವೀಟ್: ಖ್ಯಾತ ಅಂಕಣಕಾರ ರಾಮಚಂದ್ರ ಗುಹಾಗೆ ಬೆದರಿಕೆ ಕರೆ
ರಾಮಚಂದ್ರ ಗುಹಾ
Published On :
ಬೆಂಗಳೂರು: ಗೋಮಾಂಸ ಸೇವನೆ ಕುರಿತು ಟ್ವೀಟ್ ಮಾಡಿ ವಿವಾದಕ್ಕೆ ಸಿಲುಕಿಕೊಂಡಿದ್ದ ಖ್ಯಾತ ಅಂಕಣಕಾರ ಹಾಗೂ ಇತಿಹಾಸ ತಜ್ಞ ರಾಮಚಂದ್ರ ಗುಹಾ ಅವರಿಗೆ ಅಪರಿಚಿತ ವ್ಯಕ್ತಿಯೊಬ್ಬ ಬೆದರಿಕೆ ಕರೆ ಮಾಡಿದ್ದಾರೆಂದು ತಿಳಿದುಬಂದಿದೆ. 
ಇತ್ತೀಚೆಗೆ ರಾಮಚಂದ್ರ ಗುಹಾ ಅವರು ಸಾಮಾಜಿಕ ಜಾಲತಾಣ ಟ್ವಿಟ್ಟರ್ ನಲ್ಲಿ ಟ್ವೀಟ್ ವೊಂದನ್ನು ಮಾಡಿದ್ದರು. ಈ ಟ್ವೀಟ್ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. 
ಬಿಜೆಪಿ ಸರ್ಕಾರವಿರುವ ಗೋವಾ ರಾಜ್ಯದಲ್ಲಿ ಗೋಮಾಂಸ ತಿಂದು ಸಂಭ್ರಮಿಸುತ್ತಿದ್ದೇನೆಂದು ಟ್ವೀಟ್ ಮಾಡಿದ್ದರು. ಇದಕ್ಕೆ ಟ್ವಿಟರ್ ನಲ್ಲಿ ಹಲವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಗುಹಾ ಅವರು ಟ್ವೀಟನ್ನು ಡಿಲೀಟ್ ಮಾಡಿದ್ದರು. ಇದರ ಬೆನ್ನಲ್ಲೇ ಅಪರಿಚ ವ್ಯಕ್ತಿಯೊಬ್ಬ ಗುಹಾ ಅವರಿಗೆ ಬೆದರಿಕೆ ಕರೆ ಮಾಡಿದ್ದಾನೆಂದು ವರದಿಗಳು ತಿಳಿಸಿವೆ. 
ಬೆದರಿಕೆ ಕರೆ ಬಂದಿರುವ ಕುರಿತಂತೆ ಸ್ವತಃ ರಾಮಚಂದ್ರ ಗುಹಾ ಅವರೇ ಟ್ವೀಟ್ ಮಾಡಿದ್ದು, ದೆಹಲಿ ಮೂಲದ ವ್ಯಕ್ತಿಯಾಗಿರುವ ಸಂಜಯ್ ಎಂಬಾತ ನನಗೆ ಬೆದರಿಕೆ ಕರೆ ಮಾಡಿದ್ದು, +91-98351-38678 ಸಂಖ್ಯೆಯಿಂದ ನನಗೆ ಬೆದರಿಕೆ ಕರೆ ಬಂದಿದೆ. ಕೇವಲ ನನಗಷ್ಟೇ ಅಲ್ಲದೆ, ನನ್ನ ಪತ್ನಿಗೂ ಬೆದರಿಕೆ ಹಾಕಿದ್ದಾನೆಂದು ಹೇಳಿದ್ದಾರೆ. 
ಮಾಹಿತಿ ತಿಳಿದ ಕೂಡಲೇ ಹಲಸೂರು ಪೊಲೀಸ್ ಠಾಣೆಯ ಇನ್ಸ್'ಪೆಕ್ಟರ್ ರಾಮಚಂದ್ರಾ ಗುಹಾ ಅವರನ್ನು ಸಂಪರ್ಕಿಸಿದ್ದಾರೆ. 
ಪ್ರಕರಣ ಸಂಬಂಧ ಗುಹಾ ಅವರು ಲಿಖಿತವಾಗಿ ಯಾವುದೇ ದೂರು ನೀಡಿಲ್ಲ. ಹಲಸೂರಿನ ಅವರ ಮನೆಯಲ್ಲಿ ಪತ್ನಿ ಹಾಗೂ ಮಕ್ಕಳಿದ್ದು, ಬೀಟ್ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.