ನೀವು ಈ ವಿಡಿಯೋ ನೋಡುವ ಹೊತ್ತಿಗೆ ನಾನು ಸ್ವರ್ಗದಲ್ಲಿರುತ್ತೇನೆ: ಆತ್ಮಹತ್ಯಾ ದಾಳಿಕೋರನ ಕೊನೆಯ ಮಾತು
ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪಟ್ಟಣದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ...

ಶ್ರೀನಗರ: ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೋರಾ ಪಟ್ಟಣದಲ್ಲಿ ಸಿಆರ್ಪಿಎಫ್ ಬೆಂಗಾವಲು ಪಡೆಯ ಮೇಲೆ ನಡೆದ ಭೀಕರ ಆತ್ಮಾಹುತಿ ಉಗ್ರರ ದಾಳಿಯ ನಂತರ ದಾಳಿಯ ಹೊಣೆ ಹೊತ್ತ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆ ವಿಡಿಯೊವೊಂದನ್ನು ಬಿಡುಗಡೆ ಮಾಡಿದೆ. ಅದರಲ್ಲಿ ಆತ್ಮಾಹುತಿ ದಾಳಿ ನಡೆಸಿದ ಉಗ್ರ ದಾಳಿಗೆ ಮುನ್ನ ಮಾತನಾಡಿದ ಕೊನೆಯ ವಿಡಿಯೊ ವೈರಲ್ ಆಗಿದೆ.
ಹಿಂದೆ ಜೈಶ್ ಸಂಘಟನೆಯ ಧ್ವಜವನ್ನು ಹೊಂದಿರುವ ವಿಡಿಯೋದಲ್ಲಿ ದಕ್ಷಿಣ ಕಾಶ್ಮೀರದ ಕಾಕಪೊರದ ಆದಿಲ್ ಅಲಿಯಾಸ್ ವಕಾಸ್ ಎಂಬ ಉಗ್ರ ಮಾತನಾಡಿದ್ದಾನೆ. ಅವನ ಸುತ್ತ ಹಲವು ಅತ್ಯಾಧುನಿಕ ಸ್ವಯಂಚಾಲಿತ ರೈಫೆಲ್ಸ್ಗಳು ಇವೆ. ಈ ವಿಡಿಯೋ ನಿಮ್ಮನ್ನು ತಲುಪುವ ಹೊತ್ತಿಗೆ ನಾನು ಸ್ವರ್ಗದಲ್ಲಿರುತ್ತೇನೆ. ಕಳೆದ ಒಂದು ವರ್ಷ ನಾನು ಜೈಶ್- ಇ- ಮೊಹಮ್ಮದ್ ಸಂಘಟನೆಯಲ್ಲಿ ಕಳೆದಿದ್ದೇನೆ ಮತ್ತು ಕಾಶ್ಮೀರದ ಜನರಿಗೆ ಇದು ನನ್ನ ಕಡೆಯ ಸಂದೇಶ," ಎಂದು ಹೇಳಿದ್ದಾನೆ.
ಅಲ್ಲದೆ ಉತ್ತರ ಕಾಶ್ಮೀರ ಜನತೆಗೆ ಕೂಡ ಸಂದೇಶ ಕಳುಹಿಸಿದ್ದು ಅದರಲ್ಲಿ ದಕ್ಷಿಣ ಕಾಶ್ಮೀರದ ಜನರು ತಮ್ಮ ಹಕ್ಕುಗಳಿಗಾಗಿ ಭಾರತ ಸರ್ಕಾರದ ಮೇಲೆ ದಾಳಿ ನಡೆಸುತ್ತಿದ್ದಾರೆ. ಇದೀಗ ಅವರ ಜೊತೆ ಉತ್ತರ, ಕೇಂದ್ರ ಕಾಶ್ಮೀರ ಮತ್ತು ಜಮ್ಮು ಭಾಗದ ಜನರು ಕೂಡ ಕೈಜೋಡಿಸುವ ಕಾಲ ಸನ್ನಿಹಿತವಾಗಿದೆ. ನಮ್ಮ ಕೆಲವು ಉಗ್ರಗಾಮಿ ಕಮಾಂಡರ್ ಗಳನ್ನು ಕೊಂದ ಮಾತ್ರಕ್ಕೆ ನಮ್ಮನ್ನು ದುರ್ಬಲಗೊಳಿಸಬಹುದು ಎಂದು ಭಾವಿಸಬೇಕಾಗಿಲ್ಲ ಎಂದು ಕೂಡ ಹೇಳಿದ್ದಾನೆ. ವಿಡಿಯೊದಲ್ಲಿ ಕಾಶ್ಮೀರದ ಭದ್ರತಾ ಪಡೆ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಪ್ರಸ್ತಾಪಿಸಿದ್ದಾನೆ.
ಜೈಶ್ ಇ- ಮೊಹಮ್ಮದ್ ಉಗ್ರಗಾಮಿ ಸಂಘಟನೆ ಈ ಹಿಂದೆ ಭಾರತದ ಮೇಲೆ ಹಲವು ಭೀಕರ ದಾಳಿ ನಡೆಸಿದೆ. ಐಸಿಎ18 ವಿಮಾನ ಹೈಜಾಕ್, 2001ರಲ್ಲಿ ಸಂಸತ್ತು ಮೇಲೆ ದಾಳಿ, ನಾಗರೊಟ ದಾಳಿ, ಉರಿ ದಾಳಿ ಹಾಗೂ ಪಠಾಣ್ಕೋಟ್ ವಾಯುಪಡೆ ಮೇಲೆ ದಾಳಿ ನಡೆಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


