ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದ ರೆಹಾನಾ ಫಾತಿಮಾ ಕಿಸ್ ಆಫ್ ಲವ್ ಆಯೋಜಕಿ!
ಭಾರೀ ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಫಾತಿಮಾ ಸುಲೈಮಾನ್ ಕಿಸ್ ಆಫ್ ಲವ್...

Published On :
ತಿರುವನಂತಪುರಂ: ಭಾರೀ ವಿರೋಧದ ನಡುವೆಯೂ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನ ಪ್ರವೇಶಿಸಲು ಯತ್ನಿಸಿದ್ದ ರೆಹಾನಾ ಫಾತಿಮಾ ಸುಲೈಮಾನ್ ಕಿಸ್ ಆಫ್ ಲವ್ ಕಾರ್ಯಕ್ರಮವೊಂದನ್ನು ಆಯೋಜಿಸಿ ವಿವಾದಕ್ಕೆ ಕಾರಣವಾಗಿದ್ದಳು.
ಈ ಹಿಂದೆ ಕಿಸ್ ಆಫ್ ಲವ್ ನಿಂದ ಸುದ್ದಿಯಾಗಿದ್ದ ರೆಹನಾ ಫಾತಿಮಾ ಅಯ್ಯಪ್ಪ ಮಾಲಾಧಾರಿಯ ಗೆಟಪ್‌ನಲ್ಲಿ ಶಬರಿಮಲೆ ಪ್ರವೇಶಕ್ಕೆ ಯತ್ನಿಸಿದ್ದಳು. ಇನ್ನು ಕೇರಳ ಸರ್ಕಾರ ರೆಹಾನಾಗೆ ಅಯ್ಯಪ್ಪ ಭಕ್ತಗಣದಿಂದ ರಕ್ಷಣೆ ನೀಡಲೆಂದು 250 ಪೊಲೀಸ್ ಕಮಾಂಡೋಗಳ ವ್ಯವಸ್ಥೆ ಮಾಡಲಾಗಿತ್ತು. ತಲೆಗೆ ಹೆಲ್ಮೆಟ್ ಹಾಗೂ ಪೊಲೀಸರ ರಕ್ಷಾ ಕವಚ ತೊಟ್ಟಿದ್ದ ರೆಹಾನಾ ದೇಗುಲ ಪ್ರವೇಶಕ್ಕೆ ಮುಂದಾಗಿದ್ದಳು.
ಆದರೆ ದೇವಸ್ಥಾನದ ಅರ್ಚಕರು ಭಾರೀ ವಿರೋಧ ವ್ಯಕ್ತಪಡಿಸಿ ಯಾರಾದರೂ ಒಳ ಹೋಗಲು ಯತ್ನಿಸಿದರೆ ಗರ್ಭಗುಡಿಗೆ ಬೀಗ ಜಡಿದು ಪಂದಳಂ ರಾಜಮನೆತನಕ್ಕೆ ಬೀಗ ಒಪ್ಪಿಸುವುದಾಗಿ ಬೆದರಿಕೆ ಹಾಕಿದ್ದರು. ಇದರಿಂದ ರೆಹಾನಾ ಹಾಗೂ ಹೈದರಾಬಾದ್ ಮೂಲದ ಮಹಿಳಾ ವರದಿಗಾರ್ತಿ ಕವಿತಾ ಕೋಶಿ ದೇಗುಲ ಪ್ರವೇಶಸದೆ ಹಿಂತಿರುಗಿದ್ದರು.
ಇನ್ನು ರೆಹಾನಾ ನಡೆಗೆ ತೀವ್ರ ವಿರೋಧ ವ್ಯಕ್ತವಾಗಿದ್ದು ಸ್ಯಾಂಡಲ್ವುಡ್ ಹಿರಿಯ ನಟ ಜಗ್ಗೇಶ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruActor jaggeshನಟ ಜಗ್ಗೇಶ್ಶಬರಿಮಲೆ ವಿವಾದSabarimala RowWomen Activist Rehana Fathimaಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


