ದೇಶ

ಎಟಿಎಸ್ ಕಾರ್ಯಾಚರಣೆ: ಹನಿಟ್ರ್ಯಾಪ್‌ಗಾಗಿ ಐಎಸ್ಐ ಫೇಸ್ ಬುಕ್ ಬಳಸಿ ದುಷ್ಕೃತ್ಯ ಬಹಿರಂಗ!

ಕಾಯ್ದೆಯನ್ನು ಉಲ್ಲಂಘಿಸಿ ಭಾರತದ ಅತ್ಯಾಧುನಿಕ ಕ್ಷಿಪಣಿ ಬ್ರಹ್ಮೋಸ್ ಬಗ್ಗೆ ಲ್ಯಾಪ್ ಟಾಪ್ ನಲ್ಲಿ ಮಾಹಿತಿ ಸಂಗ್ರಹಿಸಿಕೊಂಡಿದ್ದ ಮೆಕ್ಯಾನಿಕಲ್ ಇಂಜಿನಿಯರ್ ನಿಶಾಂತ್ ಅಗರ್ವಾಲ್ ಬಂಧನದ ನಂತರ ಶತ್ರು

ಎಟಿಎಸ್ ಕಾರ್ಯಾಚರಣೆ: ಹನಿಟ್ರ್ಯಾಪ್‌ಗಾಗಿ ಐಎಸ್ಐ ಫೇಸ್ ಬುಕ್ ಬಳಸಿ ದುಷ್ಕೃತ್ಯ ಬಹಿರಂಗ!
ಎಟಿಎಸ್ ಕಾರ್ಯಾಚರಣೆ: ಹನಿಟ್ರ್ಯಾಪ್‌ಗಾಗಿ ಐಎಸ್ಐ ಫೇಸ್ ಬುಕ್ ಬಳಸಿ ದುಷ್ಕೃತ್ಯ ಬಹಿರಂಗ!
Published On :
ನವದೆಹಲಿ: ಕಾಯ್ದೆಯನ್ನು ಉಲ್ಲಂಘಿಸಿ ಭಾರತದ ಅತ್ಯಾಧುನಿಕ ಕ್ಷಿಪಣಿ ಬ್ರಹ್ಮೋಸ್ ಬಗ್ಗೆ ಲ್ಯಾಪ್ ಟಾಪ್ ನಲ್ಲಿ ಮಾಹಿತಿ ಸಂಗ್ರಹಿಸಿಕೊಂಡಿದ್ದ ಮೆಕ್ಯಾನಿಕಲ್ ಇಂಜಿನಿಯರ್ ನಿಶಾಂತ್ ಅಗರ್ವಾಲ್ ಬಂಧನದ ನಂತರ ಶತ್ರು ರಾಷ್ಟ್ರದೊಂದಿಗೆ ಕೈ ಜೋಡಿಸಿದ್ದ ಜಾಲ ಪತ್ತೆ ಕಾರ್ಯ ಚುರುಕಾಗಿದೆ.
ಫೇಸ್ ಬುಕ್ ಖಾತೆಗಳ ಮೂಲಕ ಹನಿ ಟ್ರ್ಯಾಪ್ ಮಾಡುವ ಐಎಸ್ಐ ಕಾರ್ಯವಿಧಾನವನ್ನು ಉತ್ತರ ಪ್ರದೇಶ ಭಯೋತ್ಪಾದನೆ ನಿಗ್ರಹ ದಳ (ಎಟಿಎಸ್) ಐಎಸ್ಐ ನಿರ್ವಹಣೆ ಮಾಡುತ್ತಿರುವ 13 ಪಾಕಿಸ್ತಾನಿ ಫೇಸ್ ಬುಕ್ ಖಾತೆಗಳು ಹಾಗೂ ಅವುಗಳಿಗೆ ಸಂಬಂಧಪಟ್ಟ ಒಟ್ಟು 1,100 ಫೇಸ್ ಬುಕ್ ಖಾತೆಗಳ ಮೇಲೆ ಸಂಪೂರ್ಣ ನಿಗಾ ಇರಿಸಿದೆ. 
ಬ್ರಹ್ಮೋಸ್ ಏರೋಸ್ಪೇಸ್ ಪ್ರೈ.ಲಿ ನ ಇಂಜಿನಿಯರ್ ನಿಶಾಂತ್ ಅಗರ್ವಾಲ್ ಹಾಗೂ ಬಿಎಸ್ಎಫ್ ನ ಅಚ್ಯುತಾನಂದ್ ಮಿಶ್ರಾ ಅವರ ಬಂಧನದ ನಂತರ 13 ಪಾಕಿಸ್ತಾನಿ ಫೇಸ್ ಬುಕ್ ಖಾತೆ ಹಾಗೂ ಅದರಲ್ಲಿನ ಅನುಮಾನಾಸ್ಪದ 1,100 ಖಾತೆಗಳ ಬಗ್ಗೆ ಮಾಹಿತಿ ಪಡೆದಿದ್ದು, ಅವೆಲ್ಲವೂ ಹನಿ ಟ್ರ್ಯಾಪ್ ಗಾಗಿ ದುರ್ಬಳಕೆಯಾಗುತ್ತಿದ್ದವು ಎಂದು ಉತ್ತರ ಪ್ರದೇಶ ಎಟಿಎಸ್ ಐಜಿ ಅಸೀಮ್ ಅರುಣ್ ಹೇಳಿದ್ದಾರೆ. 
ಅನುಮಾನಾಸ್ಪದ ಪ್ರೊಫೈಲ್ ಗಳು ಹಾಗೂ ಅದರಲ್ಲಿರುವ ಸ್ನೇಹಿತರ ಪಟ್ಟಿಯಲ್ಲಿನ ಅನುಮಾನಾಸ್ಪದ ಪ್ರೊಫೈಲ್ ಗಳ ಪರೀಕ್ಷೆ ಈಗಾಗಲೇ ನಡೆಯುತ್ತಿದೆ. ಭಾರತದ ರಕ್ಷಣಾ ಕ್ಷೇತ್ರದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವವರ್ಯಾದರೂ ಆ ಅನುಮಾನಾಸ್ಪದ ಖಾತೆಗಳೊಂದಿಗೆ ಸ್ನೇಹಿತರಾಗಿದ್ದಾರಾ? ಆಗಿದ್ದರೆ ಸೂಕ್ಷ್ಮ ಮಾಹಿತಿಗಳನ್ನು ಹಂಚಿಕೊಂಡಿದ್ದಾರಾ ಎಂಬುದನ್ನು ಪರಿಶೀಲನೆ ನಡೆಸಲಾಗುತ್ತದೆ ಎಂದು ಅರುಣ್ ವಿವರಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.