ದೇಶ

ಪಿಡಿಪಿ ಕಾಶ್ಮೀರ ಹಿತಾಸಕ್ತಿ ಕಡೆಗಣಿಸಿದ್ದಕ್ಕೆ ಬಿಜೆಪಿ ಸರ್ಕಾರದಿಂದ ಹೊರ ಬಂತು: ಅಮಿತ್ ಶಾ

ಪಿಡಿಪಿ ಜಮ್ಮು ಮತ್ತು ಕಾಶ್ಮೀರದ ಹಿತಾಸಕ್ತಿ ಕಡೆಗಣಿಸಿತ್ತು. ಹೀಗಾಗಿಯೇ ಬಿಜೆಪಿ ಸರ್ಕಾರ ಸಮ್ಮಿಶ್ರ ಸರ್ಕಾರದಿಂದ ಬಂತು...

ಪಿಡಿಪಿ ಕಾಶ್ಮೀರ ಹಿತಾಸಕ್ತಿ ಕಡೆಗಣಿಸಿದ್ದಕ್ಕೆ ಬಿಜೆಪಿ ಸರ್ಕಾರದಿಂದ ಹೊರ ಬಂತು: ಅಮಿತ್ ಶಾ
ಅಮಿತ್ ಶಾ
Published On :
ಶ್ರೀನಗರ: ಪಿಡಿಪಿ ಜಮ್ಮು ಮತ್ತು ಕಾಶ್ಮೀರದ ಹಿತಾಸಕ್ತಿ ಕಡೆಗಣಿಸಿತ್ತು. ಹೀಗಾಗಿಯೇ ಬಿಜೆಪಿ ಸರ್ಕಾರ ಸಮ್ಮಿಶ್ರ ಸರ್ಕಾರದಿಂದ ಬಂತು ಎಂದು ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಶನಿವಾರ ಹೇಳಿದ್ದಾರೆ.
ಇಂದು ಜಮ್ಮುವಿನಲ್ಲಿ ಶ್ಯಾಮ್‌ಪ್ರಸಾದ್‌ ಮುಖರ್ಜಿ ಸ್ಮರಣಾರ್ಥ ನಡೆದ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ಸಾವಿರಾರು ಕೋಟಿ ರುಪಾಯಿ ನೀಡಿದ್ದರು. ಆದರೂ ಪಿಡಿಪಿ ಸರ್ಕಾರ ಜಮ್ಮುವಿನ ಅಭಿವೃದ್ಧಿಯನ್ನು ಕಡೆಗಣಿಸಿತ್ತು ಎಂದು ಆರೋಪಿಸಿದರು.
ತಾರತಮ್ಯ ಹೊಂದಿರುವ ಸರ್ಕಾರದ ಒಂದು ಭಾಗವಾಗಿ ಇರಬಾರದೆಂದು ಬಿಜೆಪಿ ಹೊರ ಬಂದಿದೆ. ಮೋದಿ ಸರ್ಕಾರ ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗೆ 60 ಸಾವಿರ ಕೋಟಿ ರುಪಾಯಿ ಹಣಕಾಸು ನೆರವು ನೀಡಿತ್ತು. ಸ್ವತಹ ಪ್ರಧಾನಿ ಅವರೇ ಕಾಶ್ಮಿರಕ್ಕೆ ಹಲವು ಬಾರೀ ಭೇಟಿ ನೀಡಿದ್ದರು. ಆದರೆ ಪಿಡಿಪಿ ಸರ್ಕಾರ ಜಮ್ಮು ಮತ್ತು ಲಡಾಖ್‌ ಪ್ರಾಂತ್ಯಗಳನ್ನು ಕಡೆಗಣಿಸಿತ್ತು ಎಂದು ಅಮಿತ್ ಶಾ ದೂರಿದ್ದಾರೆ.
ಜಮ್ಮು ಮತ್ತು  ಕಾಶ್ಮೀರಕ್ಕೆ ಎರಡು ಎಐಐಎಂಎಸ್‌ ಕೇಂದ್ರಗಳನ್ನು ಮಂಜೂರು ಮಾಡಿತ್ತು ಆದರೆ ಕಾಶ್ಮೀರ ಸರ್ಕಾರ ಜಮ್ಮುವಿನಲ್ಲಿ ಎಐಐಎಂಎಸ್‌ ಸ್ಥಾಪಿಸಲು ಭೂಮಿಯನ್ನೇ ನೀಡಲಿಲ್ಲ ಎಂದರು.
ಬಿಜೆಪಿ ದೇಶಭಕ್ತ ಪಕ್ಷವಾಗಿದೆ, ನಾವು ಅಧಿಕಾರಕ್ಕಾಗಿ ಹಪಾಹಪಿಸುವುದಿಲ್ಲ, ನಮ್ಮ ಯೋಚನೆ ರಾಜ್ಯದ ಅಭಿವೃದ್ಧಿ ಮಾತ್ರ ಎಂದು ಅಮಿತ್‌ ಶಾ ಹೇಳಿದರು. 
ಜಮ್ಮು ಮತ್ತು ಕಾಶ್ಮೀರದ ಅಭಿವೃದ್ಧಿಗಾಗಿ ಶ್ಯಾಮ್‌ಪ್ರಸಾದ್‌ ಮುಖರ್ಜಿ ಬಲಿದಾನವಾಗಿದ್ದಾರೆ. ಅವರು ಜೈಲಿನಲ್ಲಿ ನಿಧನರಾಗಲಿಲ್ಲ, ಅವರನ್ನು ಹತ್ಯೆ ಮಾಡಲಾಯಿತು ಎಂದು ಅಮಿತ್‌ ಶಾ ತಿಳಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.