ನೀರವ್ ಮೋದಿ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ಐಟಿ ಇಲಾಖೆ ನಿರ್ಧಾರ
ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಆಭರಣ ಉದ್ಯಮಿ ನೀರವ್ ಮೋದಿಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ನೀರವ್ ಮೋದಿ ಆಭರಣ ಸಂಸ್ಛೆಯಿಂದ ದುಬಾರಿ ಆಭರಣ ಖರೀದಿಸಿದ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ನಿರ್ಧರಿಸಲಾಗಿದೆ.

Published On :
ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ಬಹುಕೋಟಿ ವಂಚನೆ ಮಾಡಿರುವ ಆರೋಪ ಎದುರಿಸುತ್ತಿರುವ ಆಭರಣ ಉದ್ಯಮಿ ನೀರವ್ ಮೋದಿಗೆ ಮತ್ತೆ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದ್ದು, ನೀರವ್ ಮೋದಿ ಆಭರಣ ಸಂಸ್ಛೆಯಿಂದ ದುಬಾರಿ ಆಭರಣ ಖರೀದಿಸಿದ ಗ್ರಾಹಕರ ಆದಾಯ ತೆರಿಗೆ ಮರುಮೌಲ್ಯ-ಮಾಪನಕ್ಕೆ ನಿರ್ಧರಿಸಲಾಗಿದೆ.
ಮೂಲಗಳ ಪ್ರಕಾರ ಈಗಾಗಲೇ ನೀರವ್ ಮೋದಿ ಗ್ರಾಹಕರಿಗೆ ಆದಾಯತೆರಿಗೆ ಇಲಾಖೆಗೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಲ ನಿರ್ಧರಿಸಿದ್ದು, ದುಬಾರಿ ಆಭರಣಗಳನ್ನು ಖರೀದಿ ಮಾಡಿದ ಹಣದ ಮೂಲದ ಕುರಿತು ದಾಖಲೆ ಸಲ್ಲಿಸುವಂತೆ ಸೂಚನೆ ನೀಡಲಿದೆ. ಈ ಬಗ್ಗೆ ಇಲಾಖೆ ಅಧಿಕಾರಿಗಳು ಈಗಾಗಲೇ ದಾಖಲೆಗಳನ್ನು ಸಂಗ್ರಹಿಸಿದ್ದು, ನೀರವ್ ಮೋದಿ ಆಭರಣ ಸಂಸ್ಥೆಯಿಂದ ದುಬಾರಿ ಆಭರಣಗಳನ್ನು (high-end jewellery)ಗಳನ್ನು ಖರೀದಿ ಮಾಡಿದ ಗ್ರಾಹಕರನ್ನು ಗುರಿಯಾಗಿಸಿಕೊಂಡು ನೋಟಿಸ್ ಜಾರಿ ಮಾಡಲು ನಿರ್ಧರಿಸಲಾಗಿದೆ.
ಈ ಪ್ರಕ್ರಿಯೆಗಾಗಿ ನೀರವ್ ಮೋದಿ ಮತ್ತು ಅದರ ಸಹಯೋಗ ಆಭರಣ ಮಾರಾಟ ಸಂಸ್ಥೆಗಳಿಂದ ವಹಿವಾಟು ಪುಸ್ತಿಕೆಗಳನ್ನು ಆದಾಯ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದು, ಈ ಪುಸ್ತಿಕೆಯಲ್ಲಿರುವ ದುಬಾರಿ ಗ್ರಾಹಕರನ್ನು ಪಟ್ಟಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ನೀರವ್ ಮೋದಿ ವಿರುದ್ಧ ಪ್ರಕರಣ ದಾಖಲಾದ ದಿನದಿಂದಲೇ ಅಂದರೆ 2014-2015ರಿಂದಲೇ ಆತನ ಸಂಸ್ಥೆಯ ದುಬಾರಿ ಗ್ರಾಹಕರನ್ನು ಅಧಿಕಾರಿಗಳು ಶಾರ್ಟ್ ಲಿಸ್ಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಇತ್ತೀಚೆಗೆಷ್ಟೇ ಐಟಿ ಅಧಿಕಾರಿಗಳು ಉದ್ಯಮಿ ನೀರವ್ ಮೋದಿ ಮತ್ತು ಆತನ ಸಂಬಂದಿಗಳು ಮತ್ತು ಆಪ್ತರ ಮನೆಗಳ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhiಆದಾಯ ತೆರಿಗೆ ಇಲಾಖೆವಂಚನೆ ಪ್ರಕರಣFraud CaseIT departmentNirav Modiನೀರವ್ ಮೋದಿjewellery Customerಆಭರಣ ಗ್ರಾಹಕರು
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


