'ಪತಿಯೇ ಶಾಸಕನಿಂದ ಮೂರು ಬಾರಿ ಅತ್ಯಾಚಾರ ಮಾಡಿಸಿದ'; ಅಸ್ಸಾಂ ಮಹಿಳೆ ಗಂಭೀರ ಆರೋಪ
ಅಸ್ಸಾಂನ ಎಐಯುಡಿಎಫ್ ಶಾಸಕ ನಿಜಾಮುದ್ದೀನ್ ಚೌದರಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದು, ಈ ಅತ್ಯಾಚಾರಕ್ಕೆ ತಮ್ಮ ಪತಿ ಕೂಡ ಕುಮ್ಮಕ್ಕು ನೀಡಿದ್ದ ಎಂದು ಆರೋಪಿಸಿ ತನ್ನ ಪತಿಯ ವಿರುದ್ಧವೂ ದೂರು ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ.

Published On :
ಗುವಾಹತಿ: ಅಸ್ಸಾಂನ ಎಐಯುಡಿಎಫ್ ಶಾಸಕ ನಿಜಾಮುದ್ದೀನ್ ಚೌದರಿ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ದೂರು ದಾಖಲಿಸಿದ್ದು, ಈ ಅತ್ಯಾಚಾರಕ್ಕೆ ತಮ್ಮ ಪತಿ ಕೂಡ ಕುಮ್ಮಕ್ಕು ನೀಡಿದ್ದ ಎಂದು ಆರೋಪಿಸಿ ತನ್ನ ಪತಿಯ ವಿರುದ್ಧವೂ ದೂರು ದಾಖಲಿಸಿದ್ದಾಳೆ ಎಂದು ತಿಳಿದುಬಂದಿದೆ.
ಅಸ್ಸಾಂನ ಬರಾಕ್ ವ್ಯಾಲಿ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದು, ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಪಕ್ಷದ ಶಾಸಕ ನಿಜಾಮುದ್ದೀನ್ ಚೌದರಿ ತಮ್ಮ ಮೇಲೆ ಮೂರು ಬಾರಿ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದಾರೆ. ಇದೇ ಮಹಿಳೆ ತಮ್ಮ ಪತಿ ವಿರುದ್ಧವೂ ದೂರು ದಾಖಲಿಸಿದ್ದು, ತಮ್ಮ ಮೇಲೆ ಶಾಸಕ ಅತ್ಯಾಚಾರ ಮಾಡಲು ತಮ್ಮ ಪತಿಯೇ ಕುತಂತ್ರ ರೂಪಿಸಿದ್ದ ಎಂದೂ ಮಹಿಳೆ ಆರೋಪಿಸಿದ್ದಾರೆ.
ನನ್ನ ಮನೆಗೆ ಬರುತ್ತಿದ್ದ ಶಾಸಕ ನಿಜಾಮುದ್ದೀನ್ ಚೌದರಿ 2 ಬಾರಿ ಅತ್ಯಾಚಾರ ಮಾಡಿದ್ದ. ಬಳಿಕ ಹೈಲಾಕಂಡಿಯಲ್ಲಿ ಕರೆಸಿಕೊಂಡು ತನ್ನ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ. ನನಗೆ ಸುಳ್ಳು ಹೇಳಿ ನನ್ನ ಪತಿಯೇ ನನ್ನನ್ನು ಕರೆದುಕೊಂಡು ಹೋಗಿ ಆತನಿಗೆ ಒಪ್ಪಿಸಿದ್ದ ಎಂದು ಮಹಿಳೆ ಆರೋಪಿಸಿದ್ದಾರೆ.
ಇನ್ನು ಮಹಿಳೆಯ ಆರೋಪವನ್ನು ಶಾಸಕ ನಿಜಾಮುದ್ದೀನ್ ಚೌದರಿ ಅಲ್ಲಗಳೆದಿದ್ದು, ಇದು ವಿರೋಧ ಪಕ್ಷಗಳ ಕುತಂತ್ರ ಎಂದು ಕಿಡಿಕಾರಿದ್ದಾರೆ. ಅಲ್ಲದೆ ದೂರು ನೀಡಿರುವ ಮಹಿಳೆಯ ಪತಿ ನನ್ನ ಮಕ್ಕಳನ್ನು ಟ್ಯೂಷನ್ ಗೆ ಕರೆದೊಯ್ಯುತ್ತಿದ್ದ. ಹೀಗಾಗಿ ಆತನ ಪರಿಚಯವಿತ್ತು. ಕೌಟುಂಬಿಕ ಕಲಹದ ವೇಳೆ ನಾನೇ ಆತನನ್ನು ಕರೆದು ಬುದ್ದಿ ಹೇಳಿದ್ದೆ. ಇದು ಬಿಟ್ಟರೆ ಆತನಿಗೂ ತಮಗೂ ಯಾವುದೇ ಪರಿಚಯವಿಲ್ಲ. ಯಾವ ಪತಿಯಾದರೂ ತನ್ನ ಪತಿ ಮೇಲೆ ಅತ್ಯಾಚಾರ ಮಾಡು ಎಂದು ಹೇಳುತ್ತಾನೆಯೇ ಎಂದು ಆರೋಪವನ್ನು ಅಲ್ಲಗಳೆದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
CrimeAssamಅಸ್ಸಾಂrape caseಅತ್ಯಾಚಾರ ಪ್ರಕರಣGuwahatiಅಪರಾಧಗುವಾಹತಿAIUDFಎಐಯುಡಿಎಫ್MLA Nizam Uddin Choudhuryಶಾಸಕ ನಿಜಾಮುದ್ದೀನ್ ಚೌದರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


