69ನೇ ಗಣರಾಜ್ಯೋತ್ಸವ: ಕೇರಳ ಸರ್ಕಾರಕ್ಕೆ ಸಡ್ಡು ಹೊಡೆದ ಭಾಗ್ವತ್ ರಿಂದ ತ್ರಿವರ್ಣ ಧ್ವಜಾರೋಹಣ
ಗಣರಾಜ್ಯೋತ್ಸವ ದಿನದಂದ ತ್ರಿವರ್ಣ ಧ್ವಜಾರೋಹಣ ಸಂಬಂಧ ಕೇರಳ ಸರ್ಕಾರ ಹೊರಡಿಸಿದ್ದ ಸುತ್ತೋಲೆಯ ಹೊರತಾಗಿಯೂ, ಸಿಎಂ ಪಿಣರಾಯಿ ವಿಜಯನ್ ಗೆ ಸೆಡ್ಡು ಹೊಡೆದಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.

Published On :
ತಿರುವನಂತಪುರಂ: ಗಣರಾಜ್ಯೋತ್ಸವ ದಿನದಂದ ತ್ರಿವರ್ಣ ಧ್ವಜಾರೋಹಣ ಸಂಬಂಧ ಕೇರಳ ಸರ್ಕಾರ ಹೊರಡಿಸಿದ್ದ ಸುತ್ತೋಲೆಯ ಹೊರತಾಗಿಯೂ, ಸಿಎಂ ಪಿಣರಾಯಿ ವಿಜಯನ್ ಗೆ ಸೆಡ್ಡು ಹೊಡೆದಿರುವ ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್ ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ.
ಕೇರಳದ ಪಾಲಕ್ಕಾಡ್ ನ ಖಾಸಗಿ ಶಾಲೆಯಲ್ಲಿ ಮೋಹನ್ ಭಾಗ್ವತ್ ಅವರು ತ್ರಿವರ್ಣ ಧ್ವಜಾರೋಹಣ ಮಾಡಿದ್ದಾರೆ. ಈ ಹಿಂದೆ ಸ್ವತಂತ್ರ ದಿನಾಚರಣೆ ವೇಳೆ ಕೇರಳದಲ್ಲಿ ಮೋಹನ್ ಭಾಗ್ವಕ್ ಧ್ವಜಾರೋಹಣ ಮಾಡಿದ್ದಾಗ ಕೆಂಗಣ್ಣು ಬೀರಿದ್ದ ಕೇರಳ ಸರ್ಕಾರ ಗಣೃರಾಜ್ಯೋತ್ಸವ ದಿನದಂದು ಧ್ವಜಾರೋಹಣ ಮಾಡುವ ಗಣ್ಯರ ಕುರಿತು ಕೇರಳದ ಎಲ್ಲ ಶಾಲೆಗಳಿಗೆ ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆ ಮೂಲಕ ಮೋಹನ್ ಭಾಗ್ವತ್ ರನ್ನು ಧ್ವಜಾರೋಹಣದಿಂದ ದೂರವಿಡಲು ಕೇರಳ ಸರ್ಕಾರ ಮುಂದಾಗಿತ್ತು.
ಆದರೆ ಕೇರಳ ಸರ್ಕಾರದ ಸುತ್ತೋಲೆಯನ್ನೂ ಮೀರಿ ಭಾಗ್ವತ್ ಕೇವಲ ಆರು ತಿಂಗಳ ಅವಧಿಯಲ್ಲಿ 2ನೇ ಬಾರಿಗೆ ಧ್ವಜಾರೋಹಣ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
RSSಕೇರಳ ಸರ್ಕಾರಆರ್ ಎಸ್ ಎಸ್Kerala governmentMohan Bhagwatಮೋಹನ್ ಭಾಗ್ವತ್ತಿರುವನಂತಪುರಂ69th Republic DayThiruvanathPuram69ನೇ ಗಣರಾಜ್ಯೋತ್ಸವ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


