Kerala government

ಮಲಯಾಳಂ ನಟಿ ಮೇಲೆ ಲೈಂಗಿಕ ದೌರ್ಜನ್ಯ: ನಟ ದಿಲೀಪ್ ಖುಲಾಸೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲು ಕೇರಳ ಸರ್ಕಾರ ನಿರ್ಧಾರ
2017ರ ಫೆಬ್ರುವರಿ 17ರಂದು ನಟ ದಿಲೀಪ್ ಅವರು ನಟಿಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪ ಕೇಳಿಬಂದಿತ್ತು.

ಹೇಮಾ ಸಮಿತಿ ವರದಿ ಆಧರಿಸಿ ಕಾನೂನು ಕ್ರಮ ಏಕೆ ಕೈಗೊಂಡಿಲ್ಲ: ಕೇರಳ ಸರ್ಕಾರಕ್ಕೆ ಹೈಕೋರ್ಟ್ ತರಾಟೆ
2019ರಲ್ಲೇ ವರದಿ ಬಂದಿದ್ದರೂ ರಾಜ್ಯ ಸರ್ಕಾರ ಇಲ್ಲಿಯವರೆಗೂ ಏಕೆ ನಿಷ್ಕ್ರಿಯವಾಗಿ ಕುಳಿತಿದೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ವರದಿ ಹಿಡಿದುಕೊಂಡು ಕುಳಿತಿರುವುದು ಬಿಟ್ಟರೆ ಕಳೆದ ನಾಲ್ಕು ವರ್ಷಗಳಲ್ಲಿ ಸರ್ಕಾರ ಏನನ್ನೂ ಮಾಡಿಲ್ಲ ಎಂದು ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿದೆ.

ಕಣ್ಣೂರು ವಿಶ್ವವಿದ್ಯಾಲಯದ ಉಪ ಕುಲಪತಿ ಮರು ನೇಮಕ ರದ್ದುಗೊಳಿಸಿದ ಸುಪ್ರೀಂ ಕೋರ್ಟ್
ಕಣ್ಣೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿ (VC) ಡಾ.ಗೋಪಿನಾಥ್ ರವೀಂದ್ರನ್ ಅವರ ಮರುನೇಮಕವನ್ನು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರದ ಅನಗತ್ಯ ಹಸ್ತಕ್ಷೇಪ ಎಂದು ಉಲ್ಲೇಖಿಸಿ ರದ್ದುಗೊಳಿಸಿದ್ದು, ಕೇರಳದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ದೊಡ್ಡ ಆಘಾತವಾಗಿದೆ.

ಮಸೂದೆ ಅಂಗೀಕಾರಕ್ಕೆ ವಿಳಂಬ: ಪಂಜಾಬ್ ರಾಜ್ಯಪಾಲರ ಕೇಸಿನ ತೀರ್ಪು ನೋಡುವಂತೆ ಕೇರಳ ರಾಜ್ಯಪಾಲಗೆ 'ಸುಪ್ರೀಂ' ಸೂಚನೆ!
"ತಡೆಹಿಡಿಯುವ ಮಸೂದೆಗಳನ್ನು" ಮರುಪರಿಶೀಲನೆಗಾಗಿ ವಿಧಾನಸಭೆಗೆ ಹಿಂತಿರುಗಿಸಬೇಕು ಎಂದು ಪಂಜಾಬ್ ರಾಜ್ಯಪಾಲರ ಪ್ರಕರಣದಲ್ಲಿ ತನ್ನ ತೀರ್ಪನ್ನು ಓದಿಕೊಳ್ಳುವಂತೆ ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಅವರಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಸೂಚನೆ ನೀಡಿದೆ.

ನಿಫಾ ವೈರಸ್ ಹಾವಳಿಯಿಂದ ಕಂಗೆಟ್ಟಿದ್ದ ಕೇರಳ ನಿರಾಳ; 42 ಮಾದರಿಗಳ ಫಲಿತಾಂಶ ನೆಗೆಟಿವ್: ವೀಣಾ ಜಾರ್ಜ್
ಹೆಚ್ಚಿನ ಅಪಾಯ ಹೊಂದಿದ್ದ ಸೋಂಕಿತರ ಸಂಪರ್ಕ ಪಟ್ಟಿಯಲ್ಲಿರುವ ವ್ಯಕ್ತಿಗಳ 42 ಮಾದರಿಗಳ ಪರೀಕ್ಷೆಯ ಫಲಿತಾಂಶ ದೊರಕಿದ್ದು, ಸದ್ಯ ಯಾವುದೇ ಹೊಸ ನಿಪಾ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ ಎಂದು ಕೇರಳ ಸರ್ಕಾರ ಭಾನುವಾರ ಹೇಳಿದೆ.

ಸಣ್ಣ ಮಳಿಗೆಗಳು ಮಾರಾಟ ಮಾಡುವ ಕಡಿಮೆ ಪ್ರಮಾಣದ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸುವುದಿಲ್ಲ: ಕೇರಳ ಸಿಎಂ ಪಿಣರಾಯಿ ವಿಜಯನ್
ಜಿಎಸ್ ಟಿ ವಿಚಾರವಾಗಿ ಕೇಂದ್ರ ಸರ್ಕಾರಕ್ಕೆ ಸಡ್ಡು ಹೊಡಿದಿರುವ ಕೇರಳ ಸಿಎಂ ಪಿಣರಾಯಿ ವಿಜಯನ್, ಸರ್ಕಾರದ ಕುಟುಂಬ ಶ್ರೀ ಮತ್ತು ಸಣ್ಣ ಮಳಿಗೆಗಳು ಮಾರಾಟ ಮಾಡುವ ಕಡಿಮೆ ಪ್ರಮಾಣದ ವಸ್ತುಗಳ ಮೇಲೆ ಜಿಎಸ್ಟಿ ವಿಧಿಸುವುದಿಲ್ಲ ಎಂದು ಘೋಷಿಸಿದ್ದಾರೆ.

ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್ಟಿ ಹೇರುವುದಿಲ್ಲ: ಕೇರಳ ಸರ್ಕಾರ
ಹಾಲಿನ ಉತ್ಪನ್ನಗಳ ಮೇಲಿನ ಜಿಎಸ್ ಟಿ ಹೇರಿಕೆ ವಿಚಾರ ವ್ಯಾಪಕ ಸುದ್ದಿಗೆ ಗ್ರಾಸವಾಗಿರುವಂತೆಯೇ ಇತ್ತ ಕೇರಳ ಸರ್ಕಾರ ಸಣ್ಣ ಅಂಗಡಿಗಳ ಸರಕು ಸಾಮಾಗ್ರಿಗಳ ಮೇಲೆ ಜಿಎಸ್ಟಿ ಹೇರುವುದಿಲ್ಲ ಎಂದು ಘೋಷಣೆ ಮಾಡಿದೆ.

ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಭಕ್ತಾದಿಗಳ ದರ್ಶನಕ್ಕೆ ಶಬರಿಮಲೆ ದೇವಾಲಯದ ಅನುಮತಿ
ಕೇರಳ ಸರ್ಕಾರ ಶಬರಿಮಲೆ ದೇವಾಲಯಕ್ಕೆ ಭೇಟಿ ನೀಡುವ ಭಕ್ತಾದಿಗಳ ಸಂಖ್ಯೆಯನ್ನು ಪ್ರತಿದಿನ 60,000ಕ್ಕೂ ಹೆಚ್ಚಿನ ಸಂಖ್ಯೆಗೆ ಏರಿಕೆ ಮಾಡಿದೆ.

ಕೇಂದ್ರೀಯ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ತನಿಖೆಗೆ ಹೈಕೋರ್ಟ್ ತಡೆ: ಕೇರಳ ಸರ್ಕಾರಕ್ಕೆ ತೀವ್ರ ಹಿನ್ನಡೆ
ಕೇರಳದ ಪಿಣರಾಯಿ ವಿಜಯನ್ ಸರ್ಕಾರಕ್ಕೆ ತೀವ್ರ ಹಿನ್ನೆಡೆಯುಂಟಾಗಿದ್ದು, ಕೇಂದ್ರೀಯ ಸಂಸ್ಥೆಗಳ ವಿರುದ್ಧ ನ್ಯಾಯಾಂಗ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.

