ಕೊಯಮತ್ತೂರು: ಸ್ನಾನ ಮಾಡದ್ದಕ್ಕೆ ತಂದೆಯಿಂದ ಬೈಗುಳ; ಬಾಲಕನ ಆತ್ಮಹತ್ಯೆ
ಹೊಸ ವರ್ಷದಂದು ಮಗ ಸ್ನಾನ ಮಾಡಲಿಲ್ಲ ಎಂದು ಬೇಶರಗೊಂಡು ತಂದೆ ಮಗನಿಗೆ ಸ್ನಾನ ಮಾಡುವಂತೆ ಹೇಳಿ ಗದರಿದ್ದಾರೆ.

Published On :
ಕೊಯಮತ್ತೂರ್: ಹೊಸ ವರ್ಷದಂದು ಮಗ ಸ್ನಾನ ಮಾಡಲಿಲ್ಲ ಎಂದು ಬೇಶರಗೊಂಡು ತಂದೆ ಮಗನಿಗೆ ಸ್ನಾನ ಮಾಡುವಂತೆ ಹೇಳಿ ಗದರಿದ್ದಾರೆ.ಇದರಿಂದ ಮನನೊಂದ ಮಗ ನೇಣಿಗೆ ಶರಣಾಗಿರುವ ಘಟನೆ ತಮಿಳುನಾಡಿನ ಕೊಯಮತ್ತೂರಿನಲ್ಲಿ ನಡೆದಿದೆ.
ಐದನೇ ತರಗತಿ ಓದುತ್ತಿದ್ದ ಹತ್ತು ವರ್ಷದ ವಾಲಕ ನೇಣಿಗೆ ಶರಣಾಗಿದ್ದು ತಂದೆ ಸ್ನಾನ ಮಾಡುವಂತೆ ಗದರಿದ ಸಮಯದಲ್ಲಿ ಅವನು ತನ್ನ ಸ್ನೇಹಿತರೊಡನೆ ಆಟವಾಡುತ್ತಿದ್ದ ಎಂದು ಪೋಲೀಸರು ತಿಳಿಸಿದ್ದಾರೆ.
ಹಾಗೆ ಗದರಿದ ನಂತರ ಬಾಲಕ ಅರ್ಧ ಮನಸ್ಸಿನಿಂದ ಸ್ನಾನಕ್ಕಾಗಿ ಬಾತ್ ರೂಂ ಗೆ ತೆರಳಿದ್ದಾನೆ. ಅಲ್ಲಿ ಟವೆಲ್ ಹಾಗೂ ಅಪಿಪ್ ನ್ನು ಬಳಸಿ ನೇಣು ಬಿಗಿದುಕೊಂಡಿದ್ದಾನೆ. ಪಾಲಕರು ಮಗ ಎಷ್ಟು ಹೊತ್ತಾದರೂ ಬಾತ್ ರೂಂ ನಿಂದ ಹೊರಬರದೆ ಇದ್ದದ್ದು ಕಂಡು ಗಾಬರಿಯಾಗಿ ಬಾಗಿಲು ಒಡೆದಾಗ ಪ್ರಕರಣ ಬೆಳಕಿಗೆ ಬಂದಿದೆ. ಅವರು ಮಗನನ್ನು ತಕ್ಷಣ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದೊಯ್ದಿದ್ದಾರೆ. ಆದರೆ ಅಷ್ಟರಲ್ಲೇ ಬಾಲಕ ಸತ್ತಿದ್ದು ವೈದ್ಯರು ಅದನ್ನು ದೃಢಪಡಿಸಿದ್ದರು.
ಬಾಲಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಪೋಲೀಸರು ಮಾಹಿತಿ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


