ಇಸಿಸ್ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಯಶಸ್ಸು: ಎನ್ಐಎ ಕೊಂಡಾಡಿದ ಗೃಹ ಸಚಿವ
ಭಾರತದ ಮೇಲೆ ಸದಾ ಕಾಲ ತನ್ನ ಕೆಂಗಣ್ಣು ಬೀರುತ್ತಲೇ ಇರುವ ಪಾಕಿಸ್ತಾನ ಮೂಲಕ ಇಸಿಸ್ ಉಗ್ರ ಸಂಘಟನೆಯ...

Published On :
ನವದೆಹಲಿ: ಭಾರತದ ಮೇಲೆ ಸದಾ ಕಾಲ ತನ್ನ ಕೆಂಗಣ್ಣು ಬೀರುತ್ತಲೇ ಇರುವ ಪಾಕಿಸ್ತಾನ ಮೂಲಕ ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್ ಉಗ್ರ ಸಂಘಟನೆಯ ಅಡಗು ತಾಣಗಳ ಮೇಲೆ ಭಾರೀ ಕಾರ್ಯಾಚರಣೆಯನ್ನು ನಡೆಸಲಾಗಿದ್ದು, ಈ ಹಿನ್ನಲೆಯಲ್ಲಿ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳನ್ನು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಗುರುವಾರ ಕೊಂಡಾಡಿದ್ದಾರೆ.
ರಾಜಧಾನಿ ದೆಹಲಿ ಹಾಗೂ ಉತ್ತರಪ್ರದೇಶದಲ್ಲಿದ್ದ ಇಸಿಸ್ ಅಡಗುತಾಣಗಳ ಮೇಲೆ ಎನ್ಐಎ ದಾಳಿ ನಡೆಸಿದ್ದರ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಇಸಿಸ್ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಯಶಸ್ಸಿಗೆ ಪ್ರೇರಣೆಯಾಗಿದೆ ಎಂದು ಹೇಳಿದ್ದಾರೆ.
ಇದರಂತೆ ವಿತ್ತ ಸಚಿವ ಅರುಣ್ ಜೇಟ್ಲಿಯವರೂ ಕೂಡ ಎನ್ಐಎ ಅಧಿಕಾರಿಗಳನ್ನು ಕೊಂಡಾಡಿದ್ದಾರೆ.
ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಅತ್ಯಂತ ಭಯಾನಕ ಉಗ್ರ ಸಂಘಟನೆಯ ಅಡಗುತಾಣಗಳ ಮೇಲೆ ಎನ್ಐಎ ದಾಳಿ ನಡೆಸಿದ್ದು, ಎನ್ಐಎ ಕಾರ್ಯಾಚರಣೆ ಪ್ರಶಂಸನೀಯವಾದದ್ದು ಎಂದು ತಿಳಿಸಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಮಾತನಾಡಿ, ಉಗ್ರರ ಅಡಗುತಾಣಗಳ ಮೇಲಿನ ದಾಳಿ ದೊಡ್ಡ ಸಾಧನೆ, ಯಶಸ್ಸನ್ನು ತಂದಿದೆ. ಎನ್ಐಎ ಅತ್ಯುತ್ತಮ ಕಾರ್ಯ ಮಾಡಿದೆ. ಎನ್ಐಎ ವೃತ್ತಿಪರ ಸಂಘಟನೆ, ರಚನೆಗೊಂಡಾಗಿನಿಂದಲೂ ಎನ್ಐಎ ಅತ್ಯುತ್ತಮ ಕಾರ್ಯಗಳನ್ನು ಮಾಡುತ್ತಲೇ ಇದೆ. ಘಟನೆ ಸಂಭವಿಸುವುದಕ್ಕೂ ಮುನ್ನ ಅದರ ವಿರುದ್ಧ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ರಾಜನಾಥ್ ಸಿಂಗ್ಇಸಿಸ್ದೆಹಲಿISISDelhiUttar pradeshದಾಳಿಉತ್ತರಪ್ರದೇಶRajnath SinghHome MinisterNIAraidಗೃಹ ಸಚಿವಎನ್ಐಎ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


