ಪ್ರಯಾಣಿಕರ ಗಮನಕ್ಕೆ: ಕೊಳಕು ರೈಲು ನಿಲ್ದಾಣ ಫೋಟೊಗಳನ್ನು ಇಲಾಖೆಗೆ ವಾಟ್ಸ್ ಆಪ್ ಮಾಡಿ!
ರೈಲ್ವೆ ಸ್ಟೇಷನ್ ಕೊಳಕಾಗಿರುವುದು ಗಮನಿಸಿದರೆ ಇನ್ನು ಮುಂದೆ ಪ್ರಯಾಣಿಕರು ವಾಟ್ಸ್ ಆಪ್ ಮೂಲಕ ಆ ಫೋಟೋವನ್ನು ವೆಸ್ಟ್ರನ್ ರೈಲ್ವೆಗೆ ಕಳಿಸಿ, ತಕ್ಷಣವೇ ಸ್ವಚ್ಛಗೊಳಿಸಲು ರೈಲ್ವೆ ಅಧಿಕಾರಿಗಳ ಗಮನಕ್ಕೆ

Published On :
ಮುಂಬೈ: ರೈಲ್ವೆ ಸ್ಟೇಷನ್ ಕೊಳಕಾಗಿರುವುದು ಗಮನಿಸಿದರೆ ಇನ್ನು ಮುಂದೆ ಪ್ರಯಾಣಿಕರು ವಾಟ್ಸ್ ಆಪ್ ಮೂಲಕ ಆ ಫೋಟೋವನ್ನು ವೆಸ್ಟ್ರನ್ ರೈಲ್ವೆಗೆ ಕಳಿಸಿ, ತಕ್ಷಣವೇ ಸ್ವಚ್ಛಗೊಳಿಸಲು ರೈಲ್ವೆ ಅಧಿಕಾರಿಗಳ ಗಮನಕ್ಕೆ ತರಬಹುದಾಗಿದೆ.
ವೆಸ್ಟ್ರನ್ ರೈಲ್ವೆ ಹಮ್ಮಿಕೊಂಡಿರುವ ಸ್ವಚ್ಛತಾ ಅಭಿಯಾನದ ಭಾಗವಾಗಿ ಪ್ರಯಾಣಿಕರೇ ರೈಲ್ವೆ ಸ್ವಚ್ಛತೆಯ ಬಗ್ಗೆ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಬಹುದಾದ ಸೌಲಭ್ಯವನ್ನು ಜಾರಿಗೆ ತರಲಾಗಿದೆ. ಮುಂಬೈ ನಗರದಲ್ಲಿ ಈ ಸೌಲಭ್ಯ ಜಾರಿಯಲ್ಲಿದ್ದು, ಈ ರೀತಿಯ ವಾಟ್ಸ್ ಆಪ್ ಮೆಸೇಜ್ ಗಳನ್ನು ಗಮನಿಸುವುದಕ್ಕಾಗಿಯೇ ವಿಶೇಷ ತಂಡವನ್ನು ನಿಯೋಜಿಸಲಾಗಿದ್ದು, ಪ್ರಯಾಣಿಕರು 9004499733 ನಂಬರ್ ಗೆ ವಾಟ್ಸ್ ಆಪ್ ಸಂದೇಶ ರವಾನೆ ಮಾಡಬಹುದಾಗಿದೆ.
ವಾಟ್ಸ್ ಆಪ್ ಅಭಿಯಾನದ ಮೂಲಕ ರೈಲ್ವೆ ನಿಲ್ದಾಣಗಳನ್ನು ಮತ್ತಷ್ಟು ಸ್ವಚ್ಛವಾಗಿರಿಸಲು ಸಾಧ್ಯವಿದೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ವೆಸ್ಟ್ರನ್ ರೈಲ್ವೆಯ 5 ವಿಭಾಗಗಳಾದ ವಡೋದರಾ( 9724091426) ಅಹ್ಮದಾಬಾದ್(9724093981) ಭವ್ ನಗರ್ (9724097967) ರಾಜ್ ಕೋಟ್ (9724094983) ರತ್ಲಂ (9752492970) ನಂಬರ್ ಗಳನ್ನು ನೀಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Whatsappವಾಟ್ಸ್ ಆಪ್ಸ್ವಚ್ಛತಾ ಅಭಿಯಾನWestern railwayDirty Railway stationsCleanliness Driveಕೊಳಕು ರೈಲು ನಿಲ್ದಾಣವೆಸ್ಟ್ರನ್ ರೈಲ್ವೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


