ದಕ್ಷಿಣ ಸುಡಾನ್: ಇಬ್ಬರು ಭಾರತೀಯ ಅಪಹೃತರ ಬಿಡುಗಡೆ; ಸುಷ್ಮಾ ಸ್ವರಾಜ್ ಟ್ವೀಟ್
ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್ ನಲ್ಲಿ ಅಪಹಣರಕ್ಕೊಳಗಾಗಿದ್ದ ಇಬ್ಬರು ಭಾರತೀಯ ಇಂಜಿನಿಯರ್ ಗಳು ಭಾರತ ಸರ್ಕಾರ ಮಧ್ಯಸ್ಥಿಕೆಯೊಂದಿಗೆ ಶುಕ್ರವಾರ ಬಿಡುಗಡೆಗೊಂಡಿದ್ದಾರೆ...

Published On :
ನವದೆಹಲಿ: ಯುದ್ಧ ಪೀಡಿತ ಪ್ರದೇಶ ದಕ್ಷಿಣ ಸುಡಾನ್ ನಲ್ಲಿ ಅಪಹಣರಕ್ಕೊಳಗಾಗಿದ್ದ ಇಬ್ಬರು ಭಾರತೀಯ ಇಂಜಿನಿಯರ್ ಗಳು ಭಾರತ ಸರ್ಕಾರ ಮಧ್ಯಸ್ಥಿಕೆಯೊಂದಿಗೆ ಶುಕ್ರವಾರ ಬಿಡುಗಡೆಗೊಂಡಿದ್ದಾರೆ.
ದಕ್ಷಿಣ ಸುಡಾನ್ ನಲ್ಲಿ ಬಂಡುಕೋರರು ಕಾರ್ಯನಿರತರಾಗಿದ್ದ ಇಬ್ಬರು ಭಾರತೀಯರನ್ನು ಅಪಹರಣ ಮಾಡಿದ್ದು, ಸುಷ್ಮಾ ಸ್ವರಾಜ್ ಅವರು ಕೂಡಲೇ ಸಹಾಯ ಮಾಡಬೇಕಿದೆ ಎಂದು ಈ ಹಿಂದೆ ದಾರ್ ಪೆಟ್ರೋಲಿಯಂ ಆಪರೇಟಿಂಗ್ ಕಂಪನಿಯ ಪ್ರೊಡಕ್ಷನ್ ಆಪರೇಟರ್ ಅಜಯ್ ರಾಜ ಎಂಬುವವರು ಟ್ವೀಟ್ ಮಾಡಿದ್ದರು.
ಇದಕ್ಕೆ ಕೂಡಲೇ ಸ್ಪಂದನೆ ನೀಡಿದ ಸುಷ್ಮಾ ಸ್ವರಾಜ್ ಅವರು ಮಧ್ಯಸ್ಥಿಕೆ ವಹಿಸಿ ಇಬ್ಬರು ಭಾರತೀಯರು ಬಿಡುಗಡೆಯಾಗುವಂತೆ ಮಾಡಿದ್ದಾರೆ.
ದಕ್ಷಿಣ ಸುಡಾನ್ ನಲ್ಲಿ ಅಪಹರಣಕ್ಕೀಡಾಗಿದ್ದ ಮಿಧುನ್ ಹಾಗೂ ಎಡ್ವರ್ಡ್ ಇಬ್ಬರು ಭಾರತೀಯರು ಬಿಡುಗಡೆಗೊಂಡಿದ್ದಾರೆಂಬುದನ್ನು ಹೇಳಲು ನನಗೆ ಸಂತಸವಾಗುತ್ತಿದೆ ಎಂದು ಸುಷ್ಮಾ ಸ್ವರಾಜ್ ಅವರು ಟ್ವೀಟ್ ಮಾಡಿದ್ದಾರೆ.
ಈ ಹಿನ್ನಲೆಯಲ್ಲಿ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅಜಯ್ ರಾಜಾ ಅವರು, ಮಿಧುನ್ ಹಾಗೂ ಎಡ್ವರ್ಡ್ ಇಬ್ಬರೂ ನನ್ನ ಗೆಳೆಯರಾಗಿದ್ದರು. ಇಬ್ಬರೂ ಸುರಕ್ಷಿತರಾಗಿ ಹಿಂತಿರುಗಿ ಬಂದಿದ್ದಾರೆ. ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು ಸುಷ್ಮಾ ಸ್ವರಾಜ್ ಮೇಡಂ ಎಂದು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


