ಭಾರತದ ಮತಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಸುರಕ್ಷಿತ: ಚುನಾವಣಾ ಆಯೋಗ
ಭಾರತದ ಇವಿಎಂ ಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯಂತ ಸುರಕ್ಷಿತ ಯಂತ್ರವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ...

Published On :
ನವದೆಹಲಿ: ಭಾರತದ ಇವಿಎಂ ಯಂತ್ರಗಳು ಜಗತ್ತಿನಲ್ಲೇ ಅತ್ಯಂತ ಶ್ರೇಷ್ಠ ಹಾಗೂ ಅತ್ಯಂತ ಸುರಕ್ಷಿತ ಯಂತ್ರವಾಗಿದೆ ಎಂದು ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.
ಉತ್ತರಪ್ರದೇಶದ ಚುನಾವಣೆ ಬಳಿಕ ಬಹುಜನ ಸಮಾಜವಾದಿ ಪಕ್ಷ(ಬಿಎಸ್ಪಿ) ಮುಖ್ಯಸ್ಥೆ ಮಾಯಾವತಿ ಸೇರಿದಂತೆ ಹಲವರು ಇವಿಎಂ ಯಂತ್ರದಲ್ಲೇ ದೋಷವಿದೆ ಎಂದು ಆರೋಪಿಸಿದ್ದರು. ಇದಕ್ಕೆ ಅಂತ್ಯಹಾಡಲು ಯತ್ನಿಸಿರುವ ಚುನಾವಣಾ ಆಯೋಗ ವಿದ್ಯುನ್ಮಾನ ಮತ ಯಂತ್ರ(ಇವಿಎಂ) ಸಂಪೂರ್ಣ ಸುರಕ್ಷಿತ ಎಂದು ಹೇಳಿದೆ.
ದೇಶದಲ್ಲಿ ಬಳಸುವ ಈ ಯಂತ್ರವನ್ನು ಯಾವುದೇ ಕಾರಣಕ್ಕೂ ನಕಲಿ ಮಾಡಲು ಸಾಧ್ಯವಿಲ್ಲ. ಅಲ್ಲದೇ ಯಂತ್ರದ ವಿರುದ್ಧ ಯಾರೊಬ್ಬರೂ ನಿಖರ ದಾಖಲೆಯುಳ್ಳು ಆರೋಪ ಮಾಡಿಲ್ಲ. ಹೀಗಾಗಿ ಇಂತಹ ಆರೋಪಗಳನ್ನು ತಿರಸ್ಕರಿಸಬಹುದು ಎಂದು ಹೇಳಿದೆ.
ರಾಜ್ಯ ಹಾಗೂ ಲೋಕಸಭಾ ಚುನಾವಣೆ ಸೇರಿದಂತೆ 107 ಚುನಾವಣೆಯಲ್ಲಿ ಈ ವಿದ್ಯುನ್ಮಾನ ಯಂತ್ರವನ್ನು ಬಳಸಲಾಗಿದೆ. ಯಾವುದೇ ಕಾರಣಕ್ಕೂ ಈ ಯಂತ್ರ ಸುಳ್ಳು ಫಲಿತಾಂಶ ನೀಡಲ್ಲ. ಬದಲಾಗಿ ಎಲ್ಲರೂ ಈ ಫಲಿತಾಂಶವನ್ನು ಒಪ್ಪಿಕೊಂಡಿದ್ದಾರೆ ಎಂದು ಆಯೋಗ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


