ಪೂರ್ವಾಂಚಲದಲ್ಲಿ ಮಾ.24ರಂದು ದಾಳಿ ಮಾಡುತ್ತೇವೆ: ಸಿಎಂ ಯೋಗಿಗೆ ಇಸಿಸ್ ಸವಾಲು
ಉತ್ತರಪ್ರದೇಶದ ಪೂರ್ವಾಂಚಲದಲ್ಲಿ ನಾಳೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಯಲಿದೆ ತಾಕತ್ತಿದ್ದರೆ ತಡೆಯಿರಿ ಎಂದು ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ...

Published On :
ವಾರಣಾಸಿ: ಉತ್ತರಪ್ರದೇಶದ ಪೂರ್ವಾಂಚಲದಲ್ಲಿ ನಾಳೆ ಭಾರೀ ಪ್ರಮಾಣದಲ್ಲಿ ದಾಳಿ ನಡೆಯಲಿದೆ ತಾಕತ್ತಿದ್ದರೆ ತಡೆಯಿರಿ ಎಂದು ಉತ್ತರಪ್ರದೇಶದ ನೂತನ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಇಸ್ಲಾಂಮಿಕ್ ಸ್ಟೇಟ್(ಇಸಿಸ್) ಉಗ್ರ ಸಂಘಟನೆ ಬರೆದಿರುವ ಬೆದರಿಕೆ ಪತ್ರವೊಂದು ಮಿರ್ಜಾಮುರದ್ ಪ್ರದೇಶದಲ್ಲಿ ಪತ್ತೆಯಾಗಿದೆ ಎಂದು ಝೀ ಮಾಧ್ಯಮ ವರದಿ ಮಾಡಿದೆ.
ಬೆದರಿಕೆ ಪತ್ರ ಸಿಕ್ಕಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ವಾರಾಣಸಿಯ ಕ್ಷೇತ್ರದಲ್ಲಿನ ಮಿರ್ಜಾಮುರದ್ ನಲ್ಲಿ ಎಂಬುದು ವಿಶೇಷ. ಪೂರ್ವಾಂಚಲವು ಉತ್ತರಪ್ರದೇಶದ ಪೂರ್ವಭಾಗದಲ್ಲಿದ್ದು ಸಿಎಂ ಯೋಗಿ ಆದಿತ್ಯನಾಥ ಅವರ ಪ್ರಭಾವ ಇಲ್ಲಿ ಅಧಿಕವಾಗಿದೆ. ಹೀಗಾಗಿ ಸಿಎಂ ಯಾವ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಈ ಬೆದರಿಕೆ ಪತ್ರದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷವಾಕ್ಯವಿದ್ದು, ನಮ್ಮ ಸಂಘಟನೆಯಲ್ಲಿ 2000ಕ್ಕೂ ಹೆಚ್ಚು ಉಗ್ರರಿರುವುದಾಗಿ ಬರೆದಿದೆ. ಇದನ್ನು ಉತ್ತರಪ್ರದೇಶ ಪೊಲೀಸರು ಮತ್ತು ದೇಶದ ಗುಪ್ತಚರ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿದ್ದು ಭದ್ರತೆಯನ್ನು ಹೆಚ್ಚಿಸಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


