ದೇಶ

ಸಿಎಂ ಮಮತಾ ಕಾನೂನುಬಾಹಿರವಾಗಿ ನನ್ನ ಮನೆ ಮೇಲೆ ದಾಳಿಗೆ ಆದೇಶಿಸಿದ್ದಾರೆ: ಜಿಜೆಎಂ ಮುಖ್ಯಸ್ಥ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾನೂನುಬಾಹಿರವಾಗಿ ನನ್ನ ಮನೆ ಹಾಗೂ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಲು ಆದೇಶಿಸಿದ್ದಾರೆಂದು ಗೋರ್ಖಾ ಜನಮುಖಿ ಮೋರ್ಚಾ (ಜಿಜೆಎಂ) ನಾಯಕ ಬಿಮಲ್ ಗುರುಂಗ್ ಅವರು...

ಸಿಎಂ ಮಮತಾ ಕಾನೂನುಬಾಹಿರವಾಗಿ ನನ್ನ ಮನೆ ಮೇಲೆ ದಾಳಿಗೆ ಆದೇಶಿಸಿದ್ದಾರೆ: ಜಿಜೆಎಂ ಮುಖ್ಯಸ್ಥ
ಗೋರ್ಖಾ ಜನಮುಖಿ ಮೋರ್ಚಾ (ಜಿಜೆಎಂ) ನಾಯಕ ಬಿಮಲ್ ಗುರುಂಗ್
Published On :
ಡಾರ್ಜಿಲಿಂಗ್: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರು ಕಾನೂನುಬಾಹಿರವಾಗಿ ನನ್ನ ಮನೆ ಹಾಗೂ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಲು ಆದೇಶಿಸಿದ್ದಾರೆಂದು ಗೋರ್ಖಾ ಜನಮುಖಿ ಮೋರ್ಚಾ (ಜಿಜೆಎಂ) ನಾಯಕ ಬಿಮಲ್ ಗುರುಂಗ್ ಅವರು ಶುಕ್ರವಾರ ಹೇಳಿದ್ದಾರೆ. 
ನಿನ್ನೆಯಷ್ಟೇ ಜಿಜೆಎಂ ಮುಖ್ಯಸ್ಥ ಬಿಮಲ್ ಗುರುಂಗ್ ಕಚೇರಿಗೆ ಮೇಲೆ ದಾಳಿ ನಡೆಸಿದ್ದ ಪೊಲೀಸರು, ಅಪಾರ ಪ್ರಮಾಣದ ಶಸ್ತ್ರಾಸ್ತ್ರಗಳು ಹಾಗೂ ಹಣವನ್ನು ವಶಕ್ಕೆ ಪಡೆದುಕೊಂಡಿದ್ದರು. 
ಈ ಹಿನ್ನಲೆಯಲ್ಲಿ ಪ್ರತಿಕ್ರಿಯೆ ನೀಡಿರುವ ಅವರು, ಮಮತಾ ಅವರ ನಿರ್ದೇಶನದಂತೆ ಕಾನೂನು ಬಾಹಿರವಾಗಿ ನನ್ನ ಮನೆ ಹಾಗೂ ಪಕ್ಷದ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ಜಿಟಿಎ ಕಾರ್ಯನಿರ್ವಾಹಕ ಕಚೇರಿ ಹಾಗೂ ರಾಜಕೀಯ ಪಕ್ಷವೊಂದರ ಕಚೇರಿ ಮೇಲೆ ಈ ರೀತಿಯಾಗಿ ದಾಳಿ ನಡೆಸುವುದು ಪ್ರಜಾಪ್ರಭುತ್ವದ ಆರೋಗ್ಯಕರ ಬೆಳವಣಿಗೆಗೆ ಮಾರಕವಾಗಿರುತ್ತದೆ ಎಂದು ಹೇಳಿದ್ದಾರೆ. 
ತೃಣಮೂಲಕ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಪೊಲೀಸರು ಹಾಗೂ ಆಡಳಿತ ಮಂಡಳಿಯ ಬೆಂಬಲದೊಂದಿಗೆ ನನ್ನ ಮನೆಗೆ ನುಗ್ಗಿದ್ದಾರೆ. ಇದೊಂದು ರಾಜಕೀಯ ಆಟವಾಗಿದ್ದು, ನಿಜಕ್ಕೂ ಅಪಾಯಕಾರಿ ಬೆಳವಣಿಗೆಯಾಗಿದೆ. ಸಿಪಿಐ(ಎಂ), ಟಿಎಂಸಿ ರಾಜಕೀಯ ಮಾಡುತ್ತಿರುವ ರೀತಿಯಗೂ ಬಿಜೆಪಿ ಮತ್ತು ಕಾಂಗ್ರೆಸ್ ಮಾಡುತ್ತಿರುವ ರಾಜಕೀಯಕ್ಕೂ ಯಾವುದೇ ವ್ಯತ್ಯಾಸವಿಲ್ಲ. ಕೊನೆಯ ಹಂತದವರೆಗೂ ನಮ್ಮ ಹೋರಾಟ ಇದೇ ರೀತಿಯಲ್ಲಿಯೇ ಇರುತ್ತದೆ. ರಾಜ್ಯದಲ್ಲಿರುವ ಪ್ರತಿಯೊಬ್ಬರೂ ಇದೇ ರೀತಿಯಾಗಿ ಒಗ್ಗಟ್ಟಿನಿಂದ ಇರಬೇಕೆಂದು ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.