ದೇಶ

ಎಐಎಡಿಎಂಕೆ ವಿಲೀನ: ಪನ್ನೀರ್ ಸೆಲ್ವಂ ಜೊತೆ ಚರ್ಚೆ ನಡೆಸುವಂತೆ ಟಿಟಿವಿ ದಿನಕರನ್ ಗೆ ಶಶಿಕಲಾ ಸೂಚನೆ!

ಎಐಎಡಿಎಂಕೆ ಪಕ್ಷದ ಬಣಗಳನ್ನು ವಿಲೀನಗೊಳಿಸುವ ಕುರಿತು ಮಾಜಿ ಸಿಎಂ ಪನ್ನೀರ್ ಸೆಲ್ವಂರೊಂದಿಗೆ ಚರ್ಚೆ ನಡೆಸುವಂತೆ ಪಕ್ಷದ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ತಮ್ಮ ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಎಐಎಡಿಎಂಕೆ ವಿಲೀನ: ಪನ್ನೀರ್ ಸೆಲ್ವಂ ಜೊತೆ ಚರ್ಚೆ ನಡೆಸುವಂತೆ ಟಿಟಿವಿ ದಿನಕರನ್ ಗೆ ಶಶಿಕಲಾ ಸೂಚನೆ!
ಸಂಗ್ರಹ ಚಿತ್ರ
Published On :

ಬೆಂಗಳೂರು: ಎಐಎಡಿಎಂಕೆ ಪಕ್ಷದ ಬಣಗಳನ್ನು ವಿಲೀನಗೊಳಿಸುವ ಕುರಿತು ಮಾಜಿ ಸಿಎಂ ಪನ್ನೀರ್ ಸೆಲ್ವಂರೊಂದಿಗೆ ಚರ್ಚೆ ನಡೆಸುವಂತೆ ಪಕ್ಷದ ಉಚ್ಛಾಟಿತ ನಾಯಕಿ ವಿಕೆ ಶಶಿಕಲಾ ತಮ್ಮ ಸಂಬಂಧಿ ಟಿಟಿವಿ ದಿನಕರನ್ ಅವರಿಗೆ ಸೂಚಿಸಿದ್ದಾರೆ ಎಂದು ತಿಳಿದುಬಂದಿದೆ.

ಸೋಮವಾರ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ವಿಕೆ ಶಶಿಕಲಾ ಅವರನ್ನು ಟಿಟಿವಿ ದಿನಕರನ್ ಅವರು ಭೇಟಿ ಮಾಡಿದ್ದು, ಈ ವೇಳೆ ಶಶಿಕವಾ ದಿನಕರನ್ ಗೆ ಈ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಅಕ್ರಮ ಆಸ್ತಿ ಗಳಿಕೆ  ಪ್ರಕರಣ ಸಂಬಂಧ ಶಶಿಕಲಾ ಜೈಲು ಪಾಲಾದ ಬಳಿಕ ಎಐಎಡಿಎಂಕೆ ಪಕ್ಷದಲ್ಲಿ ಆಂತರಿಕ ಬೆಳವಣಿಗೆಗಳು ನಡೆದಿದ್ದವು. ಪರಿಣಾಮ ಪನ್ನೀರ್ ಸೆಲ್ವಂ ಮತ್ತು ಸಿಎಂ ಎಡಪ್ಪಾಡಿ ಪಳನಿ ಸ್ವಾಮಿ ಬಣ ವಿಲೀನದ ಕುರಿತು ಮಾತುಕತೆ  ನಡೆಸುತ್ತಿವೆ.

ಭೇಟಿ ವೇಳೆ ಶಶಿಕಲಾ ಬಣದ 12 ಶಾಸಕರು ಮತ್ತು ಓರ್ವ ಸಂಸದರು ಜೈಲಿಗೆ ಆಗಮಿಸಿದ್ದರು. ಆದರೆ ಜೈಲು ಸಿಬ್ಬಂದಿ ನಾಲ್ಕು ಮಂದಿಯನ್ನು ಮಾತ್ರ ಶಶಿಕಲಾ ಭೇಟಿಗೆ ಕಳುಹಿಸಿಕೊಟ್ಟಿದ್ದರು.

ಇನ್ನು ಆರ್ ಕೆನಗರ ಉಪಚುನಾವಣೆ ವೇಳೆ ಪಕ್ಷದ ಗುರುತು ಎರಡು ಎಲೆಗಳನ್ನು ತಮ್ಮ ಬಣಕ್ಕೆ ನೀಡಬೇಕು ಎಂದ ಚುನಾವಣಾ ಆಯೋಗದ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದ ಮೇರೆಗೆ ಟಿಟಿವಿ ದಿನಕರನ್ ರನ್ನು  ಬಂಧಿಸಲಾಗಿತ್ತು. ಈ ಸಂದರ್ಭದಲ್ಲಿ ನಡೆದ ನಾಟಕೀಯ ಬೆಳವಣಿಗೆಯಲ್ಲಿ ದಿನಕರನ್ ಮತ್ತು ಶಿಶಿಕಲಾ ರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇದೀಗ ಸ್ವತಃ ಶಶಿಕಲಾ ಅವರು ಪನ್ನೀರ್ ಸೆಲ್ವಂ ರೊಂದಿಗೆ ಸಂಧಾನಕ್ಕೆ  ಮುಂದಾಗಿದ್ದಾರೆ. ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ದಿನಕರನ್ ಕಳೆದ 45 ದಿನಗಳ ರಾಜಕೀಯ ಬೆಳವಣಿಗೆಗಳನ್ನು ಶಶಿಕಾಲ ಅವರಿಗೆ ವಿವರಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಮಾತನಾಡಿದ ದಿನಕರನ್ ಚರ್ಚೆ ಕುರಿತಂತೆ ಯಾವುದೇ ಹೇಳಿಕೆ ನೀಡಲಿಲ್ಲ. ಬದಲಿಗೆ ಭಯ ಸ್ವಾರ್ಥದ ಲಕ್ಷಣ ಎಂದಷ್ಟೇ ಹೇಳಿದರು.

ಶಶಿಕಲಾಗೆ ಪೆರೋಲ್ ದೊರೆತಿಲ್ಲ, ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಪ್ರಸಾರವಾಗಿದೆ: ಪರಪ್ಪನ ಅಗ್ರಹಾರ ಜೈಲು ಡಿಜಿಪಿ ಸ್ಪಷ್ಟನೆ
ಇದೇ ವೇಳೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಸಂಬಂಧ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾ ಅವರಿಗೆ ಕೋರ್ಟ್ ಪೆರೋಲ್ ಮಂಜೂರು ಮಾಡಿದೆ ಎಂಬ ಮಾಧ್ಯಮಗಳ ಸುದ್ದಿ ಸುಳ್ಳು ಎಂದು ಸಾಬೀತಾಗಿದ್ದು,  ಶಶಿಕಲಾ ಅವರಿಗೆ ಯಾವುದೇ ರೀತಿಯ ಪೆರೋಲ್ ಮಂಜೂರಾಗಿಲ್ಲ. ಮಾಧ್ಯಮಗಳಲ್ಲಿ ಪ್ರಸಾರವಾಗಿರುವುದು ಸುಳ್ಳು ಸುದ್ದಿ ಎಂದು ಪರಪ್ಪನ ಅಗ್ರಹಾರ ಜೈಲಿನ ಡಿಜಿಪಿ ಸ್ಪಷ್ಟನೆ ಪಡಿಸಿದ್ದಾರೆ.

ನಿನ್ನೆ ಶಶಿಕಲಾಗೆ 20 ದಿನಗಳ ಪೆರೋಲ್ ದೊರೆತಿದೆ ಮೊದಲು ತಮಿಳು ವಾಹಿನಿಯೊಂದು ಸುದ್ದಿ ಪ್ರಸಾರ ಮಾಡಿತ್ತು. ಬಳಿಕ ಕೆಲ ಕನ್ನಡ ಪತ್ರಿಕೆಗಳು ಹಾಗೂ ಮಾಧ್ಯಮಗಳು ಇದೇ ಆಧಾರದ ಮೇಲೆ ಸುದ್ದಿ ಬಿತ್ತರಿಸಿದ್ದವು. ಇದೀಗ ಈ  ಸುದ್ದಿ ಸುಳ್ಳು ಎಂದು ಸಾಬೀತಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.