ದೇಶ

'ಇಸಿಸ್ ಕಮಿಂಗ್ ಸೂನ್': ಸೊಲಾನ್ ಸೇನಾ ಕಂಟೋನ್ಮೆಂಟ್ ಬಳಿ ಪೋಸ್ಟರ್ ಪತ್ತೆ

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಳಿಕ ಭಾರತದ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಗಳು ಸತತ ಯತ್ನ ನಡೆಸುತ್ತಲೇ ಇವೆ. ಇದಕ್ಕೆ ಉದಾಹರಣೆ ಎಂಬಂತೆ ಹಿಮಾಚಸ ಪ್ರದೇಶದ ಸೊಲಾನ್ ಸೇನಾ ಕಂಟೋನ್ಮೆಂಟ್ ನಲ್ಲಿ ಪೋಸ್ಟರ್...

'ಇಸಿಸ್ ಕಮಿಂಗ್ ಸೂನ್': ಸೊಲಾನ್ ಸೇನಾ ಕಂಟೋನ್ಮೆಂಟ್ ಬಳಿ ಪೋಸ್ಟರ್ ಪತ್ತೆ
ಸಂಗ್ರಹ ಚಿತ್ರ
Published On :

ಶಿಮ್ಲಾ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ದಾಳಿ ನಡೆಸಿದ ಬಳಿಕ ಭಾರತದ ಮೇಲೆ ದಾಳಿ ನಡೆಸಲು ಉಗ್ರ ಸಂಘಟನೆಗಳು ಸತತ ಯತ್ನ ನಡೆಸುತ್ತಲೇ ಇವೆ. ಇದಕ್ಕೆ ಉದಾಹರಣೆ ಎಂಬಂತೆ ಹಿಮಾಚಸ ಪ್ರದೇಶದ ಸೊಲಾನ್ ಸೇನಾ ಕಂಟೋನ್ಮೆಂಟ್ ನಲ್ಲಿ ಪೋಸ್ಟರ್ ವೊಂದು ದೊರಕಿದ್ದು, ಶೀಘ್ರದಲ್ಲೇ ದಾಳಿ ನಡೆಸುವ ಎಚ್ಚರಿಕೆಯನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಹಿಮಾಚಲ ಪ್ರದೇಶದ ಸೊನಾಲ್ ಜಿಲ್ಲೆಯಲ್ಲಿರುವ ಸೇನಾ ಕಂಟೋನ್ಮೆಂಟ್ ಬಳಿ ಪೋಸ್ಟರ್ ಗಳು ದೊರಕಿದ್ದು, ಪೋಸ್ಟರ್ ನಲ್ಲಿ ಇಸಿಸ್ (ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಆ್ಯಂಡ್ ಇರಾನ್) ಕಮಿಂಗ್ ಸೂನ್ ಎಂದು ಇಂಗ್ಲೀಷ್, ಹಿಂದಿ ಮತ್ತು ಉರ್ದು ಭಾಷಣೆಯಲ್ಲಿ ಬರೆಯಲಾಗಿದೆ.

ಒಂದು ಪೋಸ್ಟರ್ ನಲ್ಲಿ ಇಸಿಸ್ ಕಮಿಂಗ್ ಸೂನ್ ಎಂದು ಬರೆದಿದ್ದರೆ, ಮತ್ತೊಂದು ಪೋಸ್ಟರ್ ನಲ್ಲಿ ಶೀಘ್ರದಲ್ಲಿಯೇ ಸುಬತುವಿನಿಂದ ನೇಪಾಳದವರೆಗೂ ಮೂರು ಪ್ರಬಲ ಬಾಂಬ್ ಗಳನ್ನು ಸ್ಫೋಟಿಸಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆಂದು ಹೇಳಲಾಗುತ್ತಿದೆ.

ಇದೀಗ ಪೋಸ್ಟರ್ ಗಳನ್ನು ವಶಕ್ಕೆ ಪಡೆದುಕೊಂಡಿರುವ ಅಧಿಕಾರಿಗಳು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಆರಂಭಿಸಿದ್ದಾರೆ. ಅಲ್ಲದೆ, ಪೋಸ್ಟರ್ ಗಳಿಂದ ಹೆದರಂತೆ ಸ್ಥಳೀಯರಿಗೆ ಧೈರ್ಯವನ್ನು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.