ಭಾರತದ ಯುಎನ್ಎಸ್ ಸಿ ಸದಸ್ಯತ್ವ ಬೆಂಬಲದ ಪ್ರಶ್ನೆಗೆ ಟ್ರಂಪ್ ವಕ್ತಾರರ ನಿರುತ್ತರ!
ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಬೆಂಬಲ ನೀಡಿದ್ದ ಭಾರತದ ಯುಎನ್ ಎಸ್ ಸಿ ಸದಸ್ಯತ್ವದ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಅವರ ವಕ್ತಾರರು ನಿರುತ್ತರರಾಗಿದ್ದಾರೆ.

Published On :
ವಾಷಿಂಗ್ ಟನ್: ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಬೆಂಬಲ ನೀಡಿದ್ದ ಭಾರತದ ಯುಎನ್ ಎಸ್ ಸಿ ಸದಸ್ಯತ್ವ( ಭದ್ರತಾ ಮಂಡಳಿಯ ಶಾಶ್ವತ ಸದಸ್ಯತ್ವ) ದ ಬಗ್ಗೆ ಹೊಸ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವೇನು? ಎಂಬ ಬಗ್ಗೆ ಜಾಗತಿಕ ಮಟ್ಟದಲ್ಲಿ ಕುತೂಹಲ ಮೂಡಿದೆ. ಆದರೆ ಈ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಡೊನಾಲ್ಡ್ ಟ್ರಂಪ್ ಅವರ ವಕ್ತಾರರು ನಿರುತ್ತರರಾಗಿದ್ದಾರೆ.
ಭದ್ರತಾ ಮಂಡಳಿಯ ಹೊಸ ಸದಸ್ಯತ್ವಗಳ ಬಗ್ಗೆ ಹೆಚ್ಚಿನದ್ದನ್ನು ಮಾತನಾಡುವುದಿಲ್ಲ ಎಂದಷ್ಟೇ ಡೊನಾಲ್ಡ್ ಟ್ರಂಪ್ ಅವರ ವಕ್ತಾರ ಸಿಯಾನ್ ಸ್ಪೈಸರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಈ ಮೂಲಕ ಅಮೆರಿಕಾದ ಹೊಸ ಆಡಳಿತ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕೆ ಬೆಂಬಲ ನೀಡುತ್ತದೆಯೋ ಇಲ್ಲವೋ ಎಂಬ ಪ್ರಶ್ನೆಯನ್ನು ಹಾಗೆಯೇ ಉಳಿಸಿದ್ದಾರೆ.
ಭಾರತದ ಯುಎನ್ಎಸ್ ಸಿ ಸದಸ್ಯತ್ವದ ಬಗ್ಗೆ ಮಾತನಾಡಲು ನಿರಾಕರಿಸಿರುವ ಸ್ಪೈಸರ್, ಭಾರತ-ಅಮೆರಿಕಾದ ದ್ವಿಪಕ್ಷೀಯ ಬಾಂಧವ್ಯ ಮುಂದಿನ ದಿನಗಳಲ್ಲಿ ಮತ್ತಷ್ಟು ಗಟ್ಟಿಯಾಗಲಿದೆ, ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನೀತಿಗಳು ಈಗಷ್ಟೇ ರೂಪುಗೊಳ್ಳುತ್ತಿವೆ. ಈ ಪೈಕಿ ಭಾರತದ ಯುಎನ್ಎಸ್ ಸಿ ಸದಸ್ಯತ್ವದ ವಿಷಯಕ್ಕಿಂತ ಆದ್ಯತೆಯ ವಿಷಯಗಳು ಅಮೆರಿಕಾದ ವಿದೇಶಾಂಗ ನೀತಿಗಳಲ್ಲಿ ಇರಬಹುದು ಎಂದಷ್ಟೇ ಹೇಳಿದ್ದಾರೆ. ಅಮೆರಿಕಾದ ಈ ಹಿಂದಿನ ಅಧ್ಯಕ್ಷ ಬರಾಕ್ ಒಬಾಮ, ತಮ್ಮ ಆಡಳಿತಾವಧಿಯಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತದ ಸದಸ್ಯತ್ವಕ್ಕೆ ಸಂಪೂರ್ಣ ಬೆಂಬಲ ನೀಡಿದ್ದರು. ಈ ಬಗ್ಗೆ ಹೊಸ ಅಧ್ಯಕ್ಷರ ನಿಲುವು ಏನಿರಲಿದೆ ಎಂಬ ಕುತೂಹಲ ಮೂಡಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
indiaಭಾರತUN Security Councilವಿಶ್ವಸಂಸ್ಥೆ ಭದ್ರತಾ ಮಂಡಳಿpermanent seatDonald Trumpಡೊನಾಲ್ಡ್ ಟ್ರಂಪ್ಶಾಶ್ವತ ಸದಸ್ಯತ್ವ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


