ವಿಶ್ವಸಂಸ್ಥೆ ಭದ್ರತಾ ಮಂಡಳಿ

ಮತ್ತಷ್ಟು ಜಾಗತಿಕ ಬಲ: ವಿಶ್ವಸಂಸ್ಥೆ ಭದ್ರತಾ ಮಂಡಳಿ ಖಾಯಂ ಸ್ಥಾನ ಕುರಿತು ಭಾರತಕ್ಕೆ ಪೋರ್ಚುಗಲ್, ಮಾರಿಷಸ್ ಬೆಂಬಲ!
ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ನಡೆಯುತ್ತಿರುವ ವಿಶ್ವಸಂಸ್ಥೆಯ 81ನೇ ಸಾಮಾನ್ಯ ಸಭೆಯ ಚರ್ಚೆ ವೇಳೆ ಪೋರ್ಚುಗಲ್ ಮತ್ತು ಮಾರಿಷಸ್ ಭಾರತಕ್ಕೆ ಸ್ಪಷ್ಟ ಬೆಂಬಲ ಘೋಷಿಸಿವೆ.

ಹಾರ್ಮುಜ್ ಜಲಸಂಧಿ ಮೇಲೆ ದಾಳಿ: ಭಾರತ ತೀವ್ರ ಖಂಡನೆ; ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನ ಶಮನಕ್ಕೆ ಕರೆ
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪಶ್ಚಿಮ ಏಷ್ಯಾ ಪರಿಸ್ಥಿತಿ ಕುರಿತ ಮುಕ್ತ ಚರ್ಚೆಯನ್ನು ಉದ್ದೇಶಿಸಿ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಶಾಶ್ವತ ಪ್ರತಿನಿಧಿ ರಾಯಭಾರಿ ಪರ್ವತನೇನಿ ಹರೀಶ್, ಅಲ್ಪ ವಿರಾಮದ ಬಳಿಕ ಮತ್ತೆ ಸಂಘರ್ಷಗಳು ಆರಂಭವಾಗಿರುವುದು ಆತಂಕಕಾರಿ ಬೆಳವಣಿಗೆ ಎಂದು ಕರೆ ನೀಡಿದರು.

Iran War: Hormuz ಕುರಿತು ಬಹ್ರೇನ್ ನೇತೃತ್ವದಲ್ಲಿ ಕರಡು ನಿರ್ಣಯ; ಇಂದು UNSC ಮತದಾನ!
ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯುವ ಕುರಿತು ಬಹ್ರೇನ್ ಶನಿವಾರ ಪ್ರಸ್ತಾಪಿಸಿದ ಕರಡು ನಿರ್ಣಯದ ಮೇಲೆ UN ಭದ್ರತಾ ಮಂಡಳಿ ಮತ ಚಲಾಯಿಸಲಿದೆ.

ಹಾರ್ಮುಜ್ ಜಲಸಂಧಿ ಬಿಕ್ಕಟ್ಟು: 'ಪ್ರಚೋದನಕಾರಿ ಕ್ರಮ' ಬೇಡ; ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಇರಾನ್ ಎಚ್ಚರಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಸಮುದ್ರ ಮಾರ್ಗದ ಸುರಕ್ಷತೆಗಾಗಿ ರಕ್ಷಣಾ ಪಡೆ ನಿಯೋಜಿಸುವ ಕುರಿತು ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಶುಕ್ರವಾರ ಮತದಾನ ನಡೆಯಬೇಕಿತ್ತು. ಆದರೆ, ಈ ಮತದಾನವನ್ನು ಮುಂದೂಡಲಾಗಿದ್ದು, ಹೊಸ ದಿನಾಂಕ ಇನ್ನೂ ಘೋಷಿಸಲಾಗಿಲ್ಲ.

ನಿರಂತರ ಭಯೋತ್ಪಾದನೆ: UNSC ಯಲ್ಲಿ ಪಾಕ್ ಮುಟ್ಟಿ ನೋಡಿಕೊಳ್ಳುವಂತೆ ಭಾರತದ ತಿರುಗೇಟು!
ಸೋಮವಾರ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಬಹಿರಂಗ ಚರ್ಚೆಯಲ್ಲಿ ವಿಶ್ವಸಂಸ್ಥೆಯಲ್ಲಿನ ಪಾಕಿಸ್ತಾನದ ರಾಯಭಾರಿ ಅಸಿಮ್ ಇಫ್ತಿಕರ್ ಅಹ್ಮದ್ ಹೇಳಿಕೆಗಳಿಗೆ ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ಪ್ರತಿನಿಧಿ ಪರ್ವತನೇನಿ ಹರೀಶ್ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.

ಪಾಕಿಸ್ತಾನ ಸರಣಿ ಸಾಲಗಾರ, ಮತಾಂಧತೆ-ಭಯೋತ್ಪಾದನೆಯಲ್ಲಿ ಮುಳುಗಿದೆ: UNSC ಸಭೆಯಲ್ಲಿ ಭಾರತ ಕಟು ಟೀಕೆ
ಅಂತಾರಾಷ್ಟ್ರೀಯ ಶಾಂತಿ ಮತ್ತು ಭದ್ರತೆಯನ್ನು ಉತ್ತೇಜಿಸುವ ಬಗ್ಗೆ ನಾವು ಚರ್ಚಿಸುತ್ತಿರುವಾಗ, ಸಾರ್ವತ್ರಿಕವಾಗಿ ಗೌರವಿಸಬೇಕಾದ ಕೆಲವು ಮೂಲಭೂತ ತತ್ವಗಳಿವೆ ಎಂದು ಗುರುತಿಸುವುದು ಅತ್ಯಗತ್ಯ.

ಭಾರತ-ಪಾಕ್ ಉದ್ವಿಗ್ನತೆ: ಪಾಕಿಸ್ತಾನಕ್ಕೆ ವಿಶ್ವಸಂಸ್ಥೆ ಭದ್ರತಾ ಮಂಡಳಿ ಸದಸ್ಯರ ತಪರಾಕಿ; ಉದ್ವಿಗ್ನತೆ ತಗ್ಗಿಸಲು ಕರೆ
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕರು 26 ಜನರನ್ನು, ಹೆಚ್ಚಾಗಿ ಪ್ರವಾಸಿಗರನ್ನು ಕೊಂದ ಕೆಲವು ದಿನಗಳ ನಂತರ ಈ ಸಭೆ ನಡೆದಿದೆ.

ಭಾರತ-ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಕುರಿತು UNSC ರಹಸ್ಯ ಸಮಾಲೋಚನೆ
15 ರಾಷ್ಟ್ರಗಳ ಭದ್ರತಾ ಮಂಡಳಿಯು ನಡೆಸಿದ ಸಮಾಲೋಚನೆ ನಿನ್ನೆ ಸೋಮವಾರ ಮಧ್ಯಾಹ್ನ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆದವು ಆದರೆ ಸಭೆಯ ನಂತರ ಭದ್ರತಾ ಮಂಡಳಿಯಿಂದ ಯಾವುದೇ ಹೇಳಿಕೆ ಹೊರಬಂದಿಲ್ಲ.

ಪಹಲ್ಗಾಮ್‌ನಲ್ಲಿ ಉಗ್ರರ ಅಟ್ಟಹಾಸ: ವಿಶ್ವಸಂಸ್ಥೆ ತೀವ್ರ ಖಂಡನೆ; ಭಯೋತ್ಪಾದನೆ ನಿರ್ಮೂಲನೆಗೆ ಎಲ್ಲಾ ರಾಷ್ಟ್ರಗಳು ಒಗ್ಗೂಡಿ ಹೋರಾಡುವಂತೆ ಕರೆ
ಈ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು, ಕಾಶ್ಮೀರದಲ್ಲಿ ಪ್ರವಾಸಿಗರನ್ನು ಹತ್ಯೆ ಮಾಡಿದ್ದು ಅಮಾನವೀಯ ಕೃತ್ಯ. ಮುಗ್ಧ ಜನರನ್ನು ಕೊಂದಿರುವ ಉಗ್ರರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

