ದೇಶ

ಮೋದಿ 'ಸತ್ಯದ ಹಂತಕ' ಹೇಳಿಕೆ: ನಿತೀಶ್ ಬೆನ್ನಿಗೆ ನಿಂತ ಆರ್'ಜೆಡಿ, ಎನ್'ಸಿಪಿ

ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಸತ್ಯದ ಹಂತಕ' ಎಂದು ಹೇಳಿಕೆ ನೀಡಿ ಟೀಕೆಗಳಿಗೆ ಗುರಿಯಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಷ್ಟ್ರೀಯ ಜನತಾ ದಳ, ಜನತಾ ದಳ (ಸಂಯುಕ್ತ) ಹಾಗೂ ರಾಷ್ಟ್ರೀಯ ಕಾಂಗ್ರೆಸ್...

ಮೋದಿ 'ಸತ್ಯದ ಹಂತಕ' ಹೇಳಿಕೆ: ನಿತೀಶ್ ಬೆನ್ನಿಗೆ ನಿಂತ ಆರ್'ಜೆಡಿ, ಎನ್'ಸಿಪಿ
ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್
Published On :
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರು 'ಸತ್ಯದ ಹಂತಕ' ಎಂದು ಹೇಳಿಕೆ ನೀಡಿ ಟೀಕೆಗಳಿಗೆ ಗುರಿಯಾಗಿರುವ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ರಾಷ್ಟ್ರೀಯ ಜನತಾ ದಳ, ಜನತಾ ದಳ (ಸಂಯುಕ್ತ) ಹಾಗೂ ರಾಷ್ಟ್ರೀಯ ಕಾಂಗ್ರೆಸ್ ಪಕ್ಷಗಳು ಭಾನುವಾರ ಬೆಂಬಲ ವ್ಯಕ್ತಪಡಿಸಿವೆ. 
ನಿತೀಶ್ ಕುಮಾರ್ ಅವರಿಗೆ ಬೆಂಬಲ ವ್ಯಕ್ತಪಡಿಸಿರುವ ಆರ್ ಜೆಡಿ, ಪ್ರಧಾನಿ ಮೋದಿಯವರು ಜನರ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಟ್ರಂಪ್ ಬಳಿಗ ಸತ್ಯದ ಹಂತಕ ಯಾರೆಂದರೆ, ಅದರು ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಅವರ ಸ್ನೇಹಿತರು, ಗೆಲುವಿನ ಬಳಿಕ ನಿತೀಶ್ ಕುಮಾರ್ ಅವರು ಹೇಳಿರುವುದು ಸತ್ಯವಾದ ಮಾತು. ಗಂಗೆಗೆ ಏನು ಬೇಕೆಂದು ಎಂದಾದರೂ ಪ್ರಧಾನಿ ಮೋದಿಯವರು ಕೇಳಿದ್ದಾರೆಯೇ? ಉತ್ತರಪ್ರದೇಶದಲ್ಲಿ ಏನನ್ನು ಮಾತನಾಡಿದ್ದರೋ ಅದನ್ನೇ ಮತ್ತೆ ಮಣಿಪುರದಲ್ಲಿಯೂ ಮಾತನಾಡಿದ್ದಾರೆ. ಪ್ರಧಾನಮಂತ್ರಿ ಕಚೇರಿಗೆ ಅದರದ್ದೇ ಆದ ಗೌರವವಿದೆ. ಅಂತಹ ಅಧಿಕಾರವನ್ನು ಹೊತ್ತಿರುವ ಪ್ರಧಾನಮಂತ್ರಿಗಳು ಸತ್ಯವನ್ನು ಬಿಟ್ಟು ಮುಂದಕ್ಕೆ ಹೋದರೆ, ಸಾಮಾನ್ಯವಾಗಿಯೇ ಜನರ ನಂಬಿಕೆಯನ್ನು ಕಳೆದುಕೊಳ್ಳುತ್ತಾರೆಂದು ಹೇಳಿದೆ. 
ಜೆಡಿಯು ಕೂಡ ನಿತೀಶ್ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದು, ವಾರಣಾಸಿ ಚುನಾವಣೆ ವೇಳೆ ಜನರಿಗೆ ನೀಡಿದ್ದ ಭರವಸೆ ಈಡೇರಿಸುವಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವಿಫಲರಾಗಿದ್ದಾರೆ. ಚುನಾವಣೆ ಸಮಯ ಬಂದಾಗ ಮಾತನಾಡುತ್ತಾರೆ, ಭರವಸೆ ನೀಡುತ್ತಾರೆ. ನಂತರ ಆ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲರಾಗುತ್ತಾರೆ ಎಂದು ಹೇಳಿದೆ. 
ಎನ್ ಸಿಬಿ ನಾಯಕ ತರಿಕ್ ಅನ್ವರ್ ಅವರು ಮಾತನಾಡಿ, ನಿತೀಶ್ ಕುಮಾರ್ ಅವರು ಹೇಳಿರುವುದು ಸರಿಯಾಗಿದೆ. ಗಂಗಾ ನದಿಯ ಪರಿಸ್ಥಿತಿ ಹೇಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಗಂಗಾ ನದಿಯನ್ನು ಸ್ವಚ್ಛಗೊಳಿಸಲಾಗುತ್ತದೆ ಎಂದು ದೊಡ್ಡ ದೊಡ್ಡ ಭರವಸೆಗಳನ್ನು ನೀಡಲಾಗುತ್ತಿದೆ. ಭರವಸೆ ನೀಡಿ 3 ವರ್ಷಗಳಾಗಿವೆ. ಆದರೂ ಗಂಗೆಯ ಪುತ್ರ ಪರಿಸ್ಥಿತಿಯನ್ನು ಇನ್ನೂ ಸುಧಾರಿಸಿಲ್ಲ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.