ಗುಜರಾತ್ ನ 6 ಬೂತ್ ಗಳಲ್ಲಿ ಮರುಮತದಾನ ಆರಂಭ
ಗುಜರಾತ್ ವಿಧಾನಸಭೆ ಚುನಾವಣೆಯ ನಿಮಿತ್ತ ಭಾನುವಾರ 6 ಬೂತ್ ಗಳಲ್ಲಿ ಮರುಮತದಾನ ಆರಂಭವಾಗಿದೆ.

Published On :
ಅಹ್ಮದಾಬಾದ್: ಗುಜರಾತ್ ವಿಧಾನಸಭೆ ಚುನಾವಣೆಯ ನಿಮಿತ್ತ ಭಾನುವಾರ 6 ಬೂತ್ ಗಳಲ್ಲಿ ಮರುಮತದಾನ ಆರಂಭವಾಗಿದೆ.
ಈ ಹಿಂದೆ ನಡೆದ ಮತದಾನ ವೇಳೆ ಮತಯಂತ್ರಗಳಲ್ಲಿ ದೋಷಕಂಡು ಬಂದು ಮತದಾನ ಅಸ್ಥವ್ಯಸ್ಥವಾಗಿತ್ತು. ಈ ಹಿನ್ನಲೆಯಲ್ಲಿ ನಿನ್ನೆಯಷ್ಟೇ ಚುನಾವಣಾ ಆಯೋಗ ಇಂದು ಮರುಮತದಾನ ಘೋಷಣೆ ಮಾಡಿತ್ತು. ಅದರಂತೆ ಇಂದು 6 ಬೂತ್ ಗಳಲ್ಲಿ ಮರುಮತದಾನ ಆರಂಭಿಸಲಾಗಿದೆ. ಗುಜರಾತ್ ನ ವಿರಂಗಾಮ್, ಸಾವ್ಲಿ ವಿಧಾನಸಭಾ ಕ್ಷೇತ್ರದ ತಲಾ ಎರಡು ಬೂತ್ ಗಳು ಮತ್ತು ವಡ್ಗಾಮ್ ಮತ್ತು ಡಸ್ಕ್ರೋಯ್ ನ ತಲಾ ಒಂದು ಬೂತ್ ಗಳಲ್ಲಿ ಮತದಾನ ಆರಂಭವಾಗಲಿದೆ.
ನಾಳೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳಲಿದೆ.
ಮತದಾನ ಅಂತ್ಯವಾಗುತ್ತಿದ್ದಂತೆಯೇ ಬಹಿರಂಗವಾಗಿದ್ದ ಚುನವಣೋತ್ತರ ಸಮೀಕ್ಷೆಗಳು ಎರಡೂ ರಾಜ್ಯಗಳಲ್ಲಿ ಬಿಜೆಪಿ ಜಯ ಸಾಧಿಸಲಿದೆ ಎಂದು ವರದಿ ನೀಡಿದ್ದವು,
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
bjpಬಿಜೆಪಿAhmadabadElection Commissionಚುನಾವಣಾ ಆಯೋಗಅಹ್ಮದಾಬಾದ್ಗುಜರಾತ್ ವಿಧಾನಸಭಾ ಚುನಾವಣೆ 2017Gujarat Assembly Election 2017
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


