ಭಾರತದಲ್ಲಿ ಎಫ್-16 ಉತ್ಪಾದನಾ ಘಟಕ ಪ್ರಾರಂಭಿಸಲು ಲಾಕ್ ಹೀಡ್ ಮಾರ್ಟಿನ್ ಸಂಸ್ಥೆ ಉತ್ಸುಕ!
ಅತ್ಯಾಧುನಿಕ ಎಫ್-16 ಫೈಟರ್ ಪ್ಲೇನ್'ಗಳನ್ನ ಭಾರತದಲ್ಲಿ ತಯಾರಿಸಲು ಅಮೆರಿಕದ ಲಾಕ್'ಹೀಡ್ ಮಾರ್ಟಿನ್ ಸಂಸ್ಥೆ ಉತ್ಸಾಹ ತೋರಿದ್ದು, ಭಾರತದಲ್ಲಿ ಎಫ್-16 ಫೈಟರ್ ವಿಮಾನಗಳ ಉತ್ಪಾದನಾ ಘಟಕ...

Published On :
ನವದೆಹಲಿ: ಅತ್ಯಾಧುನಿಕ ಮತ್ತು ಶಕ್ತಿಶಾಲಿ ಎಫ್-16 ಫೈಟರ್ ಪ್ಲೇನ್'ಗಳನ್ನ ಭಾರತದಲ್ಲಿ ತಯಾರಿಸಲು ಅಮೆರಿಕದ ಲಾಕ್'ಹೀಡ್ ಮಾರ್ಟಿನ್ ಸಂಸ್ಥೆ ಉತ್ಸಾಹ ತೋರಿದ್ದು, ಭಾರತದಲ್ಲಿ ಎಫ್-16 ಫೈಟರ್ ವಿಮಾನಗಳ ಉತ್ಪಾದನಾ ಘಟಕ ಪ್ರಾರಂಭಿಸಲು ಚಿಂತನೆ ನಡೆಸಿದೆ ಎಂದು ಸಂಸ್ಥೆಯ ಉನ್ನತ ಅಧಿಕಾರಿ ತಿಳಿಸಿದ್ದಾರೆ.
ಭಾರತದಲ್ಲಿ ಅತ್ಯಾಧುನಿಕ ಫೈಟರ್ ಪ್ಲೇನ್ ಗಳನ್ನು ತಯಾರಿಸಲು ಸ್ವೀಡನ್ ನ ಸಂಸ್ಥೆ ಹಾಗೂ ಅಮೆರಿಕದ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಗಳು ತುದಿಗಾಲಲ್ಲಿ ನಿಂತಿದ್ದು, ಲಾಕ್ ಹೀಡ್ ಮಾರ್ಟಿನ್ ಭಾರತವನ್ನು ವಿದೇಶದಲ್ಲಿನ ತನ್ನ ಅತ್ಯಾಧುನಿಕ ಎಫ್-16 ಫೈಟರ್ ವಿಮಾನಗಳ ಏಕೈಕ ಉತ್ಪಾದನಾ ಕೇಂದ್ರವನ್ನಾಗಿ ಮಾಡಿಕೊಳ್ಳಲು ಬಯಸಿದ್ದು, ಭಾರತದ ಸೇನೆಗೆ ವಿಮಾನಗಳನ್ನು ಪೂರೈಕೆ ಮಾಡುವುದರ ಜೊತೆಗೆ ಇತರ ರಾಷ್ಟ್ರಗಳಿಗೂ ಪೂರೈಕೆ ಮಾಡುವ ಉದ್ದೇಶ ಹೊಂದಿದೆ.
ಭಾರತದಲ್ಲಿ ಅತ್ಯಾಧುನಿಕ ಫೈಟರ್ ವಿಮಾನಗಳ ತಯಾರಿಕೆ, ಅಭಿವೃದ್ಧಿಯ ಬಗೆಗಿನ ಯೋಜನೆಯ ವಿವರವನ್ನು ಸಲ್ಲಿಸುವಂತೆ ಭಾರತ ಸರ್ಕಾರ ಕೆಲವೇ ದಿನಗಳಲ್ಲಿ ಸ್ವೀಡನ್ ನ ಸಂಸ್ಥೆ ಹಾಗೂ ಅಮೆರಿಕದ ಲಾಕ್ ಹೀಡ್ ಮಾರ್ಟಿನ್ ಸಂಸ್ಥೆಗಳಿಗೆ ಸೂಚಿಸಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಭಾರತIndian Air Forceಉತ್ಪಾದನಾ ಘಟಕproduction plantLockheed Martinಲಾಕ್ ಹೀಡ್ ಮಾರ್ಟಿನ್F-16 fighter planesಎಫ್-16 ಫೈಟರ್ ವಿಮಾನ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


