ಕಿಲ್ಲರ್ ಗೇಮ್ ಬ್ಲೂ ವೇಲ್ ಚಾಲೆಂಜ್ ನ್ನು ಉತ್ತೇಜಿಸಿದ ಕೇರಳ ಯುವಕನ ವಿರುದ್ಧ ಪ್ರಕರಣ ದಾಖಲು
ಕಿಲ್ಲರ್ ಗೇಮ್ ಬ್ಲೂ ವೇಲ್ ಚಾಲೆಂಜ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜಿಸುತ್ತಿದ್ದ ಕೇರಳದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.

Published On :
ಇಡುಕ್ಕಿ: ಕಿಲ್ಲರ್ ಗೇಮ್ ಬ್ಲೂ ವೇಲ್ ಚಾಲೆಂಜ್ ನ್ನು ಸಾಮಾಜಿಕ ಜಾಲತಾಣಗಳಲ್ಲಿ ಉತ್ತೇಜಿಸುತ್ತಿದ್ದ ಕೇರಳದ ಯುವಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಕೇರಳದ ಇಡುಕ್ಕಿಯ ಜೈಸಲ್ ಫ್ರಾನ್ಸಿಸ್ ಅಲಿಯಾಸ್ ಚಾರ್ಲಿ (22) ಎಂಬ ಯುವಕ ಫೇಸ್ ಬುಕ್ ನಲ್ಲಿ ಬ್ಲೂ ವೇಲ್ ಚಾಲೆಂಜ್ ನ್ನು ಉತ್ತೇಜಿಸುತ್ತಿದ್ದ, ಆತನ ವಿರುದ್ಧ ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಕೆಟ್ಟ ಸಂಗತಿಗಳನ್ನು ಪ್ರಕಟ ಮಾಡುತ್ತಿರುವ ಆರೋಪದಡಿ ಐಟಿ ಕಾಯ್ದೆ 2000 ಪ್ರಕಾರ ಸೆಕ್ಷನ್ 67 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಸ್ಐ ಎಂ ವಿ ಪಾಲೊಸ್ ಈ ಬಗ್ಗೆ ಮಾಹಿತಿ ನೀಡಿದ್ದು, ಗೇಮ್ ನ 4 ಹಂತಗಳನ್ನು ಪೂರೈಸಿರುವುದಾಗಿ ಫೇಸ್ ಬುಕ್ ನಲ್ಲಿ ಅಪ್ ಡೇಟ್ ಮಾಡಿದ್ದ, ಆದರೆ ಅದು ಸುಳ್ಳು ಮಾಹಿತಿಯಾಗಿತ್ತು, ಆತ ಬ್ಲೂ ವೇಲ್ ಚಾಲೆಂಜ್ ಗೇಮ್ ನ್ನು ಆಡಿರಲಿಲ್ಲ, ತಾನು ಬ್ಲೂ ವೇಲ್ ಚಾಲೆಂಜ್ ಗೇಮ್ ಆಡಿರುವುದಾಗಿ ಕಿಲ್ಲರ್ ಗೇಮ್ ನ್ನು ಉತ್ತೇಜಿಸಿದ್ದರ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


