ರೂ.5 ಲಕ್ಷ ಪಡೆದು 65 ವರ್ಷದ ಮುದುಕನನ್ನು ವಿವಾಹವಾದ 16 ವರ್ಷದ ಹುಡುಗಿ!
ರೂ.5 ಲಕ್ಷ ಹಣ ಪಡೆದುಕೊಂಡು 65 ವರ್ಷದ ಒಮಾನ್ ವೃದ್ಧನೊಂದಿಗೆ 16 ವರ್ಷದ ಹುಡುಗಿಯೊಬ್ಬಳು ವಿವಾಹವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ...

Published On :
ಹೈದರಾಬಾದ್: ರೂ.5 ಲಕ್ಷ ಹಣ ಪಡೆದುಕೊಂಡು 65 ವರ್ಷದ ಒಮಾನ್ ವೃದ್ಧನೊಂದಿಗೆ 16 ವರ್ಷದ ಹುಡುಗಿಯೊಬ್ಬಳು ವಿವಾಹವಾಗಿರುವ ಆಘಾತಕಾರಿ ಘಟನೆ ವರದಿಯಾಗಿದೆ.
ಹೈದರಾಬಾದ್ ನ ನವಾಬ್ ಸಾಹೇಬ್ ಕುಂಟಾ ಪ್ರದೇಶದ ನಿವಾಸಿಯಾಗಿರುವ ಹುಡುಗಿಯ ತಾಯಿ ಸಯೀದಾ ಉನ್ನೀಸಾ ಎಂಬುವವರು ಪ್ರಕರಣ ಸಂಬಂಧ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ನನ್ನ ಪತಿ ಹಾಗೂ ಅತ್ತಿಗೆ ಹಣ ಪಡೆದು ಪುತ್ರಿಯ ವಿವಾಹ ಮಾಡಿದ್ದಾರೆ. ಮಗಳು ಮಸ್ಕತ್ ನಿಂದ ಕರೆ ಮಾಡಿದ್ದಳು. ಈ ವೇಳೆ ನನ್ನನ್ನು ಇಲ್ಲಿಂದ ರಕ್ಷಿಸಿ ಕರೆದುಕೊಂಡು ಹೋಗದಿದ್ದರೆ, ಸತ್ತು ಹೋಗುತ್ತೇನೆಂದು ಹೇಳಿದಳು. ಬಾಲಕಿಯನ್ನು ಹಿಂದಕ್ಕೆ ಕರೆಸಿ ಕುಟುಂಬಕ್ಕೆ ಒಪ್ಪಿಸಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಮೂರು ತಿಂಗಳ ಹಿಂದೆ ಮಗಳ ವಿವಾಹ ನಡೆದಿದ್ದು, ರೂ.5 ಲಕ್ಷ ಕೊಟ್ಟಿರುವ 65 ವರ್ಷದ ಒಮನ್ ಪ್ರಜೆ ಮಸ್ಕತ್ ನಲ್ಲಿ ನೆಲೆಯೂರಿದ್ದಾರೆ. ನಮ್ಮ ಗಮನಕ್ಕೆ ಬರದಂತೆ ಹೋಟೆಲ್ ಒಂದರಲ್ಲಿ ವಿವಾಹ ನಡೆಸಲಾಗಿದೆ. ಒಮನ್ ಗೆ ತೆರಳಿದ ಬಳಿಕ ಆತ ವೀಸಾ ಕಳುಹಿಸಿ ಮಗಳನ್ನು ಕರೆಸಿಕೊಂಡಿದ್ದಾರೆ. ಇದೀಗ ನನ್ನ ಮಗಳು ಕಷ್ಟ ಅನುಭವಿಸುತ್ತಿದ್ದಾಳೆ. ಮಗಳನ್ನು ಹೈದಾರಾಬಾದ್ ಕಳುಹಿಸುವಂತೆ ಆತನಿಗೆ ಮನವಿ ಮಾಡಿದ್ದೆ. ಹಣ ಕೊಟ್ಟು ನಿಮ್ಮ ಮಗಳನ್ನು ಕೊಂಡುಕೊಂಡಿದ್ದೇನೆ. ಕೊಟ್ಟ ಹಣವನ್ನು ವಾಪಸ್ ನೀಡಿದರೆ, ಆಕೆಯನ್ನು ಕಳುಹಿಸುವುದಾಗಿ ಆತ ಹೇಳುತ್ತಿದ್ದಾನೆಂದು ತಾಯಿ ದೂರಿನಲ್ಲಿ ಹೇಳಿಕೊಂಡಿದ್ದಾರೆ.
ಹುಡುಗಿಯ ತಾಯಿ ಹೇಳುವ ಪ್ರಕಾರ, ಆಕೆಯ ಪತಿಯ ಸಹೋದರಿ ಗೌಸಿಯಾ ಹಾಗೂ ಅಕೆಯ ಪತಿ ಸಿಕಂದರ್ ಇಬ್ಬರೂ ಸೇರಿ ಪುತ್ರಿಯ ವಿವಾಹ ಮಾಡಿದ್ದಾರೆ. ಹೈದರಾಬಾದ್ ಗೆ ಬಂದಿದ್ದ ಒಮಾನ್ ಶೇಖ್ ಅಹ್ಮದ್ ಗೆ ಮದುವೆ ಮಾಡಿದ್ದಾರೆ.
ಮೊದಲಿಗೆ ಸಂಬಂಧ ಬಂದಾಗ ನಾನು ಮದುವೆಗೆ ತೀವ್ರವಾಗಿ ವಿರೋಧ ವ್ಯಕ್ತಪಡಿಸಿದ್ದೆ. ಆದರೆ, ಸಿಕಂದರ್ ಬರ್ಕಾಸ್ ನ ಹೋಟೆಲ್ ನಲ್ಲಿ ಖಾಜಿಯ ಮೂಲಕ ಬಲವಂತವಾಗಿ ಮದುವೆ ಮಾಡಿದ್ದಾನೆ. ಇದೀಗ ಮಗಳು ಮಸ್ಕತ್ ನಲ್ಲಿದ್ದು, ಕೆಲ ದಿನಗಳ ಹಿಂದಷ್ಟೇ ಕರೆ ಮಾಡಿದ್ದಳು. ನನ್ನ ರಕ್ಷಿಸುವಂತೆ ತಿಳಿಸಿದಳು. ಬಳಿಕ ವಿವಾಹ ವ್ಯಕ್ತಿಯನ್ನು ಸಂಪರ್ಕಿಸಿದರೆ, ಮದುವೆಗಾಗಿ ನಾನು ರೂ.5 ಲಕ್ಷ ನೀಡಿದ್ದೆ, ಅದನ್ನು ಹಿಂತಿರುಗಿಸಿದರೆ ಹುಡುಗಿಯನ್ನು ಭಾರತಕ್ಕೆ ವಾಪಸ್ ಕಳುಹಿಸುತ್ತೇನೆಂದು ಹೇಳುತ್ತಿದ್ದಾರೆ.
ಒಮಾನ್ ನಲ್ಲಿ ಶೇಖ್ ಐಷಾರಾಮಿ ಜೀವನ ನಡೆಸುತ್ತಿದ್ದು, ಮದುವೆಯಾದ ಬಳಿಕ ಉತ್ತಮ ಭವಿಷ್ಯವಿದೆ ಎಂದು ಹುಡುಗಿಯನ್ನು ನಂಬಿಸಲಾಗಿದೆ ಎಂದು ಸಯೀದಾ ಉನ್ನೀಸಾ ಹೇಳಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


