ದೇಶ

15 ದಿನಗಳಲ್ಲಿ 540 ಕೋಟಿ ಕಪ್ಪುಹಣ ಪತ್ತೆ ಮಾಡಿದ ಐಟಿ!

ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ (ಪಿಎಂಜಿಕೆವೈ)ಡಿ ಅಘೋಷಿತ ಆಸ್ತಿಯನ್ನು ಘೋಷಿಸಿಕೊಳ್ಳುವ ಅವಕಾಶ ಮಾ.31ಕ್ಕೆ ಮುಕ್ತಾಯಗೊಂಡಿದ್ದು, ತೆರಿಗೆ ಇಲಾಖೆ 15 ದಿನಗಳಲ್ಲಿ 540 ಕೋಟಿ ರೂಪಾಯಿ ಕಪ್ಪುಹಣ ಪತ್ತೆ ಮಾದಿದೆ.

15 ದಿನಗಳಲ್ಲಿ 540 ಕೋಟಿ ಕಪ್ಪುಹಣ ಪತ್ತೆ ಮಾಡಿದ ಐಟಿ!
ಐಟಿ ಕಾರ್ಯಾಚರಣೆ
Published On :
ನವದೆಹಲಿ: ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆಯ (ಪಿಎಂಜಿಕೆವೈ)ಡಿ ಅಘೋಷಿತ ಆಸ್ತಿಯನ್ನು ಘೋಷಿಸಿಕೊಳ್ಳುವ ಅವಕಾಶ ಮಾ.31ಕ್ಕೆ ಮುಕ್ತಾಯಗೊಂಡಿದ್ದು, ತೆರಿಗೆ ಇಲಾಖೆ 15 ದಿನಗಳಲ್ಲಿ 540 ಕೋಟಿ ರೂಪಾಯಿ ಕಪ್ಪುಹಣ ಪತ್ತೆ ಮಾದಿದೆ. 
ಏ.1 ರಿಂದ ದೇಶಾದ್ಯಂತ ತೆರಿಗೆ ಕಳ್ಳತನವನ್ನು ಬಯಲಿಗೆಳೆಯಲು ನಡೆದ ದಾಳಿಯಲ್ಲಿ ಒಟ್ಟು 540 ಕೋಟಿ ರೂಪಾಯಿ ಹಣ ಪತ್ತೆಯಾಗಿದ್ದು, ಕೇವಲ ನಾಮ್ ಕೇ ವಾಸ್ತೆ ನಡೆಯುತ್ತಿದ್ದ ಕಂಪನಿಗಳ ಮೇಲೆ, ರಿಯಲ್ ಎಸ್ಟೇಟ್ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ದಾಳಿ ನಡೆಸಲಾಗಿದೆ. 
ಏ.15 ರವರೆಗೆ ಸಂಗ್ರಹವಾಗಿರುವ ಮಾಹಿತಿಯ ಪ್ರಕಾರ ಐಟಿ ಇಲಾಖೆ 250 ಶೋಧಕಾರ್ಯಾಚರಣೆ ಹಾಗೂ ಸಮೀಕ್ಷೆ ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ನಾಮ್ ಕೇ ವಾಸ್ತೆ ನಡೆಯುತ್ತಿದ್ದ ಕನಿಷ್ಠ 300 ಸಂಸ್ಥೆಗಳನ್ನು ಪತ್ತೆಯಾಗಿವೆ ಎಂದು ತಿಳಿದುಬಂದಿದೆ. ಅಘೋಷಿತ ಆಸ್ತಿಯನ್ನು ಘೋಷಿಸಿಕೊಳ್ಳುವುದಕ್ಕಾಗಿ ಜಾರಿಗೊಳಿಸಲಾಗಿದ್ದ ಪ್ರಧಾನ ಮಂತ್ರಿ ಗರೀಬ್‌ ಕಲ್ಯಾಣ ಯೋಜನೆ ಮುಕ್ತಾಯಗೊಂಡ ಬೆನ್ನಲ್ಲೇ ಬೃಹತ್ ಪ್ರಮಾಣದ ಮೊತ್ತ ಬಹಿರಂಗವಾಗಿರುವುದು ಮಹತ್ವ ಪಡೆದುಕೊಂಡಿದೆ. ಐಟಿ ಇಲಾಖೆಯ ದಾಳಿ ಹೀಗೆಯೇ ಮುಂದುವರೆಯಲಿದ್ದು, ಮತ್ತಷ್ಟು ಕಪ್ಪುಹಣ ಬಯಲಿಗೆ ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.