ದೇಶ

ಮಗಳಿಗೆ ಮದುವೆ ಉಡುಗೊರೆಯಾಗಿ ಹಸು ನೀಡಿದ ಮುಸ್ಲಿಮ್ ತಂದೆ

ಮುಸ್ಲಿಂ ವ್ಯಕ್ತಿಯೋರ್ವ ತನ್ನ ಮಗಳಿಗೆ ಮದುವೆಯ ಉಡುಗೊರೆಯಾಗಿ ಹಸುವನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾನೆ...

ಮಗಳಿಗೆ ಮದುವೆ ಉಡುಗೊರೆಯಾಗಿ ಹಸು ನೀಡಿದ ಮುಸ್ಲಿಮ್ ತಂದೆ
ಸಾಂದರ್ಭಿಕ ಚಿತ್ರ
Published On :
ರೋಹ್ಟಕ್:  ಮುಸ್ಲಿಂ ವ್ಯಕ್ತಿಯೋರ್ವ ತನ್ನ ಮಗಳಿಗೆ ಮದುವೆಯ ಉಡುಗೊರೆಯಾಗಿ ಹಸುವನ್ನು ನೀಡಿ ಎಲ್ಲರ ಗಮನ ಸೆಳೆದಿದ್ದಾನೆ.
ಹರಿಯಾಣದ ಸೋನಿಪತ್‌ ಜಿಲ್ಲೆಯ ಖರ್ಖೋಡ್ಡಾ ಗ್ರಾಮದ ನೂರ್‌ ಖಾನ್‌ ಎಂಬಾತ ಮಗಳಿಗೆ ಹಸುವನ್ನು ಉಡುಗೊರೆಯಾಗಿ ನೀಡಿರುವ ತಂದೆ. ಸೋಮವಾರ ಮಗಳ ವಿವಾಹ ನಡೆದಿದ್ದು, ಸಮಾರಂಭದಲ್ಲಿ ಆಕೆಗೆ ಹಸುವನ್ನು ಉಡುಗೊರೆಯಾಗಿ ನೀಡಿದ್ದಾನೆ. 
ನನ್ನ ಮಗಳಿಗೆ ಹಸು ಎಂದರೆ ತುಂಬಾ ಇಷ್ಟ. ನಮ್ಮ ಮನೆಯಲ್ಲಿ ಸ್ಥಳದ ಕೊರತೆಯಿಂದ ಹಸು ಸಾಕಲು ಆಗಿರಲಿಲ್ಲ. ಹೀಗಾಗಿ ಆಕೆಯ ಮದುವೆಯ ಗಿಫ್ಟ್‌ ಆಗಿ  ಹಸು ನೀಡಿದ್ದಾನೆ ಹಸು ಬೆಲೆ 11 ಸಾವಿರದಿಂದ 15 ಸಾವಿರ ರೂಪಾಯಿ ಇರಬೇಕೆಂದು ಅಂದಾಜಿಸಲಾಗಿದೆ. 
ಇನ್ನು, ಮುಸ್ಲಿಂ ತಂದೆಯೊಬ್ಬ ಮಗಳಿಗೆ ಮದುವೆಯ ಉಡುಗೊರೆಯಾಗಿ ಹಸು ನೀಡಿದ್ದು ಹರಿಯಾಣದಲ್ಲಿ ಇದೇ ಮೊದಲು ಎನ್ನಲಾಗುತ್ತಿದೆ. 
ಇನ್ನು ತಂದೆಯಿಂದ ಹಸುವನ್ನು ಉಡುಗೊರೆಯಾಗಿ ಪಡೆದಿರುವ ಪುತ್ರಿ ಗುಲ್ಷಾನಾ, ತನಗೆ ತುಂಬಾ ಸಂತಸವಾಗಿದ್ದು.  ತನ್ನ ಗಂಡನ ಮನೆಯಲ್ಲಿ ಹಸುವನ್ನು ಚೆನ್ನಾಗಿ ನೋಡಿಕೊಳ್ಳುವುದಾಗಿ ಹೇಳಿದ್ದಾಳೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.