cow

ಬಕ್ರೀದ್: ಗೋವಿಗೆ 'ರಾಷ್ಟ್ರೀಯ ಪ್ರಾಣಿ' ಸ್ಥಾನಮಾನ ನೀಡಿ; ಈದ್ ಆಚರಣೆ ಸಂದರ್ಭದಲ್ಲೇ ಮುಸ್ಲಿಂ ಸಂಘಟನೆಗಳ ಆಗ್ರಹ
ಬಕ್ರೀದ್ (ಈದ್-ಉಲ್-ಅಜ್ಹಾ) ಪ್ರಾರ್ಥನೆಗಳ ನಂತರ ದೆಹಲಿಯ ಸೀಲಂಪುರ ಪ್ರದೇಶದಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸಿ, ಹಸುವನ್ನು ‘ರಾಷ್ಟ್ರೀಯ ಪ್ರಾಣಿ’ ಎಂದು ಘೋಷಿಸುವಂತೆ ಆಗ್ರಹಿಸಿವೆ.

ಹಸು ಮೇಲೆ ಅತ್ಯಾಚಾರ; ಕಾಮುಕನ ಬಂಧಿಸಿದ ಪೊಲೀಸರು, Video
ಬಂಧಿತ 24 ವರ್ಷದ ಆರೋಪಿಯ ಗುರುತನ್ನು ಪೊಲೀಸರು ಬಹಿರಂಗಪಡಿಸಿಲ್ಲ. ಆತ ಡೆಲಿವರಿ ಪಾರ್ಟ್ನರ್ ಆಗಿ ಕೆಲಸ ಮಾಡುತ್ತಿದ್ದು, ಕಳೆದ ಒಂದು ತಿಂಗಳಿನಿಂದ ನಗರದ ಕಾಟನ್‌ಪೇಟೆ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಂದು ತಿಳಿದುಬಂದಿದೆ.

ಹುಬ್ಬಳ್ಳಿ: ಒಂದೇ ಬಾರಿ ಮೂರು ಕರುಗಳಿಗೆ ಜನ್ಮ ನೀಡಿದ ಹಸು; ಅಪರೂಪ ಎಂದ ಪಶುವೈದ್ಯರು
ಸಾಮಾನ್ಯವಾಗಿ ಹಸು ಒಂದೇ ಕರು ಹಾಕುವುದು. ಆದರೆ, ತೀರಾ ಅಪರೂಪ ಎಂಬಂತೆ ಎರಡು ಕರು ಹಾಕಬಹುದು. ಮೂರು ಕರುಗಳಿಗೆ ಜನ್ಮ ನೀಡುವುದು ತುಂಬಾ ವಿರಳವಾಗಿದೆ.

ರಾಜ್ಯದಲ್ಲಿ ಹೆಚ್ಚಿದ ಗೋಹಿಂಸೆ-ಗೋಹತ್ಯೆ ಪ್ರಕರಣ: ತನಿಖೆಗೆ ರಾಜ್ಯ ಸರ್ಕಾರ ಆದೇಶ
ಚಾಮರಾಜಪೇಟೆ ಹಸು ಕೆಚ್ಚಲು ಕೊಯ್ದ ಘಟನೆ ಬೆನ್ನಲ್ಲೇ ಹೊನ್ನಾವರದಲ್ಲಿ ಹಸು ಕೊಂದಿರುವ ಘಟನೆ ವರದಿಯಾಗಿದ್ದು, ಎಲ್ಲೆಡೆ ತೀವ್ರ ವಿರೋಧ ಹಾಗೂ ಟೀಕೆಗಳು ವ್ಯಕ್ತವಾಗುತ್ತಿವೆ.

ಹಸುಗಳ ಕೆಚ್ಚಲು ಕೊಯ್ದ ಘಟನೆ: ಮಾಲೀಕರಿಗೆ ವೈಯಕ್ತಿಕ ಪರಿಹಾರ ಕೊಡುತ್ತೇನೆಂದ ಸಚಿವ ಜಮೀರ್
ನಾನು, ಮುಖ್ಯಮಂತ್ರಿಗಳು ಬಳ್ಳಾರಿಯಲ್ಲಿ ಇದ್ದೆವು. ವಿಚಾರ ತಿಳಿದ ತಕ್ಷಣ ಮುಖ್ಯಮಂತ್ರಿಗಳು ಕಮಿಷನರ್‌ಗೆ ಕರೆ ಮಾಡಿ ಹೇಳಿದ್ದಾರೆ. ಕೃತ್ಯ ಎಸಗಿದವರು ಯಾರೇ ಆಗಿರಲಿ, ಕೂಡಲೇ ಬಂಧಿಸುವಂತೆ ಹೇಳಿದ್ದಾರೆ ಎಂದು ಹೇಳಿದರು.

ಜಮೀರ್ ಅವರೇ ನಿಮ್ಮದೇ ಕ್ಷೇತ್ರದಲ್ಲಿ ಸಮಾಜ ತಲೆತಗ್ಗಿಸುವ ಕೃತ್ಯ ನಡೆದಿದೆ, ನೀವು ಮಾತ್ರ ಕಾಣೆ ಆಗಿರುವುದು ಏಕೆ?
ಸಮಾಜಘಾತುಕರು ಚಾಮರಾಜಪೇಟೆಯ ವಿನಾಯಕ ನಗರದ ನಿವಾಸಿ ಕರ್ಣ ಎಂಬುವವರಿಗೆ ಸೇರಿದ 8 ಹಸುಗಳ ಪೈಕಿ 3 ಹಸುಗಳ ಕೆಚ್ಚಲು ಕೊಯ್ದಿದ್ದಾರೆ.

ಇದೆಂತಾ ವಿಕೃತಿ..: ಮಲಗಿದ್ದ ಹಸುಗಳ ಕೆಚ್ಚಲು ಕೊಯ್ದ ದುರುಳರು, ರಕ್ತದ ಮಡುವಿನಲ್ಲಿ ಗೋವುಗಳ ನರಳಾಟ
ರಾತ್ರಿಯಿಡೀ ಹಸುಗಳು ರಕ್ತದ ಮಡುವಿನಲ್ಲಿ ನರಳಾಡಿವೆ. ಇಂದು ಬೆಳಗ್ಗೆ ಘಟನೆ ಬೆಳಕಿಗೆ ಬಂದಿದೆ. ಸಧ್ಯ ಹಸುಗಳಿಗೆ ಚಾಮರಾಜೇಟೆಯ ಪಶು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಗೋವುಗಳೊಂದಿಗೆ ಪ್ರತಿಭಟನೆ: 9 ಮಂದಿ ಬಿಜೆಪಿ ನಾಯಕರ ವಿರುದ್ಧ ಪ್ರಕರಣ ದಾಖಲು
ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ವೇಳೆ 6 ಗೋವುಗಳನ್ನು ಫ್ರೀಡಂ ಪಾರ್ಕ್‌ಗೆ ತಂದಿದ್ದ ಹಿನ್ನೆಲೆಯಲ್ಲಿ 9 ಮಂದಿ ಬಿಜೆಪಿ ನಾಯಕರ ವಿರುದ್ಧ ಪ್ರಾಣಿ ಹಿಂಸೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ: ಕೇಂದ್ರ ಸಚಿವ ಕಿಶನ್ ರೆಡ್ಡಿ
ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸುವ ಯಾವುದೇ ಉದ್ದೇಶವಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಕೇಂದ್ರ ಸಂಸ್ಕೃತಿ ಸಚಿವ ಜಿ ಕಿಶನ್ ರೆಡ್ಡಿ ಅವರು ಇಂದು ಸಂಸತ್ತಿನಲ್ಲಿ ಈ ಮಾಹಿತಿ ನೀಡಿದರು.

