ದೇಶ

ಫೋನ್ ಕದ್ದಿದ್ದಾರೆಂದು 4 ಯುವಕರ ಗುಪ್ತಾಂಗಕ್ಕೆ ಪೆಟ್ರೋಲ್ ಇಂಜೆಕ್ಟ್

ಮೊಬೈಲ್ ಕದ್ದಿದ್ದಾರೆಂದು ಆರೋಪಿಸಿ ನಾಲ್ವರು ಯುವಕರನ್ನು ಚನ್ನಾಗಿ ಥಳಿಸಿ ನಂತರ ಅವರ ಗುಪ್ತಾಂಗಕ್ಕೆ ಪೆಟ್ರೋಲ್ ಇಂಜೆಕ್ಟ್ ಮಾಡಿರುವ ಘಟನೆ ಉತ್ತರಪ್ರದೇಶದ...

ಫೋನ್ ಕದ್ದಿದ್ದಾರೆಂದು 4 ಯುವಕರ ಗುಪ್ತಾಂಗಕ್ಕೆ ಪೆಟ್ರೋಲ್ ಇಂಜೆಕ್ಟ್
ಹಲ್ಲೆಗೊಳಗಾದ ಯುವಕ
Published On :

ಲಖನೌ: ಮೊಬೈಲ್ ಕದ್ದಿದ್ದಾರೆಂದು ಆರೋಪಿಸಿ ನಾಲ್ವರು ಯುವಕರನ್ನು ಚನ್ನಾಗಿ ಥಳಿಸಿ ನಂತರ ಅವರ ಗುಪ್ತಾಂಗಕ್ಕೆ ಪೆಟ್ರೋಲ್ ಇಂಜೆಕ್ಟ್ ಮಾಡಿರುವ ಘಟನೆ ಉತ್ತರಪ್ರದೇಶದ ಘಾಜಿಯಾಬಾದ್ ನಲ್ಲಿ ನಡೆದಿದೆ.

ಡೇರಿ ಮಾಲೀಕನಾದ ರಿಜ್ವಾನ್ ತನ್ನ ಮೊಬೈಲ್ ಅನ್ನು ಕದ್ದಿದ್ದಾರೆ ಎಂದು ತನ್ನ ಸ್ನೇಹಿತರೊಂದಿಗೆ ಸೇರಿಕೊಂಡು 17 ವರ್ಷದ ಝಹೀರ್ ಬೇಗ್, 16 ವರ್ಷದ ಗುಲ್ಜರ್, 25 ವರ್ಷದ ಫಿಮೋ ಹಾಗೂ ಫಿರೋಜ್ ನನ್ನು ತಮ್ಮ ಅಂಗಡಿಗೆ ಕರೆಸಿಕೊಂಡು ಅವರಿಗೆ ಮನಬಂದಂತೆ ಥಳಿಸಿದ್ದಾರೆ. ಅಷ್ಟಕ್ಕೆ ಸುಮ್ಮನಾಗದ ರಿಜ್ವಾನ್ ಬೈಕ್ ನಿಂದ ಸಿರಿಂಜ್ ನಲ್ಲಿ ಪೆಟ್ರೋಲ್ ತುಂಬಿಸಿಕೊಂಡು ನಾಲ್ವರ ಗುಪ್ತಾಂಗಕ್ಕೆ ಹಲವು ಬಾರಿ ಇಂಜೆಕ್ಷನ್ ಕೊಟ್ಟಿದ್ದಾರೆ.

ನೋವಿನಿಂದಾಗಿ ಯುವಕರು ಕಿರುಚಾಡಿ ಪ್ರಜ್ಞಹೀನ ಸ್ಥಿತಿಗೆ ತಲುಪಿದ್ದಾರೆ. ಸದ್ಯಕ್ಕೆ ಯುವಕರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಝಹೀರ್ ಮತ್ತು ಗುಲ್ಜಾರ್ ಗೆ ಸರ್ಜರಿ ಮಾಡಲಾಗಿದ್ದು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ರಿಜ್ವಾನ್ ಹಾಗೂ ಆತನ ಸ್ನೇಹಿತ ಅಖಿಲ್ ನನ್ನು ಪೊಲೀಸರು ಬಂದಿಸಿದ್ದು ಮತ್ತೊಬ್ಬ ಸ್ನೇಹಿತ ತಲೆಮರೆಸಿಕೊಂಡಿದ್ದು ಆತನ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಹೀನ ಕೃತ್ಯ ಎಸಗಿರುವ ರಿಜ್ವಾನ್ ಸಮಾಜವಾದಿ ಪಕ್ಷದ ಮುಖಂಡರೊಬ್ಬರ ಸಹೋದರ ಎಂದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.