ಗಡಿಯಲ್ಲಿ ಉದ್ವಿಗ್ನ: ಪಾಕ್ ವಧುವನ್ನು ವರಿಸಲು ಕಾಯುತ್ತಿರುವ ಜೈಪುರದ ವರ
ಭಾರತ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ಟೈಕ್ ನಡೆಸಿದ ನಂತರ ಎರಡು ರಾಷ್ಟ್ರಗಳ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ...

ಜೋಧ್ ಪುರ; ಭಾರತ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ಟೈಕ್ ನಡೆಸಿದ ನಂತರ ಎರಡು ರಾಷ್ಟ್ರಗಳ ಗಡಿಭಾಗದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಪರಿಸ್ಥಿತಿ ಹೀಗಿರುವಾಗ ಜೋಧ್ ಪುರದ ವರನೊಬ್ಬ ಪಾಕಿಸ್ತಾನದ ಕರಾಚಿ ಮೂಲದ ವಧುವಿನ ಕೈ ಹಿಡಿಯಲು ನಿರ್ಧರಿಸಿದ್ದಾನೆ.
ಜೋಧ್ ಪುರ ನಿವಾಸಿ ನರೇಶ್ ತಿವಾನಿ ಮತ್ತು ಕರಾಚಿಯ ಪ್ರಿಯಾ ಬಚ್ಚಾನಿ ಈ ತಿಂಗಳಲ್ಲಿ ವಿವಾಹ ವಾಗಲು ನಿಶ್ಚಯಿಸಿದ್ದಾರೆ. ಆದರೆ ಪಾಕಿಸ್ತಾನದಲ್ಲಿರುವ ಭಾರತ ರಾಯಭಾರ ಕಚೇರಿ ವಧುವಿನ ಕುಟುಂಬಸ್ಥರಿಗೆ ವೀಸಾ ನೀಡಲು ನಿರಾಕರಿಸಿದೆ.ಹೀಗಾಗಿ ನರೇಶ್ ತಿವಾರಿ ವಧುವಿನ ಕುಟುಂಬಕ್ಕೆ ವೀಸಾ ಕೊಡಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಗೆ ಮನವಿ ಮಾಡಿದ್ದಾರೆ. ಇದಕ್ಕೆ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯಿಸಿರುವ ಸುಷ್ಮಾ ಶೀಘ್ರವೇ ವೀಸಾ ಕೊಡಿಸುವ ಭರವಸೆ ನೀಡಿದ್ದಾರೆ.
ಕಳೆದ ಮೂರು ತಿಂಗಳ ಹಿಂದೆಯೇ ವೀಸಾಕ್ಕಾಗಿ ಅರ್ಜಿ ಹಾಕಲಾಗಿದೆ. ಆದರೆ ಇದುವರೆಗೂ ಯಾವುದೇ ದಾಖಲೆಗಳನ್ನು ನೀಡಿಲ್ಲ. ಮದುವೆ ಸಿದ್ಧತೆಗಳು ನಡೆಯಬೇಕಿದೆ, ಹೀಗಾಗಿ ವೀಸಾ ಕೊಡಿಸುವಂತೆ ನರೇಶ್ ತಿವಾನಿ ಸುಷ್ಮಾ ಅವರಿಗೆ ಮನವಿ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


