ದೇಶ

ಆನ್‌ಲೈನ್‌ನಲ್ಲಿ ಸಿಗಲಿದೆ 2 ಸಾವಿರ ಮುಖಬೆಲೆಯ ನೋಟು!

500-1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ನೋಟು ಬದಲಾವಣೆ ಮಾಡಿಕೊಳ್ಳಲು ಬ್ಯಾಂಕಿನ ಮುಂದೆ ಉದ್ದೂದ್ದ ಕ್ಯೂನಲ್ಲಿ ನಿಲ್ಲುವುದು ಬೇಡ ಎನ್ನುವವರು...

ಆನ್‌ಲೈನ್‌ನಲ್ಲಿ ಸಿಗಲಿದೆ 2 ಸಾವಿರ ಮುಖಬೆಲೆಯ ನೋಟು!
ನೋಟು
Published On :
ನವದೆಹಲಿ: 500-1000 ಮುಖಬೆಲೆಯ ನೋಟುಗಳ ನಿಷೇಧದ ಬಳಿಕ ನೋಟು ಬದಲಾವಣೆ ಮಾಡಿಕೊಳ್ಳಲು ಬ್ಯಾಂಕಿನ ಮುಂದೆ ಉದ್ದೂದ್ದ ಕ್ಯೂನಲ್ಲಿ ನಿಲ್ಲುವುದು ಬೇಡ ಎನ್ನುವವರು ಆನ್ ಲೈನ್ ಶಾಪಿಂಗ್ ಸೈಟ್ ಈಬೇ ನಲ್ಲಿ 2000 ಮುಖಬೆಲೆಯ ನೋಟನ್ನು ಖರೀದಿಸಬಹುದು. 
ಈಬೇ 2000 ರುಪಾಯಿ ಮುಖಬೆಲೆಯ ನೋಟನ್ನು ಬುಧವಾರದಿಂದ ಆನ್‌ಲೈನ್‌ನಲ್ಲಿ ಮಾರಾಟಕ್ಕಿಟ್ಟಿದೆ. 2000 ರುಪಾಯಿ ನೋಟಿಗೆ ಆರಂಭಿಕವಾಗಿ 3,500 ರುಪಾಯಿಗಳನ್ನು ನಿಗಧಿಪಡಿಸಿದೆ. ಆನ್ ಲೈನ್ ಮೂಲಕ ನೋಟು ಪಡೆಯಬೇಕಾದರೆ ನೀವು ಕ್ರೆಡಿಟ್ ಕಾರ್ಡ್ ನಿಂದ ಹಣ ಪಾವತಿ ಮಾಡಬಹುದು. 
ಸಿರಿಯಲ್ ಅಥವಾ ನಿಮ್ಮ ಲಕ್ಕಿ ನಂಬರ್ ಇರುವ ನೋಟು ಬೇಕು ಎಂದರೆ ನೀವು ಹೆಚ್ಚಿನ ಹಣವನ್ನು ಪಾವತಿ ಮಾಡಬೇಕಾಗಿದೆ. ಧಾರ್ಮಿಕವಾಗಿ ಹೆಚ್ಚಿನ ಪ್ರಾಮುಖ್ಯತೆ ಪಡೆದಿರುವ 798 ನಂಬರ್ ಹೊಂದಿರುವ ನೋಟಿಗೆ 1.51 ಲಕ್ಷ ರುಪಾಯಿ ನಿಗಧಿ ಮಾಡಿದೆ. 
ಈಬೇ ಆನ್ ಲೈನ್ ಇಂದೊಂದು ಸ್ವತಂತ್ರ ಮಾರುಕಟ್ಟೆಯಾಗಿದ್ದು ಇಲ್ಲಿ ಮಾರಾಟಗಾರರ ಮೇಲೆ ಮತ್ತು ಮಾರಾಟವಾಗುವ ವಸ್ತುಗಳ ಮೇಲೆ ನಮ್ಮ ನಿಯಂತ್ರಣವಿರುವುದಿಲ್ಲ ಎಂದು ಸಂಸ್ಥೆಯ ಮುಖ್ಯಸ್ಥರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.