ದೇಶ

ಪರ್ಸಿನಲ್ಲಿ ಬರೀ 500ರು. ನೋಟುಗಳನ್ನಿಟ್ಟದ ವ್ಯಕ್ತಿಗೆ ಕಳ್ಳರಿಂದ ಕಪಾಳ ಮೋಕ್ಷ!

ಕಾರ್ಮಿಕನೋರ್ವನಿಂದ ಪರ್ಸ್ ಕದ್ದ ಕಳ್ಳರಿಬ್ಬರು ಅದರೊಳಗೆ ಕೇವಲ 500 ರು. ನೋಟುಗಳಿರುವುದನ್ನು ಕಂಡು ಮತ್ತದೇ ಕಾರ್ಮಿಕನ ಬಳಿ ಬಂದು ಪರ್ಸ್ ಹಿಂದುರುಗಿಸಿ ಕಪಾಳಕ್ಕೆ ಹೊಡೆದ ಪ್ರಸಂಗ ನಡೆದಿದೆ.

ಪರ್ಸಿನಲ್ಲಿ ಬರೀ 500ರು. ನೋಟುಗಳನ್ನಿಟ್ಟದ ವ್ಯಕ್ತಿಗೆ ಕಳ್ಳರಿಂದ ಕಪಾಳ ಮೋಕ್ಷ!
ಸಾಂದರ್ಭಿಕ ಚಿತ್ರ
Published On :

ಗ್ರೇಟರ್ ನೋಯ್ಡಾ: ಕಾರ್ಮಿಕನೋರ್ವನಿಂದ ಪರ್ಸ್ ಕದ್ದ ಕಳ್ಳರಿಬ್ಬರು ಅದರೊಳಗೆ ಕೇವಲ 500 ರು. ನೋಟುಗಳಿರುವುದನ್ನು ಕಂಡು ಮತ್ತದೇ ಕಾರ್ಮಿಕನ ಬಳಿ ಬಂದು ಪರ್ಸ್ ಹಿಂದುರುಗಿಸಿ ಕಪಾಳಕ್ಕೆ ಹೊಡೆದ ಪ್ರಸಂಗ ನಡೆದಿದೆ.

ಗ್ರೇಟರ್ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದ, ಪರ್ಸಿನಲ್ಲಿ 100 ರು. ನೋಟುಗಳಿಲ್ಲವೆಂದು ಕಳ್ಳರಿಂದ ವಿಕಾಸ್ ಕುಮಾರ್ ಎಂಬ ಕಾರ್ಮಿಕ ಕಪಾಳ ಮೋಕ್ಷ ಮಾಡಿಸಿಕೊಂಡಿದ್ದಾನೆ. ವಿಕಾಸ್ ಕುಮಾರ್ ಕಟ್ಟಡ ಕಾರ್ಮಿಕನಾಗಿದ್ದು, ಕಳೆದ  ಮಂಗಳವಾರ ಕೆಲಸ ಮುಗಿಸಿ ರಾತ್ರಿ ಸುಮಾರು 11ರ ಹೊತ್ತಿನಲ್ಲಿ ಮನೆಗೆ ಸಾಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಕಳ್ಳರಿಬ್ಬರು ಈತನ ಪರ್ಸ್ ಕದ್ದು ಪರಾರಿಯಾಗಿದ್ದಾರೆ. ವಿಕಾಸ್ ಕೂಡ ಒಂದಷ್ಟು ದೂರು ಕಳ್ಳರನ್ನು ಹಿಂಬಾಲಿಸಿ  ಸಹಾಯಕ್ಕಾಗಿ ಮೊರೆ ಇಟ್ಟಿದ್ದ. ಆದರೆ ಆತನ ನೆರವಿಗೆ ಯಾರೂ ಬಂದಿರಲಿಲ್ಲ. ವಿಕಾಸ್ ಪರ್ಸ್ ನಲ್ಲಿ ಸುಮಾರು ಒಂದೂವರೆ ಸಾವಿರ ಹಣವಿತ್ತಂತೆ. ಎಲ್ಲವೂ 500 ರು.ನೋಟುಗಳಾಗಿದ್ದವಂತೆ.

ಕೊನೆಗೆ ಪರ್ಸ್ ಆಸೆ ಕೈ ಬಿಟ್ಟು ವಾಪಸ್ ಆಗುತ್ತಿದ್ದ ವಿಕಾಸ್ ಗೆ ಆಚ್ಚರಿ ಕಾದಿತ್ತು. ಪರ್ಸ್ ಕದ್ದ ಅದೇ ಕಳ್ಳರು ಮತ್ತೆ ವಿಕಾಸ್ ಎದುರು ಪ್ರತ್ಯಕ್ಷರಾಗಿ ಪರ್ಸ್ ಅನ್ನು ಆತನ ಮುಖದ ಮೇಲೆ ಬಿಸಾಕಿ ಅದರೊಳಗೆ 100 ರು,ನೋಟುಗಳೇಕಿಲ್ಲ  ಎಂದು ಪ್ರಶ್ನಿಸಿ ಆತನಿಗೆ ಕಪಾಳ ಮೋಕ್ಷ ಮಾಡಿದ್ದಾರೆ. ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1000 ರು. ನೋಟುಗಳನ್ನು ನಿಷೇಧಿಸಿದ್ದು, ಇದರ ಎಫೆಕ್ಟ್ ಇದೀಗ ಕಳ್ಳರ ಮೇಲೂ ಆಗಿದ್ದು, ಚಲಾವಣೆಯಲ್ಲಿ  ಇಲ್ಲದ 500 ರುಗಳನ್ನು ನೋಡಿದ ಕಳ್ಳರು ತಮ್ಮ ಶ್ರಮವೆಲ್ಲ ವ್ಯರ್ಥವಾಯಿತು ಎಂದು ಆಕ್ರೋಶಗೊಂಡು ಕಾರ್ಮಿಕನಿಗೆ ಥಳಿಸಿ ಪರಾರಿಯಾಗಿದ್ದಾರೆ.

ಈ ಸುದ್ದಿ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದ್ದಂತೆಯೇ ಪ್ರಸ್ತುತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳರಿಗಾಗಿ ಶೋಧ ನಡೆಸುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.