robbers

ಮೈಸೂರು: ಪೆಟ್ರೋಲ್ ಬಂಕ್ ಸಿಬ್ಬಂದಿ ಮೇಲೆ ಹಲ್ಲೆ; ₹15,300 ದೋಚಿದ ಐವರು ದುಷ್ಕರ್ಮಿಗಳು
ಹುಣಸೂರು ತಾಲ್ಲೂಕಿನ ಕರಿಮುದ್ದನಹಳ್ಳಿ ಗ್ರಾಮದ ಸ್ವಾಮಿ ಸರ್ವಿಸ್ ಎಂಬ ಪೆಟ್ರೋಲ್ ಬಂಕ್‌ನಲ್ಲಿ ಫೆಬ್ರುವರಿ 12ರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ಹುಬ್ಬಳ್ಳಿ: ತಪ್ಪಿಸಿಕೊಳ್ಳಲು ಯತ್ನ, ಇಬ್ಬರು ದರೋಡೆಕೋರರ ಕಾಲಿಗೆ ಗುಂಡು ಹಾರಿಸಿದ ಪೊಲೀಸರು
ಇಬ್ಬರೂ ಆರೋಪಿಗಳು ರಾಜೀವ್ ಗಾಂಧಿ ನಗರದ ನಿವಾಸಿಗಳಾಗಿದ್ದು, ಸಂಘಟಿತ ದರೋಡೆಕೋರ ತಂಡದ ಭಾಗವಾಗಿದ್ದಾರೆ ಎನ್ನಲಾಗಿದೆ.

ಬೆಂಗಳೂರು: ಜ್ಯುವೆಲ್ಲರಿ ಮಾಲೀಕನ ಮೇಲೆ ಗುಂಡಿನ ದಾಳಿ, 1 ಕೆಜಿ ಚಿನ್ನಾಭರಣದೊಂದಿಗೆ ದರೋಡೆಕೋರರು ಪರಾರಿ
ನಾಲ್ವರು ದರೋಡೆಕೋರರು ಆಭರಣ ಮಳಿಗೆಯೊಂದರ ಮಾಲೀಕರ ಮೇಲೆ ಗುಂಡು ಹಾರಿಸಿ, ಅವರ ಅಂಗಡಿಯಲ್ಲಿದ್ದ ಒಂದು ಕೆಜಿ ಚಿನ್ನಾಭರಣ ದೋಚಿರುವ ಘಟನೆ ಬ್ಯಾಡರಹಳ್ಳಿ ಪೈಪ್‌ಲೈನ್ ರಸ್ತೆಯಲ್ಲಿ ಗುರುವಾರ ನಡೆದಿದೆ

ಅಪ್ರಾಪ್ತ ಬಾಲಕಿಯ ಧೈರ್ಯದಿಂದ ಇಬ್ಬರು ದರೋಡೆಕೋರರಿಗೆ 7 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ
ಇಬ್ಬರು ದರೋಡೆಕೋರರಿಗೆ ಮಕ್ಕಳ ವಿಶೇಷ ನ್ಯಾಯಾಲಯವು ಏಳು ವರ್ಷಗಳ ಕಠಿಣ ಜೈಲು ಶಿಕ್ಷೆಗೆ ಗುರಿಪಡಿಸಿದ್ದು, ಈ ದರೋಡೆಕೋರರನ್ನು ಜೈಲಿಗೆ ಕಳುಹಿಸುವಲ್ಲಿ ಧೈರ್ಯಶಾಲಿ ಅಪ್ರಾಪ್ತ ಬಾಲಕಿಯೊಬ್ಬಳು ಕಾರಣಳಾಗಿದ್ದಾಳೆ.

ಬೆಂಗಳೂರು: ಕಾರ್ಮಿಕರ ಸುಲಿಗೆ, ರೌಡಿ ಶೀಟರ್ ಸೇರಿ 6 ಮಂದಿ ಬಂಧನ
ಕಾರ್ಮಿಕರ ಮೇಲೆ ಹಲ್ಲೆ ನಡೆಸಿ, ಸುಲಿಗೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ರೌಡಿ ಶೀಟರ್ ಸೇರಿ 6 ಮಂದಿಯನ್ನು ಬೈಯಪ್ಪನಹಳ್ಳಿ ಪೊಲೀಸರು ಸೋಮವಾರ ಬಂಧನಕ್ಕೊಳಪಡಿಸಿದ್ದಾರೆ.

ಬೆಂಗಳೂರು: ಚಾಕುವಿನಿಂದ ಇರಿದು ಹಣ ದೋಚಿದ್ದ ಇಬ್ಬರು ಕುಖ್ಯಾತ ದರೋಡೆಕೋರರ ಬಂಧನ
ಫೆಬ್ರುವರಿ 12 ರಂದು ಸುಂಕದಕಟ್ಟೆ ಪ್ರದೇಶದಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 26 ವರ್ಷದ ದರೋಡೆಕೋರ ಮತ್ತು ಆತನ ಸಹಚರನನ್ನು ಕಾಮಾಕ್ಷಿಪಾಳ್ಯ ಪೊಲೀಸರು ಬಂಧಿಸಿದ್ದಾರೆ. ಹಣ ದೋಚುವ ಮುನ್ನ ಆರೋಪಿಗಳು ಸಂತ್ರಸ್ತರಿಗೆ ಚಾಕುವಿನಿಂದ ಇರಿದಿದ್ದರು.

ಬೆಂಗಳೂರು: ದರೋಡೆ ಮಾಡಿದ್ದ ಇಬ್ಬರ ಬಂಧನ, 57 ಲಕ್ಷ ರೂ. ಮೌಲ್ಯದ ಸ್ಮಾರ್ಟ್‌ವಾಚ್‌ಗಳ ವಶ
ಕೊರಿಯರ್ ಏಜೆನ್ಸಿಯೊಂದರ ಸಿಬ್ಬಂದಿ ಮೇಲೆ ದಾಳಿ ನಡೆಸಿ ದರೋಡೆ ಮಾಡಿದ್ದ ಇಬ್ಬರನ್ನು ಪಶ್ಚಿಮ ವಿಭಾಗದ ಪೊಲೀಸರು ಬಂಧಿಸಿದ್ದು, ಇಬ್ಬರಿಂದ ಸುಮಾರು 57 ಲಕ್ಷ ರೂ. ಮೌಲ್ಯದ 1,283 ಟೈಟಾನ್ ಸ್ಮಾರ್ಟ್ ವಾಚ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ಎಎಸ್‌ಐ ಮನೆಯಲ್ಲಿ ದರೋಡೆ ಮಾಡಿ, ಮಗನಿಗೆ ಗುಂಡು ಹಾರಿಸಿದ್ದ ಅಂತರರಾಜ್ಯ ದರೋಡೆಕೋರರ ಬಂಧನ
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರ ಮನೆ ಲೂಟಿ ಮಾಡಿ ಆತನ ಮಗನಿಗೆ ಗುಂಡು ಹಾರಿಸಿದ್ದ ಉತ್ತರ ಪ್ರದೇಶ ಮತ್ತು ಆಂಧ್ರಪ್ರದೇಶದ ಮೂವರು ಅಂತರರಾಜ್ಯ ದರೋಡೆಕೋರರನ್ನು ಮಂಗಳವಾರ ಬಂಧಿಸಲಾಗಿದೆ.

ಸಿಸಿಟಿವಿಗೆ ಕಪ್ಪು ಬಣ್ಣ ಬಳಿದು ಎಟಿಎಂ ಸ್ಫೋಟಿಸಿದ ದರೋಡೆಕೋರರು, ಹಣ ದೋಚಿ ಪರಾರಿ
ಹಣ ದೋಚಲು ಮಹಾರಾಷ್ಟ್ರದಲ್ಲಿ ದರೋಡೆಕೋರರು ಎಟಿಎಂ ಯಂತ್ರವನ್ನು ಸ್ಫೋಟಿಸಿರುವ ಘಟನೆ ನಡೆದಿದೆ. ಸತಾರಾ ಜಿಲ್ಲೆಯ ನಗ್ತಾನೆ ಗ್ರಾಮದಲ್ಲಿ ಎಟಿಎಂ ಸ್ಫೋಟಕ್ಕೆ ದರೋಡೆಕೋರರು ಜಿಲೆಟಿನ್ ಎಂಬ ಸ್ಫೋಟಕ ವಸ್ತುವನ್ನು ಬಳಸಿದ್ದಾರೆ.

