ಅಲ್-ಖೈದಾ ಉಗ್ರ ಸಂಘಟನೆಯಿಂದ ರೈಲ್ವೆ ಇಲಾಖೆ ವೆಬ್ಸೈಟ್ನ ಮೈಕ್ರೊಸೈಟ್ ಹ್ಯಾಕ್!
ಉಗ್ರ ಸಂಘಟನೆ ಅಲ್- ಖೈದಾ, ಭಾರತೀಯ ರೈಲ್ವೆ ಇಲಾಖೆಯ ಮೈಕ್ರೋ ಸೈಟ್ ರೈಲ್ ನೆಟ್ ಪೇಜ್ ನ್ನು ಹ್ಯಾಕ್ ಮಾಡಿದೆ.

ನವದೆಹಲಿ: ಅಲ್- ಖೈದಾ ಉಗ್ರ ಸಂಘಟನೆ ಭಾರತೀಯ ರೈಲ್ವೆ ಇಲಾಖೆಯ ಮೈಕ್ರೋ ಸೈಟ್ ರೈಲ್ ನೆಟ್ ಪೇಜ್ ನ್ನು ಹ್ಯಾಕ್ ಮಾಡಿದೆ. ಕೇಂದ್ರಿಯ ರೈಲ್ವೆಯ ಭೂಸ್ವಾಲ್ ವಿಭಾಗದ ಸಿಬ್ಬಂದಿ ಇಲಾಖೆಯ ಪೇಜ್ ನ್ನು ಹ್ಯಾಕ್ ಮಾಡಲಾಗಿದ್ದು, ದಕ್ಷಿಣ ಏಷ್ಯಾದ ಅಲ್- ಖೈದಾ ನಾಯಕ ಮೌಲಾನಾ ಅಸಿಮ್ ಉಮರ್ ನ ಸಂದೇಶವನ್ನು ಹ್ಯಾಕ್ ಮಾಡಲಾಗಿರುವ ವೆಬ್ ಸೈಟ್ ನಲ್ಲಿ ಹಾಕಲಾಗಿದೆ.
ನಿಮ್ಮ ಸಾಗರದಲ್ಲಿ ಬಿರುಗಾಳಿ ಏಕಿಲ್ಲ? ಎಂದು ಭಾರತೀಯ ಮುಸ್ಲಿಮರಿಗೆ ಮೌಲಾನಾ ಅಸಿಮ್ ಉಮರ್ ನೀಡಿರುವ ಸಂದೇಶವನ್ನು ವೆಬ್ ಸೈಟ್ ನಲ್ಲಿ ಹಾಕಲಾಗಿದೆ. ಮರೆತುಹೋಗಿರುವ ಜಿಹಾದ್ ನ ಪಾಠವನ್ನು ಭಾರತೀಯರಿಗೆ ಮತ್ತೆ ಹೇಳಿಕೊಡಲು ದೆಹಲಿಯ ನೆಲ ಶಾ ಮುಹಾದಿತ್ ದೆಲ್ಹವಿ ಗೆ ಜನ್ಮ ನೀಡುವುದಿಲ್ಲವೇ? ಎಂದು ಹ್ಯಾಕ್ ಮಾಡಿರುವ ಪುಟದಲ್ಲಿ ಹಾಕಲಾಗಿರುವ 11 ಪುಟಗಳ ಪತ್ರವೊಂದು ಕೇಳಿದೆ.
ಅಲ್-ಖೈದಾ ಉಗ್ರ ಸಂಘಟನೆ ನೀಡಿರುವ ಸಂದೇಶ ಭಾರತೀಯ ಮುಸ್ಲಿಮರಿಗೆ ಜಿಹಾದ್ ನಲ್ಲಿ ತೊಡಗುವಂತೆ ಉತ್ತೇಜಿಸಿದೆ. ಉತ್ತರ ಪ್ರದೇಶದ ನಿವಾಸಿ ಉಮರ್ ನನ್ನು ಭಾರತೀಯ ಉಪಖಂಡದ ಅಲ್-ಖೈದಾ ಮುಖ್ಯಸ್ಥನನ್ನಾಗಿ ಕಳೆದ ವರ್ಷ ನೇಮಕ ಮಾಡಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


