ದೇಶ

ಇನ್ನೂ ಪತ್ತೆಯಾಗದ ನಾಪತ್ತೆಯಾಗಿದ್ದ ಭಾರತೀಯ ಮಹಿಳೆ

ಎರಡು ದಿನಗಳ ಹಿಂದಷ್ಟೇ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಕೋಲ್ಕತಾ ಮೂಲದ ಭಾರತೀಯ ಮಹಿಳೆ ಜುದಿತ್‌ ಡಿಸೋಜಾ...

ಇನ್ನೂ ಪತ್ತೆಯಾಗದ ನಾಪತ್ತೆಯಾಗಿದ್ದ ಭಾರತೀಯ ಮಹಿಳೆ
ಕೋಲ್ಕತಾ ಮೂಲದ ಭಾರತೀಯ ಮಹಿಳೆ ಜುದಿತ್‌ ಡಿಸೋಜಾ
Published On :

ನವದೆಹಲಿ: ಎರಡು ದಿನಗಳ ಹಿಂದಷ್ಟೇ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದ ಕೋಲ್ಕತಾ ಮೂಲದ ಭಾರತೀಯ ಮಹಿಳೆ ಜುದಿತ್‌ ಡಿಸೋಜಾ ಪತ್ತೆ ಕುರಿತಂತೆ ಈ ವರೆಗೂ ಯಾವುದೇ ಸುಳಿವುಗಳು ಸಿಕ್ಕಿಲ್ಲ.

ಕಾಬೂಲ್‌ನ ಅಘಾ ಖಾನ್‌ ಪ್ರತಿಷ್ಠಾನದಲ್ಲಿ ಕೆಲಸ ಮಾಡುತ್ತಿದ್ದ ಕೋಲ್ಕತ್ತ ಮೂಲದ ಜುದಿತ್‌ ಡಿಸೋಜಾ (40) ಹಾಗೂ ಮತ್ತಿಬ್ಬರನ್ನು ಕಾಬೂಲ್‌ನ ತೈಮಾನಿ ಪ್ರದೇಶದಿಂದ ಅಪಹರಿಸಲಾಗಿತ್ತು.

ಇನ್ನು ಜೂದಿತ್ ಡಿಸೋಜಾ ಅವರನ್ನು ಹುಡುಕುವ ಕಾರ್ಯವನ್ನು ಭಾರತೀಯ ವಿದೇಶ ಸಚಿವಾಲಯ ಮುಂದುವರೆಸಿದ್ದು, ಅಫ್ಘಾನಿಸ್ತಾನ ಆಡಳಿತ ಮಂಡಳಿಯೊಂದಿಗೆ ನಿರಂತರವಾಗಿ ಸಂಪರ್ಕ ನಡೆಸುತ್ತಲೇ ಇದೆ. ಡಿಸೋಜಾ ನಾಪತ್ತೆ ಹಿಂದೆ ಭಯೋತ್ಪಾದಕರ ಕೈವಾಡವಿರುವುದಾಗಿ ಶಂಕಿಸಲಾಗಿದ್ದು, ನಾಪತ್ತೆಯಾಗಿ ಎರಡು ದಿನಗಳು ಕಳೆದಿದ್ದರೂ ಈವರೆಗೂ ಯಾವುದೇ ಉಗ್ರ ಸಂಘಟನೆಗಳು ಹೊಣೆಹೊತ್ತುಕೊಂಡಿಲ್ಲ.

ಭಾರತೀಯ ಮಹಿಳೆಯನ್ನು ಹುಡುಕಲು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ. ಶೀಘ್ರದಲ್ಲೇ ಮಹಿಳೆಯನ್ನು ಹುಡುಕಲಾಗುತ್ತದೆ ಎಂದು ಆಫ್ಘಾನಿಸ್ತಾನ ಸರ್ಕಾರ ಹೇಳಿಕೊಂಡಿದೆ.

ಬುಧವಾರ ಬರುವವರಿದ್ದರು: ಮುಂದಿನ ಬುಧವಾರ ಜೂಡಿತ್ ಭಾರತಕ್ಕೆ ಬರುವವರಿದ್ದರು ಎರಡು ದಿನಗಳ ಹಿಂದಷ್ಟೇ ಈ ಬಗ್ಗೆ ಫೋನಿನಲ್ಲಿ ತಿಳಿಸಿದ್ದರು ಎಂದು ಅವರ ಸಹೋದರಿ ಆಗ್ನೇಸ್ ಡಿಸೋಜಾ ಹೇಳಿದ್ದಾರೆ. ಅಲ್ಲದೆ ಅಲ್ಲಿ ಯಾವುದೇ ರೀತಿಯ ತೊಂದರೆ ಇಲ್ಲ ಎಂದಿದ್ದರು ಎಂದು ಹೇಳಿದ್ದಾರೆ. ಈ ಬಗ್ಗೆ ಜೂಡಿತ್ ತಂದೆ ಡಿಸೋಜಾ ಪ್ರತಿಕ್ರಿಯಿಸಿದ್ದು, ಮಗಳನ್ನು ಸುರಕ್ಷಿತವಾಗಿ ಕರೆತರುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.