ಐಎನ್ ಎಸ್ ವಿಕ್ರಮಾದಿತ್ಯ, ವಿಕ್ರಾಂತ್ ಮೇಲೆ ಚೀನಾ ಹ್ಯಾಕರ್ ಗಳಿಂದ ಬೇಹುಗಾರಿಕೆ!
ಚೀನಾ ಹ್ಯಾಕರ್ ಗಳು ಐಎನ್ ಎಸ್ ವಿಕ್ರಾಂತ್ ಹಾಗೂ ಐಎನ್ಎಸ್ ವಿಕ್ರಮಾದಿತ್ಯ ಯುದ್ಧನೌಕೆ ಕುರಿತು ಮಾಹಿತಿ ಸಂಗ್ರಹಿಸಲು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಸಿದ್ದಾರೆ.

ನವದೆಹಲಿ: ಭಾರತ ಹಿಂದೂ ಮಹಾಸಾಗರ ಹಾಗೂ ದಕ್ಷಿಣ ಚೀನಾ ಸಮುದ್ರದಲ್ಲಿ ತನ್ನ ಇರುವಿಕೆಯನ್ನು ಹೆಚ್ಚಿಸುತ್ತಿದ್ದಂತೆಯೇ ಚೀನಾ ಹ್ಯಾಕರ್ ಗಳು ಐಎನ್ ಎಸ್ ವಿಕ್ರಾಂತ್ ಹಾಗೂ ಐಎನ್ಎಸ್ ವಿಕ್ರಮಾದಿತ್ಯ ಯುದ್ಧನೌಕೆ ಕುರಿತು ಮಾಹಿತಿ ಸಂಗ್ರಹಿಸಲು ಬೇಹುಗಾರಿಕೆ ನಡೆಸುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಸಿದ್ದಾರೆ.
ದಕ್ಷಿಣ ಚೀನಾ ಸಮುದ್ರ ಪ್ರದೇಶದಲ್ಲಿ ಐಎನ್ಎಸ್ ವಿಕ್ರಾಂತ್, ವಿಕ್ರಮಾದಿತ್ಯ ಯುದ್ಧನೊಉಕೆಗಳ ಚಲನವಲನಗಳ ಬಗ್ಗೆ ಚೀನಾ ಹ್ಯಾಕರ್ ಗಳು ನಿಗಾ ಇಟ್ಟಿದ್ದಾರೆ, ಅಷ್ಟೇ ಅಲ್ಲದೇ ಭಾರತದ ಮಿಲಿಟರಿ ಸನ್ನದ್ಧತೆ ಕುರಿತ ಗೌಪ್ಯ ಮಾಹಿತಿಗಳನ್ನು ಹೊಂದಿರುವ ಸೈಬರ್ ಸೆಕ್ಯುರಿಟಿ ಕೋಡ್ ಗಳನ್ನು ತಿಳಿದುಕೊಳ್ಳಲು ಯತ್ನಿಸುತ್ತಿದ್ದಾರೆ ಎಂದು ಸೈಬರ್ ಸೆಕ್ಯುರಿಟಿ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇವಲ ಯುದ್ಧ ನೌಕೆಗಳಷ್ಟೇ ಅಲ್ಲದೆ ಟಿಬೆಟ್ ನಿಂದ ಗಡಿಪಾರಾಗಿ ಭಾರತದಲ್ಲಿ ಆಶ್ರಯ ಪಡೆದಿರುವ ಗುಂಪಿನ ಮೇಲೆಯೂ ಚೀನಾ ಗೂಢಾಚಾರಿಕೆ ನಡೆಸುತ್ತಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಚೀನಾದ ವಿರುದ್ಧ ಈ ಹಿಂದೆಯೂ ಟಿಬೆಟ್ ನಿಂದ ಗಡಿಪಾರಾಗಿರುವ ಗುಂಪಿನ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆರೋಪವಿದ್ದರೂ ಚೀನಾ ಮಾತ್ರ ಅದನ್ನು ನಿರಾಕರಿಸುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


