ದೇಶ

ಭಾರತದ ಒಂದು ಗೌಪ್ಯ ಮಾಹಿತಿಗೆ 60 ಸಾವಿರ ಡಾಲರ್ ಆಮಿಷವೊಡ್ಡಿದ ಇಸೀಸ್

ರ್ಕಾರದ ಬಳಿ ಇರುವ ಗೌಪ್ಯ, ಮಹತ್ವದ ಮಾಹಿತಿಗಳನ್ನು ಹ್ಯಾಕ್ ಮಾಡಿ ಇಸೀಸ್ ಗೆ ರವಾನೆ ಮಾಡುವವರಿಗೆ ಗಾಳ ಹಾಕುತ್ತಿದೆಯಂತೆ.

ಭಾರತದ ಒಂದು ಗೌಪ್ಯ ಮಾಹಿತಿಗೆ 60 ಸಾವಿರ ಡಾಲರ್ ಆಮಿಷವೊಡ್ಡಿದ ಇಸೀಸ್
ಹ್ಯಾಕರ್(ಸಾಂಕೇತಿಕ ಚಿತ್ರ)
Published On :

ನವದೆಹಲಿ: ಭಾರತವನ್ನು ಗುರಿಯಾಗಿರಿಸಿಕೊಂಡು ಐಎಸ್ಐಎಸ್ ಉಗ್ರ ಸಂಘಟನೆ ನಡೆಸುತ್ತಿರುವ ಸಂಚುಗಳಿಗೆ ಸಂಬಂಧಿಸಿದಂತೆ ಆಘಾತಕಾರಿ ಅಂಶವೊಂದು ಬೆಳಕಿಗೆ ಬಂದಿದ್ದು, ಸರ್ಕಾರದ ಬಳಿ ಇರುವ ಗೌಪ್ಯ, ಮಹತ್ವದ ಮಾಹಿತಿಗಳನ್ನು ಹ್ಯಾಕ್ ಮಾಡಿ ಇಸೀಸ್ ಗೆ ರವಾನೆ ಮಾಡುವವರಿಗೆ ಗಾಳ ಹಾಕುತ್ತಿದೆಯಂತೆ.

ಕೆಲವೊಂದು ವರದಿಗಳ ಪ್ರಕಾರ, ಸಾಮಾಜಿಕ ಜಾಲತಾಣ ಫೇಸ್ ಬುಕ್, ಟ್ವಿಟರ್ ಮೂಲಕ ಹ್ಯಾಕ್ ಮಾಡುವುದಕ್ಕಾಗಿ ಭಾರತೀಯ ಯುವಕರನ್ನು ಸಂಪರ್ಕಿಸಲು ಯತ್ನಿಸುತ್ತಿರುವ ಇಸೀಸ್ ಹ್ಯಾಕ್ ಮಾಡಿ ಮಾಹಿತಿ ರವಾನೆ ಮಾಡಿದವರಿಗೆ ಪ್ರತಿ ಮಾಹಿತಿಗೂ 60 ಸಾವಿರ ಡಾಲರ್ ನೀಡಲು ಇಸ್ಲಾಮಿಕ್ ಸ್ಟೇಟ್ ಸಿದ್ಧವಿದೆ ಎಂಬ ಮಾಹಿತಿ ಬಹಿರಂಗವಾಗಿದೆ.

ಸೈಬರ್ ಕ್ರೈಮ್ ತಜ್ಞ ಕಿಸ್ಲಯ್ ಚೌಧರಿ ಅವರನ್ನು ವರದಿಯೊಂದು ಉಲ್ಲೇಖಿಸಿದ್ದು, ಹ್ಯಾಕರ್ ಗಳು ನಿರಂತರವಾಗಿ ಸಂಪರ್ಕದಲ್ಲಿರಲು ಅನೇಕ ಮಾರ್ಗಗಳನ್ನು ಕಂಡುಕೊಂಡಿದ್ದಾರೆ. ಇಂಥವರು ಯುವಕರಿಗಾಗಿ ಗಾಳ ಹಾಕುತ್ತಿದ್ದು, ಭಾರತ ಸರ್ಕಾರದ ಗೌಪ್ಯ ಮಾಹಿತಿಗಳನ್ನು ಹ್ಯಾಕ್ ಮಾಡಲು ಯುವಕರಿಗೆ ವಿವಿಧ ರೀತಿಯಲ್ಲಿ ಆಮಿಷವೊಡ್ಡುತ್ತಿದ್ದಾರೆ ಎಂದಿದೆ.

ಭಾರತದಲ್ಲಿ ಐಎಸ್ಐಎಸ್ ತನ್ನ ನೆಲೆ ಕಂಡುಕೊಳ್ಳಲು ಇಂತಹ ಪ್ರಯತ್ನ ಮಾಡುತ್ತಿದ್ದು, ದಾಳಿ ನಡೆಸಲು ಸುಲಭವಾಗುವಂತೆ ಕಾರ್ಯತಂತ್ರ ರೂಪಿಸಲು ಇಸೀಸ್ ಮಹತ್ವದ ಮಾಹಿತಿಗಳನ್ನು ಹ್ಯಾಕ್ ಮಾಡಿಸಲು ಯತ್ನಿಸುತ್ತಿದೆ ಎಂದು ಹೇಳಲಾಗುತ್ತಿದೆ.

ಈ ವರೆಗೆ ಭಾರತದ ಸುಮಾರು 30 ಸಾವಿರ ಯುವ ಟೆಕ್ಕಿಗಳನ್ನು ಇಸೀಸ್ ಸಂಪರ್ಕಿಸಿದ್ದು ಈ ಪೈಕಿ ಕೆಲವರು ಇಸೀಸ್ ಆಫರ್ ಗೆ ಆಕರ್ಷಿತರಾಗಿದ್ದಾರೆ ಎಂದು ಶಂಕಿಸಲಾಗಿದೆ. ಭಾರತದ ವಿರೋಧಿಯಾಗಿರುವ ಹಲವು ಫೇಸ್ ಬುಕ್ ಪ್ರೊಫೈಲ್ ಗಳು ಹಾಗೂ ಟ್ವಿಟರ್ ಹ್ಯಾಂಡಲರ್ ಗಳು ಕಾರ್ಯಾಚರಣೆ ಮಾಡುತ್ತಿದ್ದು, ಸಾಮಾನ್ಯವಾಗಿ ಅಲ್ಪಸಂಖ್ಯಾತ ಸಮುದಾಯದ ಯುವಕರನ್ನು ಸೆಳೆಯಲು ಯತ್ನಿಸುತ್ತವೆ ಎಂಬ ವರದಿಯ ಅಂಶವನ್ನು ಮಾಧ್ಯಮವೊಂದು ವರದಿ ಮಾಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.