ಪಾಕ್ ಹೈ ಕಮಿಷನರ್ ಅಬ್ದುಲ್ ಬಸಿತ್ ವೀಸಾ ಆಹ್ವಾನವನ್ನು ತಿರಸ್ಕರಿಸಿದ ಅನುಪಮ್ ಖೇರ್
ವಿಷಾದ ವ್ಯಕ್ತಪಡಿಸಿರುವ ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಅಬ್ದುಲ್ ಬಸಿತ್, ಅನುಪಮ್ ಖೇರ್ ಗೆ ಮತ್ತೊಮ್ಮೆ ವೀಸಾಗೆ ಅರ್ಜಿ ಸಲ್ಲಿಸಲು ಹೇಳಿದ್ದಾರೆ.

ಬಾಲಿವುಡ್ ನಟ ಅನುಪಮ್ ಖೇರ್ ಗೆ ಪಾಕಿಸ್ತಾನ ವೀಸಾ ನಿರಾಕರಿಸಿರುವುದಕ್ಕೆ ವಿಷಾದ ವ್ಯಕ್ತಪಡಿಸಿರುವ ಭಾರತದಲ್ಲಿರುವ ಪಾಕಿಸ್ತಾನ ಹೈ ಕಮಿಷನರ್ ಅಬ್ದುಲ್ ಬಸಿತ್, ಅನುಪಮ್ ಖೇರ್ ಗೆ ಮತ್ತೊಮ್ಮೆ ವೀಸಾಗೆ ಅರ್ಜಿ ಸಲ್ಲಿಸಲು ಹೇಳಿದ್ದಾರೆ.
ವೀಸಾ ನೀಡಲು ನಿರಾಕರಿಸಿರುವ ಘಟನೆ ಬಗ್ಗೆ ಅನುಪಮ್ ಖೇರ್ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿರುವ ಅಬ್ದುಲ್ ಬಸಿತ್, ಇಂತಹ ಘಟನೆ ನಡೆಯಬಾರದಿತ್ತು, ಮತ್ತೊಮ್ಮೆ ವೀಸಾಗಾಗಿ ಅರ್ಜಿ ಸಲ್ಲಿಸಿ ಎಂದು ಹೇಳಿದ್ದಾರೆ. ಆದರೆ ಅಬ್ದುಲ್ ಬಸಿತ್ ಅವರ
ಆಹ್ವಾನವನ್ನು ತಿರಸ್ಕರಿಸಿರುವ ಅನುಪಮ್ ಖೇರ್, ಪಾಕಿಸ್ತಾನದಲ್ಲಿ ಭಾಗವಹಿಸಬೇಕಿದ್ದ ದಿನಾಂಕದಂದು ಮತ್ತೊಂದು ಕಾರ್ಯಕ್ರಮದಲ್ಲಿ ಭಾಗವಹಿಸಲು ಒಪ್ಪಿರುವುದರಿಂದ ಪಾಕ್ ಗೆ ಭೇಟಿ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ ಎಂದು ಖಾಸಗಿ ಮಾಧ್ಯಮವೊಂದು ವರದಿ ಮಾಡಿದೆ.
ಅನುಪಮ್ ಖೇರ್ ಪಾಕಿಸ್ತಾನದಲ್ಲಿ ಕರಾಚಿ ಸಾಹಿತ್ಯ ಉತ್ಸವದಲ್ಲಿ ಭಾಗವಹಿಸಬೇಕಿತ್ತು. ಭಾರತದಿಂದ ಭಾಗವಹಿಸಬೇಕಿದ್ದ 17 ಜನರ ಪೈಕಿ ಅನುಪಮ್ ಖೇರ್ ಗೆ ಮಾತ್ರ ವೀಸಾ ನಿರಾಕರಿಸಲಾಗಿತ್ತು. ಅನುಪಮ್ ಖೇರ್ ವೀಸಾಗಾಗಿ ಅರ್ಜಿಯನ್ನೇ ಸಲ್ಲಿಸಿಲ್ಲ ಎಂಬುದು ಒಂದು ವಾದವಾರೆ, ಪಾಕಿಸ್ತಾನದ ಆಂತರಿಕ ಸಚಿವಾಲಯ ತಾವು ಸಲ್ಲಿಸಿದ್ದ ವೀಸಾ ಅರ್ಜಿಗೆ ನಿರಾಪೇಕ್ಷಣವನ್ನು ಪ್ರಮಾಣಪತ್ರ(ಎನ್ಒಸಿ) ನೀಡಲು ನಿರಾಕರಿಸಿರುವುದರಿಂದ ವೀಸಾ ಸಿಕ್ಕಿಲ್ಲ ಎಂದು ಖೇರ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


