ದೇಶ

ಹೊಸ ವರ್ಷದಲ್ಲಿ ಕೃಷ್ಣನಾಗಿ ಕೊಳಲು ನುಡಿಸಿದ ಆರ್ ಜೆಡಿ ಲಾಲೂ ಪುತ್ರ ತೇಜ್

ಹೊಸ ವರ್ಷವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಪಾರ್ಟಿಗೆ, ಮಾಲ್ ಗೆ...

ಹೊಸ ವರ್ಷದಲ್ಲಿ ಕೃಷ್ಣನಾಗಿ ಕೊಳಲು ನುಡಿಸಿದ ಆರ್ ಜೆಡಿ ಲಾಲೂ ಪುತ್ರ ತೇಜ್
ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಬಿಹಾರ ಸಚಿವ ತೇಜ್ ಪ್ರತಾಪ್ ಯಾದವ್
Published On :
ಪಾಟ್ನಾ: ಹೊಸ ವರ್ಷವನ್ನು ಒಬ್ಬೊಬ್ಬರು ಒಂದೊಂದು ರೀತಿ ಆಚರಿಸುತ್ತಾರೆ. ಪಾರ್ಟಿಗೆ, ಮಾಲ್ ಗೆ ಹೋಗುವುದು, ಫ್ರೆಂಡ್ಸ್, ಬಂಧುಗಳ ಜೊತೆ ಸೇರಿ ಹರಟೆ ಹೊಡೆಯುವುದು, ಕೇಕ್ ಕತ್ತರಿಸುವುದು ಇತ್ಯಾದಿ ಮಾಮೂಲು.
ಆದರೆ ಬಿಹಾರದ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಅವರ ಪುತ್ರ ಅಲ್ಲಿನ ಆರೋಗ್ಯ ಖಾತೆ ಸಚಿವ ತೇಜ್ ಪ್ರತಾಪ್ ಯಾದವ್ ವಿಶಿಷ್ಟ ರೀತಿಯಲ್ಲಿ ಹೊಸ ವರ್ಷವನ್ನು ಆಚರಿಸಿದ್ದಾರೆ.
ಕೃಷ್ಣನಂತೆ ವೇಷ ತೊಟ್ಟು ಕೈಯಲ್ಲೊಂದು ಕೊಳಲು ಹಿಡಿದುಕೊಂಡು ಊದುತ್ತಾ ಹೊಸ ವರ್ಷವನ್ನು ಸಂತೋಷದಿಂದ ಬರಮಾಡಿಕೊಂಡಿದ್ದಾರೆ.
ಯಾಕೆ ಹೀಗೆ ಎಂದು ಅವರನ್ನು ಕೇಳಿದಾಗ, ಬೃಂದಾವನದ ಭಕ್ತರೊಬ್ಬರು ಇದನ್ನೆಲ್ಲಾ ನನಗೆ ಉಡುಗೊರೆಯಾಗಿ ಕೊಟ್ಟು ಹೊಸ ವರ್ಷಕ್ಕೆ ತೊಟ್ಟುಕೊಳ್ಳಿ ಎಂದು ಹೇಳಿದರು. ಹಾಗಾಗಿ ಇಂದು ಈ ರೀತಿ ಆಚರಿಸಿಕೊಳ್ಳುತ್ತಿದ್ದೇನೆ ಎಂದು ತಿಳಿಸಿದರು.
ತಮ್ಮ ವಿಶಿಷ್ಟ ಶೈಲಿ, ಮಾತಿನಿಂದ ಹೆಸರಾಗಿರುವ ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ರಂತೆ ಇದೀಗ ಅವರ ಮಗನು ಕೂಡ ವಿಶೇಷತೆ ಮಾಡಿ ಸುದ್ದಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.