ದೇಶ

ಸ್ಮೃತಿ ಇರಾನಿ'ಯವರೇ, ಕರ್ನಾಟಕ ಸಹ ಭಾರತದ ಒಂದು ಭಾಗ: ಶಾಸಕ ಸಿ.ಟಿ ರವಿ ಟ್ವೀಟ್

ಕರ್ನಾಟಕ ಕೂಡ ಭಾರತದ ಒಂದು ರಾಜ್ಯ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ರಾಜ್ಯ ಬಿಜೆಪಿ ಶಾಸಕರೊಬ್ಬರು ನೆನಪು ಮಾಡಿಕೊಟ್ಟಿದ್ದಾರೆ.

ಸ್ಮೃತಿ ಇರಾನಿ'ಯವರೇ, ಕರ್ನಾಟಕ ಸಹ ಭಾರತದ ಒಂದು ಭಾಗ: ಶಾಸಕ ಸಿ.ಟಿ ರವಿ ಟ್ವೀಟ್
ಸ್ಮೃತಿ ಇರಾನಿ
Published On :

ನವದೆಹಲಿ: ಕರ್ನಾಟಕ ಕೂಡ ಭಾರತದ ಒಂದು ರಾಜ್ಯ ಎಂದು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರಿಗೆ ರಾಜ್ಯ ಬಿಜೆಪಿ ಶಾಸಕರೊಬ್ಬರು ನೆನಪು ಮಾಡಿಕೊಟ್ಟಿದ್ದಾರೆ.

ನೇಕಾರರಿಗೆ ಅನುಕೂಲವಾಗಲೆಂಬ ದೃಷ್ಟಿಯಿಂದ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ, 'ಇ ಧಾಗ' ಎಂಬ ಆ್ಯಪ್ ಉದ್ಘಾಟಿಸಿದರು. ಈ ಆ್ಯಪ್ ಹಿಂದಿ, ಇಂಗ್ಲಿಷ್, ಮತ್ತು ತೆಲುಗು ಭಾಷೆಯಲ್ಲಿ ಲಭ್ಯವಿದೆ. ಶೀಘ್ರವೇ ತಮಿಳು, ಬೆಂಗಾಲಿ, ಒರಿಯಾ ಮತ್ತು ಉರ್ದು ಹಾಗೂ ಅಸ್ಸಾಮೀ ಭಾಷೆಯಲ್ಲಿ ಸಿಗಲಿದೆ ಎಂದು ಸ್ಮೃತಿ ಇರಾನಿ ಹೇಳಿದ್ದರು.

ಆದರೆ ಇರಾನಿ ಕನ್ನಡ ಭಾಷೆಯಲ್ಲಿ ಆ್ಯಪ್ ಇಲ್ಲದುದರ ಬಗ್ಗೆ ಬಿಜೆಪಿ ಶಾಸಕ ಸಿಟಿ ರವಿ ಟ್ವೀಟ್ ಮಾಡಿದ್ದಾರೆ. ಸ್ಮೃತಿ ಇರಾನಿ ಅವರೇ, ಕರ್ನಾಟಕ ಕೂಡ ಭಾರತದ ಒಂದು ಭಾಗ, ಹೀಗಾಗಿ ಇ ಧಾಗ ಆ್ಯಪ್ ಅನ್ನು ಕನ್ನಡದಲ್ಲಿ ಶೀಘ್ರವೇ ಪರಿಚಯಿಸಿ, ಜೊತೆಗೆ ಅಡ್ವಾನ್ಸ್ ಥ್ಯಾಂಕ್ಸ್ ಎಂದು ಟ್ವೀಟ್ ಮಾಡಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.