ದೇಶ

ಒಳ ಉಡುಪಿನಲ್ಲಿ ಬರೋಬ್ಬರಿ 2 ಕೆಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಬಂಧನ

ಒಳ ಉಡುಪಿನಲ್ಲಿ 64,38, 960 ರೂ. ಮೌಲ್ಯದ 2 ಕೆಜಿ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದ ಹೈದರಾಬಾದ್ ಮೂಲದ ಮಹಿಳೆಯನ್ನು ಪೊಲೀಸರು ದೆಹಲಿ ವಿಮಾನ ...

ಒಳ ಉಡುಪಿನಲ್ಲಿ ಬರೋಬ್ಬರಿ 2 ಕೆಜಿ ಚಿನ್ನ ಸಾಗಿಸುತ್ತಿದ್ದ ಮಹಿಳೆ ಬಂಧನ
ಸಾಂದರ್ಭಿಕ ಚಿತ್ರ
Published On :

ನವದೆಹಲಿ: ಒಳ ಉಡುಪಿನಲ್ಲಿ 64,38, 960 ರೂ. ಮೌಲ್ಯದ 2 ಕೆಜಿ ಚಿನ್ನದ ಗಟ್ಟಿಗಳನ್ನು ಸಾಗಿಸುತ್ತಿದ್ದ ಹೈದರಾಬಾದ್ ಮೂಲದ ಮಹಿಳೆಯನ್ನು ಪೊಲೀಸರು ದೆಹಲಿ ವಿಮಾನ ನಿಲ್ದಾಣದಲ್ಲಿ ಬಂಧಿಸಿದ್ದಾರೆ.

ಫರ್ಹತ್ ಉನ್ನಿಸಾ ಎಂಬ ಮಹಿಳೆಯನ್ನು ದುಬೈನಿಂದ ದೆಹಲಿಗೆ ವಿಮಾನ ಮೂಲಕ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ವೈಮಾನಿಕ ಗುಪ್ತಚರ ಘಟಕದ (ಏರ್ ಇಂಟಲಿಜನ್ಸ್ ಯುನಿಟ್-ಎಐಯು) ಅಧಿಕಾರಿಗಳು ಬಂಧಿಸಿದ್ದಾರೆ. ಈ ವೇಳೆಯಲ್ಲಿ ಮಹಿಳೆ ತನ್ನ ಒಳ ಉಡುಪಿನಲ್ಲಿ ಎರಡು ಕೆ.ಜಿ ಚಿನ್ನದ ಗಟ್ಟಿಗಳನ್ನು ಇಟ್ಟುಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಎಐಯು ಅಧಿಕಾರಿಗಳು ಪ್ರತಿಕ್ರಿಯಿಸಿ, ದುಬೈನಲ್ಲಿ ಜೆಟ್ ಏರ್ವೇಸ್ ವಿಮಾನವನ್ನೇರಿದ ಈ ಮಹಿಳೆ ಮೇಲೆ ಸಂದೇಹ ಮೂಡಿತು. ಆದ್ದರಿಂದ ತಪಾಸಣೆಗೆ ಒಳಪಡಿಸಿ 2 ಕಿ.ಗ್ರಾಂ ಮತ್ತು 160 ಗ್ರಾಮ್ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.