ತಿಂದ ಬೀಡಾ ದುಡ್ಡು ಕೇಳಿದ್ದಕ್ಕೆ ವೃದ್ಧನನ್ನು ಸಾಯೋ ತನಕ ಹೊಡೆದರು 8 ಯುವಕರು
ಎಂಟು ಯುವಕರು ವದ್ಧನನ್ನು ಸಾಯೋ ತನಕ ಹೊಡಿದಿರುವ ಘಟನೆ ಅಹಮದಾಬಾದ್ ನಲ್ಲಿ...

ಅಹಮದಾಬಾದ್: ಎಂಟು ಯುವಕರು ವದ್ಧನನ್ನು ಸಾಯೋ ತನಕ ಹೊಡಿದಿರುವ ಘಟನೆ ಅಹಮದಾಬಾದ್ ನಲ್ಲಿ ನಡೆದಿದೆ.
ಅಹಮದಾಬಾದ್ ನಲ್ಲಿ ಅಸ್ಟೋಡಿಯಾ ಎಂಬ ಪ್ರದೇಶದಲ್ಲಿ ವೃದ್ಧರರೊಬ್ಬರು ಬೀ ಅಂಗಡಿ ಇಟ್ಟುಕೊಂಡಿದ್ದರು. ಅಲ್ಲಿಗೆ ಬಂದ ಯುವಕರು ಬೀಡಾ ಖರೀದಿಸಿ ತಿಂದಿದ್ದಾರೆ. ತಿಂದ ಬೀಡಾ ದುಡ್ಡು ಕೇಳಿದಕ್ಕೆ ಕೋಪಗೊಂಡ 8 ಯುವಕರು ವೃದ್ಧನನ್ನು ರಸ್ತೆಗೆ ಎಳೆತಂದು ಸಾಯುವ ತನಕ ಕೋಲುಗಳಿಂದ ಮನಬಂದಂತೆ ಹೊಡೆದು ಹಾಕಿದ್ದಾರೆ.
ಇದಿಷ್ಟು ಘಟನೆ ಸಾರ್ವಜನಿಕರ ಸಮ್ಮುಖದಲ್ಲೇ ಆಗಿದ್ದು, ಯಾರೋಬ್ಬರು ವೃದ್ಧನ ಸಹಾಯಕ ಧಾವಿಸಿಲ್ಲ. ಈ ಘಟನೆ ಸೆಪ್ಟೆಂಬರ್ 1ರಂದು ನಡೆದಿದ್ದು, ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮೂರು ಆರೋಪಿಗಳನ್ನು ಬಂಧಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


