ವೃದ್ಧ

ಮಂಡ್ಯ: ಫುಟ್‌ಪಾತ್‌ನಲ್ಲಿ ಮಲಗಿದ್ದ ವೃದ್ಧನ ಮೇಲೆ ಬೀದಿ ನಾಯಿಗಳು ದಾಳಿ, ಸಾವು
ಮಂಡ್ಯ ಜಿಲ್ಲೆಯಲ್ಲಿ ಬೀದಿ ನಾಯಿಗಳ ಗುಂಪೊಂದು ಫುಟ್‌ಪಾತ್‌ನಲ್ಲಿ ಮಲಗಿದ್ದ ವೃದ್ಧನ ಮೇಲೆ ದಾಳಿ ನಡೆಸಿ, ಕೊಂದು ಹಾಕಿರುವ ಆಘಾತಕಾರಿ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಬೆಂಗಳೂರು: ಖಾಸಗಿ ಕಂಪನಿಯ ಬಸ್ ಹರಿದು ವೃದ್ಧ ಸಾವು
ಖಾಸಗಿ ಕಂಪನಿಯೊಂದರ ಬಸ್ ಹರಿದು ವೃದ್ಧರೊಬ್ಬರು ಮೃತಪಟ್ಟಿರುವ ಘಟನೆ ಬನಶಂಕರಿಯಲ್ಲಿ ನಡೆದಿದೆ. 79 ವರ್ಷದ ವೃದ್ಧರೊಬ್ಬರ ಬೈಸಿಕಲ್ ಗೆ ಬಸ್ ಡಿಕ್ಕಿ ಹೊಡೆದ ನಂತರ ನಿಯಂತ್ರಣ ಕಳೆದುಕೊಂಡು ರಸ್ತೆ ಮೇಲೆ ಬಿದ್ದ ಅವರ ಬಸ್ ಹರಿದಿದೆ.

ಬೆಂಗಳೂರು: ಮಳೆಯಿಂದ ಜಲಾವೃತಗೊಂಡ ಮನೆ; ಹೃದಯಾಘಾತದಿಂದ ವೃದ್ಧ ಸಾವು
ಭಾರೀ ಮಳೆಯಿಂದ ಜಲಾವೃತವಾದ ಮನೆಯಲ್ಲಿ ಹೃದಯಾಘಾತದಿಂದ ವೃದ್ದರೊಬ್ಬರು ಸಾವನ್ನಪ್ಪಿರುವ ಘಟನೆ ಮಹಾದೇವಪುರದ ರೈನ್ ಬೋ ಲೇಔಟ್ ನಲ್ಲಿ ನಡೆದಿದೆ. 86 ವರ್ಷದ ಶ್ರೀನಿವಾಸ ರಾಮರಾವ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಗದಗ: ಭರವಸೆ ಈಡೇರಿಕೆಗಾಗಿ 2 ವರ್ಷಗಳಿಂದ ಕಾಯುತ್ತಿದ್ದ ವೃದ್ಧನನ್ನು ಭೇಟಿ ಮಾಡಿದ ಶಾಸಕ, ಮತ್ತೆ ಭರವಸೆ
ಭರವಸೆ ಈಡೇರಿಕೆಗಾಗಿ 2 ವರ್ಷಗಳಿಂದ ಕಾಯುತ್ತಿದ್ದ ವೃದ್ಧನನ್ನು ಶಿರಹಟ್ಟಿ ಶಾಸಕ ರಾಮಣ್ಣ ಲಮಾಣಿ ಭೇಟಿ ಮಾಡಿದ್ದು ಶೀಘ್ರವೇ ಮನೆಯನ್ನು ನಿರ್ಮಿಸಿಕೊಡುವ ಭರವಸೆ ನೀಡಿದ್ದಾರೆ.

ಟೆಲಿಫೋನ್ ಗೆಳತಿಯನ್ನು ಭೇಟಿ ಮಾಡಲು 240 ಕಿ.ಮೀ ಪ್ರಯಾಣಿಸಿದ 68 ರ ವೃದ್ಧ; ಸಿಕ್ಕಿದ್ದು ಮಾತ್ರ ತಿರಸ್ಕಾರ!
ಟೆಲಿಫೋನ್ ಮೂಲಕ ಪರಿಚಯವಾಗಿದ್ದ ಗೆಳತಿಯನ್ನು ಭೇಟಿ ಮಾಡುವುದಕ್ಕೆ 240 ಕಿ.ಮೀ ಸಂಚರಿಸಿ ಬಂದಿದ್ದ 68 ರ ವೃದ್ಧ ವ್ಯಕ್ತಿಗೆ ನಿರಾಶೆ ಉಂಟಾಗಿ ವಾಪಸ್ ತೆರಳಿರುವ ವಿಲಕ್ಷಣ ಘಟನೆ ಕೇರಳದಲ್ಲಿ ವರದಿಯಾಗಿದೆ.

ಎಚ್.ಡಿ. ಕೋಟೆ: ಕಾಡಾನೆ ದಾಳಿಗೆ ವೃದ್ಧ ಸಾವು, ಎರಡು ಮನೆ ಜಖಂ
ಬೆಳ್ಳಂಬೆಳಗ್ಗೆ ಮನೆಯೊಂದರ ಮೇಲೆ ಕಾಡಾನೆಯೊಂದು ದಾಳಿ ಮಾಡಿದ ಪರಿಣಾಮ ವೃದ್ಧನೋರ್ವ ಮೃತಪಟ್ಟಿರುವ ಘಟನೆ ಜಿಲ್ಲೆಯ ಎಚ್.ಡಿ.ಜೋಟೆ ತಾಲೂಕಿನ ನೆಟ್ಟಕಲ್ಲಹುಂಡಿ ಗ್ರಾಮದಲ್ಲಿ ನಡೆದಿದೆ.

ಐಸಿಯುವಿನಲ್ಲಿ 105 ವರ್ಷದ ಸೋಂಕಿತ ವೃದ್ಧ: ರೆಮ್ಡೆಸಿವಿರ್ ಔಷಧಿ ನೀಡಲು ಮುಂದಾದ ವೈದ್ಯರು
ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿ ಕೊರೋನಾ ವೈರಸ್'ಗೆ ಚಿಕಿತ್ಸೆ ಪಡೆಯುತ್ತಿರುವ 105 ವರ್ಷದ ವೃದ್ಧ ವ್ಯಕ್ತಿಯೊಬ್ಬರಿಗೆ ರೆಮ್ಡೆಸಿವಿರ್ ಔಷಧಿ ನೀಡಲು ವೈದ್ಯರು ಮುಂದಾಗಿದ್ದಾರೆಂದು ತಿಳಿದುಬಂದಿದೆ.

ಅಮಾನವೀಯ ಘಟನೆ: ಚಿಕಿತ್ಸೆ ವೆಚ್ಚ ಭರಿಸದ ವೃದ್ಧನನ್ನು ಹಾಸಿಗೆಗೆ ಕಟ್ಟಿ ಹಾಕಿದ ಆಸ್ಪತ್ರೆ!
ಮಧ್ಯಪ್ರದೇಶದ ಭೂಪಾಲ್ ನಲ್ಲಿ ಅಮಾನವೀಯ, ಆತಂಕಕಾರಿ ಘಟನೆಯೊಂದು ನಡೆದಿದೆ. ಚಿಕಿತ್ಸೆ ಪಡೆದು ಶುಲ್ಕ ಪಾವತಿಸದ ಕಾರಣಕ್ಕಾಗಿ ವೃದ್ಧರೊಬ್ಬರನ್ನು ಆಸ್ಪತ್ರೆಯ ಬೆಡ್ಡ್ ಗೆ ಕಟ್ಟಿ ಹಾಕಿ ಆಸ್ಪತ್ರೆ ಆಡಳಿತ ಮಂಡಳಿ ಕ್ರೂರವಾಗಿ ವರ್ತಿಸಿದೆ.

ವೃದ್ಧನ ಬರ್ಬರ ಹತ್ಯೆ: ವಿಶಿಷ್ಟಚೇತನ ಪುತ್ರನ ಮೇಲೂ ಮಾರಣಾಂತಿಕ ಹಲ್ಲೆ
ಒಂಟಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ಮನೆಯ ಮಾಲೀಕನನ್ನು ಬರ್ಬರವಾಗಿ ಹತ್ಯೆ ಮಾಡಿ ವಿಕಲಚೇತನ ಮಗನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ಮಧುಗಿರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

