ರಾಜ್ಯ

ಬೆಂಗಳೂರು: ಮಳೆಯಿಂದ ಜಲಾವೃತಗೊಂಡ ಮನೆ; ಹೃದಯಾಘಾತದಿಂದ ವೃದ್ಧ ಸಾವು

ಭಾರೀ ಮಳೆಯಿಂದ ಜಲಾವೃತವಾದ ಮನೆಯಲ್ಲಿ ಹೃದಯಾಘಾತದಿಂದ ವೃದ್ದರೊಬ್ಬರು ಸಾವನ್ನಪ್ಪಿರುವ ಘಟನೆ ಮಹಾದೇವಪುರದ ರೈನ್ ಬೋ ಲೇಔಟ್ ನಲ್ಲಿ ನಡೆದಿದೆ. 86 ವರ್ಷದ ಶ್ರೀನಿವಾಸ ರಾಮರಾವ್ ಮೃತಪಟ್ಟ ದುರ್ದೈವಿಯಾಗಿದ್ದಾರೆ.

ಬೆಂಗಳೂರು: ಮಳೆಯಿಂದ ಜಲಾವೃತಗೊಂಡ ಮನೆ; ಹೃದಯಾಘಾತದಿಂದ ವೃದ್ಧ ಸಾವು
ನೀರಿನಲ್ಲಿ ಶ್ರೀನಿವಾಸ ರಾಮ ರಾವ್ ಅವರನ್ನು ಹೊತ್ತೊಯ್ಯುತ್ತಿರುವ ಕುಟುಂಬಸ್ಥರು
Published On :

ಬೆಂಗಳೂರು: ಭಾರೀ ಮಳೆಯಿಂದ ಜಲಾವೃತವಾದ ಮನೆಯಲ್ಲಿ ಹೃದಯಾಘಾತದಿಂದ ವೃದ್ದರೊಬ್ಬರು ಸಾವನ್ನಪ್ಪಿರುವ ಘಟನೆ ಮಹಾದೇವಪುರದ ರೈನ್ ಬೋ ಲೇಔಟ್ ನಲ್ಲಿ ನಡೆದಿದೆ. 86 ವರ್ಷದ ಶ್ರೀನಿವಾಸ ರಾಮರಾವ್ ಮೃತಪಟ್ಟ ದುರ್ದೈವಿಯಾಗಿದ್ದಾರೆ. 

ಕಳೆದೆರಡು ದಿನಗಳಿಂದ ಸುರಿದ ಮಳೆಯಿಂದಾಗಿ  ರೈನ್ ಬೋ  ಬಡಾವಣೆಗೆ  ನೀರು ನುಗ್ಗಿ ಇಡೀ ಬಡಾವಣೆ ಜಲಾವೃತಗೊಂಡು ನಿವಾಸಿಗಳು ಮನೆಯಿಂದ ಹೊರಬರಲು ಹಾಗೂ ಒಳ ಹೋಗಲು ಸಾಧ್ಯವಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. 
ಜಲಾವೃತಗೊಂಡ ಮನೆಯಿಂದ ಶ್ರೀನಿವಾಸ ರಾಮರಾವ್ ಅವರನ್ನು  ಕುಟುಂಬಸ್ಥರು ತುರ್ತಾಗಿ ಅವರನ್ನು ಆಸ್ಪತ್ರೆಗೆ ಸಾಗಿಸಲು ಸಾಧ್ಯವಾಗಲಿಲ್ಲ. ಇದರಿಂದಾಗಿ ಅವರು ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ರೈನ್ ಬೋ ಲೇಔಟ್ ಮಹದೇವಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯೊಳಗೆ ಬರಲಿದೆ. ಇಡೀ ಬಡಾವಣೆ ಐಟಿ ಕಾರಿಡಾರ್ ಆಗಿದ್ದು, ಅರವಿಂದ ಲಿಂಬಾವಳಿ 2008ರಿಂದಲೂ  ಶಾಸಕರಾಗಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.