ಬ್ಯಾಂಕ್ ಹಣವನ್ನೇ ಲೂಟಿ ಮಾಡಲು ಹೋದ ಪೊಲೀಸ್ ಅಧಿಕಾರಿ ಬಂಧನ
ಖಾಸಗಿ ಬ್ಯಾಂಕ್ ನಿಂದ ಹಣವನ್ನು ಎಟಿಎಂಗೆ ಸಾಗಿಸುವ ವೇಳೆ ಹಣವನ್ನು ಲೂಟಿ ಮಾಡಲು ಸಂಚು ರೂಪಿಸಿದ್ದ ಪೊಲೀಸ್ ಅಧಿಕಾರಿಯೊಬ್ಬನನ್ನು ಬಂಧನಕ್ಕೊಳಪಡಿಸಿರುವ ಘಟನೆಯೊಂದು ಅಸ್ಸಾಂ ಬೈಯಿಹತಾ ಚರಿಯಾಲಿ ಪ್ರದೇಶದಲ್ಲಿ ಭಾನುವಾರ ನಡೆದಿದೆ...

ರಂಗ್ಯಾ: ಖಾಸಗಿ ಬ್ಯಾಂಕ್ ನಿಂದ ಹಣವನ್ನು ಎಟಿಎಂಗೆ ಸಾಗಿಸುವ ವೇಳೆ ಹಣವನ್ನು ಲೂಟಿ ಮಾಡಲು ಸಂಚು ರೂಪಿಸಿದ್ದ ಪೊಲೀಸ್ ಅಧಿಕಾರಿಯೊಬ್ಬನನ್ನು ಬಂಧನಕ್ಕೊಳಪಡಿಸಿರುವ ಘಟನೆಯೊಂದು ಅಸ್ಸಾಂ ಬೈಯಿಹತಾ ಚರಿಯಾಲಿ ಪ್ರದೇಶದಲ್ಲಿ ಭಾನುವಾರ ನಡೆದಿದೆ.
ಭೂಪೇನ್ ಚಂದ್ರ ದಾಸ್ ಹಣ ಲೂಟಿ ಮಾಡಲೆತ್ನಿಸಿದ ಪೊಲೀಸ್ ಅಧಿಕಾರಿಯಾಗಿದ್ದು, ಕಮರೂಪ್ ಜಿಲ್ಲೆಯ ಮೊರಂಜನಾ ಬಳಿಯಿರುವ ನಲಬಾರಿ ಬ್ಯಾಂಕ್ ಶಾಖೆಯಿಂದ ಬೈಯಿಹತಾ ಚರಿಯಾಲಿ ಪ್ರದೇಶದಲ್ಲಿರುವ ಎಟಿಎಂಗೆ ಹಣವನ್ನು ತುಂಬಲೆಂದು ವಾಹನದಲ್ಲಿ ರು.19 ಲಕ್ಷ ಹಣವವನ್ನು ಸಾಗಿಸಲಾಗುತ್ತಿತ್ತು. ಈ ವೇಳೆ ಹಣ ದರೋಡೆ ಮಾಡಲು ಸಂಚು ರೂಪಿಸಿದ್ದ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಂದ್ರಾಣಿ ಬರುವಾ ಹೇಳಿದ್ದಾರೆ.
ಬ್ಯಾಂಕ್ ನ ಹಣ ಸಾಗಿಸುವ ಭದ್ರತಾ ಸಿಬ್ಬಂದಿಗಳಾದ ಪಬನ್ ಬರ್ಮನ್, ತೈಜುದ್ದೀನ್ ಅಹ್ಮದ್ ಹಾಗೂ ಈತನ ಸಹೋದರ ಪ್ರಸೂರ್ ಅಲಿ ಮತ್ತು ಇಫ್ತಿಕಾರ್ ಸೈಕಿಯಾ ಅವರೊಂದಿಗೆ ಸೋರಿ ಪೊಲೀಸ್ ಅಧಿಕಾರಿ ಹಣ ಲೂಟಿ ಮಾಡಲು ಸಂಚು ರೂಪಿಸಿದ್ದ. ಸಂಚಿನಂತೆ ಆರೋಪಿಗಳು ಹಣವನ್ನು ಲೂಟಿ ಮಾಡಿದ್ದಾರೆ.
ಈ ವೇಳೆ ಮಾಹಿತಿ ತಿಳಿದ ಪೊಲೀಸರು ಆರೋಪಿಗಳ ಬೆನ್ನಟ್ಟಿದ್ದರು. ನಂತರ ಕೊನೆಯ ಇಫ್ತಿಕಾರ್ ಸೈಕಿಯಾ ಎಂಬಾತನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಬಂಧಿತ ಆರೋಪಿಯನ್ನು ಬಂಧನಕ್ಕೊಳಪಡಿಸಿ ವಿಚಾರಣೆ ನಡೆಸಿದಾಗ ಪೊಲೀಸ್ ಅಧಿಕಾರಿಯ ಸಂಚು ಬಯಲಿಗೆ ಬಂದಿತು. ಎಂದು ಹೇಳಿದ್ದಾರೆ.
ಇದೀಗ ಪೊಲೀಸ್ ಅಧಿಕಾರಿ ಸೇರಿದಂತೆ ಇನ್ನಿತರೆ ಆರೋಪಿಗಳನ್ನು ಬಂಧನಕ್ಕೊಳಪಡಿಸಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


