ರಫ್ತುದಾರರಿಗೆ ಕೇಂದ್ರದ ನೆರವಿನ ಭರವಸೆ
ದೇಶದ ರಫ್ತು ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಬಡ್ಡಿ ವಿನಾಯಿತಿ ಯೋಜನೆ ವಿಸ್ತರಿಸುವುದು ಸೇರಿದಂತೆ ಹಲವು ಸೌಲಭ್ಯಗಳನ್ನು...ಪ್ರಕಟಿಸಲಾಗುವುದು ಎಂದು ಕೇಂದ್ರ

ನವದೆಹಲಿ: ದೇಶದ ರಫ್ತು ವಲಯಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಬಡ್ಡಿ ವಿನಾಯಿತಿ ಯೋಜನೆ ವಿಸ್ತರಿಸುವುದು ಸೇರಿದಂತೆ ಹಲವು ಸೌಲಭ್ಯಗಳನ್ನು ಪ್ರಕಟಿಸಲಾಗುವುದು ಎಂದು ಕೇಂದ್ರ ಸರ್ಕಾರ ರಫ್ತು ಕಂಪನಿಗಳಿಗೆ ಭರವಸೆ ನೀಡಿದೆ. ಮಂಗಳವಾರ ವಾಣಿಜ್ಯ ಸಚಿವಾಲಯ ರಫ್ತು ಕಂಪನಿಗಳೊಂದಿಗೆ ಏರ್ಪಡಿಸಿದ್ದ ಸಭೆಯಲ್ಲಿ ಈ ಭರವಸೆ ನೀಡಿತು ಎಂದು ರಫ್ತುದಾರರು ತಿಳಿಸಿ ದ್ದಾರೆ. ಈ ವರ್ಷದಲ್ಲಿ ರಫ್ತು ಕಂಪನಿಗಳಿಗೆ ನೀಡಿರುವ ನೆರವು 18 ಸಾವಿರ ಕೋಟಿಯಿಂದ 21 ಸಾವಿರ ಕೋಟಿಗೆ ತಲುಪಿದೆ ಎಂದು ವಾಣಿಜ್ಯ ಕಾರ್ಯದರ್ಶಿ ರೀಟಾ ಟಿಯೋಟಿಯಾ ಹೇಳಿದ್ದು, ಬಿಲ್‍ಗಳನ್ನು ನಿಗದಿತ ಸಮಯಕ್ಕೆ ಸಲ್ಲಿಸಿ ಸೌಲಭ್ಯ ಪಡೆಯುವಂತೆ ತಿಳಿಸಿದ್ದಾರೆ.
ವಿಶೇಷ ಆರ್ಥಿಕ ವಲಯಗಳ ಮೇಲೆ ಕನಿಷ್ಠ ಪರ್ಯಾಯ ತೆರಿಗೆ ವಿಧಿಸಿರುವುದರಿಂದ ಆಗಿರುವ ಹೊರೆ, ಸಾಲದ ಮೇಲೆ ಹೆಚ್ಚಿನ ಬಡ್ಡಿ, ವಹಿವಾಟು ವೆಚ್ಚ ಹೆಚ್ಚಿದ್ದರಿಂದ ಸಂಕಷ್ಟಕ್ಕೆ ಸಿಲುಕಿರುವುದಾಗಿ ರಫ್ತು ಕಂಪನಿಗಳು ಹೇಳಿ ಕೊಂಡಿವೆ. ಕಳೆದ ನವೆಂಬರ್‍ನಿಂದ ದೇಶದ ರಫ್ತು ಸತತವಾಗಿ ಕುಸಿಯುತ್ತಿದೆ.ಇದೇ ಪರಿಸ್ಥಿತಿ ಮುಂದುವರೆದರೆ ಈ ವರ್ಷ ರಫ್ತು ವಹಿವಾಟು 5,000 ಡಾಲರ್‍ಗೆ ಕುಸಿಯಲಿದೆ ಎಂದು ಚರ್ಮೋದ್ಯಮ ರಫ್ತು ಒಕ್ಕೂಟದ ಚೇರ್ಮನ್ ರಫೀಕ್ ಅಹಮದ್ ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


