ದೇಶ

ಐಎಸ್ ಸೇರ್ಪಡೆಗೆ ರು.50 ಸಾವಿರ ಆಮಿಷ

ದುಬೈ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಭಟ್ಕಳ ಮೂಲದ ಅದ್ನಾನ್ ಹಸನ್ ದಾಮುದಿ (35) ಸಾಮಾಜಿಕ...

ಐಎಸ್ ಸೇರ್ಪಡೆಗೆ ರು.50 ಸಾವಿರ ಆಮಿಷ
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ದುಬೈ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಭಟ್ಕಳ ಮೂಲದ ಅದ್ನಾನ್ ಹಸನ್ ದಾಮುದಿ (35) ಸಾಮಾಜಿಕ ಜಾಲತಾಣಗಳ ಮೂಲಕ ಉಗ್ರ ಸಂಘಟನೆ ಇಸಿಸ್‍ಗೆ ಯುವಕರನ್ನು ನೇಮಕ ಮಾಡಿಕೊಳ್ಳಲು ಆನ್ ಲೈನ್ ಮೂಲಕ ಯತ್ನಿಸಿದ್ದ ಎಂಬುದು ತನಿಖೆಯಲ್ಲಿ ಬಯಲಾಗಿದೆ. 
ಇಸಿಸ್ ಸಂಘಟನೆಯ ಪ್ರಚಾರಕನಾಗಿದ್ದನೆನ್ನಲಾದ ಅದ್ನಾನ್ 2014ರಲ್ಲಿ ಹೈದರಾಬಾದ್‍ನ ಯುವಕ ನೊಬ್ಬನಿಗೆ ರು.50 ಸಾವಿರ ಹಣದ ಆಮಿಷ ಒಡ್ಡಿದ್ದ. ಈ ಹಣದ ನೆರವಿನಿಂದ ಆತ ಸಿರಿಯಾ, ಇರಾಕ್‍ಗೆ ಆಗಮಿಸಿ ಉಗ್ರ ಸಂಘಟನೆ ಸೇರಿಕೊಳ್ಳುವುದು ಇದರ ಉದ್ದೇಶವಾಗಿತ್ತು. ಇಂಡಿಯನ್ ಮುಜಾಹಿದಿನ್ ಸಂಘಟನೆ ಸದಸ್ಯರ ಜೊತೆ ಈತ ಗುರುತಿಸಿಕೊಂಡಿರುವ ಸಾಧ್ಯತೆಗಳಿವೆ ಎಂಬುದು ಗುಪ್ತಚರ ಸಂಸ್ಥೆಗಳ ನಂಬಿಕೆ ಎಂದು ಆಂಗ್ಲ ಪತ್ರಿಕೆಯೊಂದು ವರದಿ ಮಾಡಿದೆ. 
ಹೈದರಾಬಾದ್‍ನ ಯುವಕನ ಸೋದರಿಯ ಖಾತೆಗೆ ಈ ಹಣ ಜಮೆ ಮಾಡಲಾಗಿತ್ತು. ಕಳೆದ ವರ್ಷ ಇಸಿಸ್ ಸಂಘಟನೆ ಸೇರಲು ಹೊರಟು ಪಶ್ಚಿಮ ಬಂಗಾಲದಲ್ಲಿ ಹೈದರಾಬಾದ್ ಪೊಲೀಸರಿಂದ ಬಂಧಿಸಲ್ಪಟ್ಟ ಯುವಕರ ಪೈಕಿ ಹೈದರಾಬಾದ್ ಯುವಕನೂ ಸೇರಿದ್ದಾನೆ. ಬಾಂಗ್ಲಾದೇಶದ ಮೂಲಕ ಪರಾರಿಯಾಗಲು ಈ ಯುವಕರು ಕಾಯುತ್ತಿದ್ದರು ಎಂದು ಪತ್ರಿಕೆ ವರದಿ ಮಾಡಿದೆ. 
ಫೇಸ್‍ಬುಕ್-ಸ್ಕೈಪ್ ಬಳಕೆ: ಫೇಸ್‍ಬುಕ್ ಮೂಲಕ ಇನ್ನೊಬ್ಬ ಸೋದರ ಶಪಿs ಜೊತೆ ಸಂಪರ್ಕದಲ್ಲಿದ್ದ ಅದ್ನಾನ್, ಇಂಡಿಯನ್ ಮುಜಾಹಿದೀನ್ ಸಂಘಟನೆಯಿಂದ ಒಡೆದುಹೋಗಿದ್ದ ಅಲ್ ಇಸಾಬಾ ಮತ್ತು ಅನ್ಸರ್ ಉಲ್ ತೌಹೀದ್ ಎಂಬ ಸಂಘಟನೆಗಳ ಪರವಾಗಿ ಇಸ್ಲಾಮಿ ವೆಬ್‍ಸೈಟ್‍ಗಳನ್ನು ನಿರ್ವಹಿಸುತ್ತಿದ್ದ. 
ಯುವಕರನ್ನು ಜಿಹಾದ್‍ನತ್ತ ಸೆಳೆಯಲು ಪ್ರೇರಿಸುವಂಥ ಹೇಳಿಕೆ ಮತ್ತು ದೃಶ್ಯಗಳನ್ನು ಈ ವೆಬ್‍ಸೈಟ್‍ಗಳಲ್ಲಿ ಸೇರಿಸಲಾಗುತ್ತಿತ್ತು. ಈ ಮಧ್ಯೆ, ತನ್ನ ಮಗ ಇಸಿಸ್ ಪರ ನೇಮಕಾತಿ ನಡೆಸಿಲ್ಲ ಎಂದು ದುಬೈನಿಂದ ಸ್ಪಷ್ಟನೆ ನೀಡಿರುವ ಅದ್ನಾನ್ ತಂದೆ ಹುಸೇನ್ ದಾಮುದಿ, ಆತ ಕೇವಲ ಇಸಿಸ್ ಸಂಘಟನೆಯ ಫೇಸ್‍ಬುಕ್ ಪುಟವನ್ನು ಲೈಕ್ ಮಾಡಿದ್ದು, ಇಸಿಸ್ ಪರ ಸಂದೇಶಗಳನ್ನು ಟ್ವೀಟ್ ಮಾಡಿದ್ದಾನಷ್ಟೇ ಎಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.