ವಿಕಲಚೇತನರಿಗೆ 2ನೇ, 3ನೇ ಅಂತಸ್ತಿನಲ್ಲಿ ಪರೀಕ್ಷೆ ನಡೆಸಿದ ರೈಲ್ವೆ
ವಿಕಲಚೇತನರ ರೈಲ್ವೇ ನೇಮಕಾತಿಗಾಗಿ ನಡೆದ ಪರೀಕ್ಷೆಗಳನ್ನು 2ನೇ ಮತ್ತು 3ನೇ ಅಂತಸ್ತುಗಳಲ್ಲಿ ನಡೆಸುವ ಮೂಲಕ ಇಲಾಖೆ ತನ್ನ ಮೂರ್ಖತನ ಪ್ರದರ್ಶಿಸಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದೆ...

ನವದೆಹಲಿ: ವಿಕಲಚೇತನರ ರೈಲ್ವೇ ನೇಮಕಾತಿಗಾಗಿ ನಡೆದ ಪರೀಕ್ಷೆಗಳನ್ನು 2ನೇ ಮತ್ತು 3ನೇ ಅಂತಸ್ತುಗಳಲ್ಲಿ ನಡೆಸುವ ಮೂಲಕ ಇಲಾಖೆ ತನ್ನ ಮೂರ್ಖತನ ಪ್ರದರ್ಶಿಸಿ ಸಾರ್ವಜನಿಕರ ಆಕ್ರೋಶಕ್ಕೆ ಒಳಗಾಗಿದೆ.
ಗುರುವಾರ ವಿಕಲಚೇತನರಿಗಾಗಿ ನಡೆದ ಪ್ರತ್ಯೇಕ ಪರೀಕ್ಷೆಯನ್ನು ಕಷ್ಟಗಳ ನಡುವೆಯೇ ಮೆಟ್ಟಿಲುಗಳನ್ನೇರಿ ಬಂದು ಬರೆಯುವ ಸಂಕಷ್ಟವನ್ನು ಅಭ್ಯರ್ಥಿಗಳು ಅನುಭವಿಸಿದರು. ಆ ಬೃಹತ್ ಕಟ್ಟಡದಲ್ಲಿ ಲಿಫ್ಟ್, ರ್ಯಾಂಪ್ ಇರಲಿಲ್ಲ ಎಂದು `ದ ಟೈಮ್ಸ್ ಆಫ್ ಇಂಡಿಯಾ' ವರದಿ ಮಾಡಿದೆ. 450ಕ್ಕೂ ಹೆಚ್ಚು ಖಾಲಿ ಹುದ್ದೆಗಳನ್ನು ತುಂಬಿಸಬೇಕೆಂದು ಸುಪ್ರೀಂ ಆದೇಶ ನೀಡಿರುವ ಹಿನ್ನಲೆಯಲ್ಲಿ ರೈಲ್ವೇ ನೇಮಕಾತಿ ಮಂಡಳಿ ಪರೀಕ್ಷೆ ನಡೆಸಲು ಮುಂದಾಗಿತ್ತು. ಹಲವು ಅಭ್ಯರ್ಥಿಗಳು ಮೆಟ್ಟಿಲು ಹತ್ತಲಾಗದೇ ಮೆಟ್ಟಿಲಲ್ಲೇ ಕುಸಿದಿದ್ದು, ಇನ್ನು ಕೆಲವರನ್ನು ಅವರ ಪೋಷಕರೇ ಹೊತ್ತೊಯ್ದು ಪರೀಕ್ಷಾ ಕೊಠಡಿಯಲ್ಲಿ ಕೂರಿಸಿದರು. ಇನ್ನು ಕೆಲವು ಅಸಹಾಯಕ ವಿಕಲ ಚೇತನರು ಕಣ್ಣೀರಿಡುತ್ತಿದ್ದ ದೃಶ್ಯಗಳು ಕಂಡುಬಂದಿದ್ದಾಗಿ ಪರೀಕ್ಷೆ ಬರೆದ ಅಭ್ಯರ್ಥಿಯೊಬ್ಬರು ತಿಳಿಸಿದ್ಧಾರೆ.
ಬೆಂಗಳೂರು ಸೇರಿದಂತೆ ಪರೀಕ್ಷೆ ನಡೆದ 142 ಕೇಂದ್ರಗಳ ಪೈಕಿ 10 ಕೇಂದ್ರಗಳಲ್ಲಿ ಈ ರೀತಿಯ ಸಮಸ್ಯೆ ಆಗಿರುವುದು ಹೌದು ಎಂದು ರೈಲ್ವೇ ಅಧಿಕಾರಿಗಳು ಒಪ್ಪಿಕೊಂಡಿದ್ಧಾರೆ. ಈ ತೊಂದರೆ ಅನುಭವಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಇನ್ನೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದ್ಧಾರೆ. ಘಟನೆಯಿಂದ ರೈಲ್ವೇ ಸಚಿವ ಸುರೇಶ್ ಪ್ರಭ ತೀವ್ರ ಮುಜುಗರಕ್ಕೊಳಗಾಗಿ ತಕ್ಷಣವೇ ತನಿಖೆಗೆ ಆದೇಶಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


