ದೇಶ

ಪ್ಯಾರಿಸ್ ದಾಳಿ ಮಾಸ್ಟರ್ ಮೈಂಡ್ ಆತ್ಮಹತ್ಯೆ

ಬುಧವಾರ ಬೆಳ್ಳಂಬೆಳಗ್ಗೆ ಇಡೀ ಫ್ರಾನ್ಸ್‍ಗೆ ಫ್ರಾನ್ಸ್ ಬೆಚ್ಚಗೆ ನಿದ್ರಿಸುತ್ತಿದ್ದರೆ, ಸೈಂಟ್ ಡೆನಿಸ್‍ನ ಅಪಾರ್ಟ್‍ಮೆಂಟ್‍...

ಪ್ಯಾರಿಸ್ ದಾಳಿ ಮಾಸ್ಟರ್ ಮೈಂಡ್ ಆತ್ಮಹತ್ಯೆ
ಎಲ್ಲಕ್ಕೂ ಸನ್ನದ್ಧರಾದಂತೆ ಉಗ್ರರು ಅಡಗಿದ್ದ ಅಪಾರ್ಟ್ ಮೆಂಟ್ ನತ್ತ ಎಚ್ರಿಕೆಯ ಹೆಜ್ಜೆಯಿಡುತ್ತಾ ಸಾಗುತ್ತಿರುವ ಪೊಲೀಸರು
Published On :
ಪ್ಯಾರಿಸ್: ಬುಧವಾರ ಬೆಳ್ಳಂಬೆಳಗ್ಗೆ ಇಡೀ ಫ್ರಾನ್ಸ್‍ಗೆ ಫ್ರಾನ್ಸ್ ಬೆಚ್ಚಗೆ ನಿದ್ರಿಸುತ್ತಿದ್ದರೆ, ಸೈಂಟ್ ಡೆನಿಸ್‍ನ ಅಪಾರ್ಟ್‍ಮೆಂಟ್‍ವೊಂದರಲ್ಲಿ ಗುಂಡಿನ ಮೊರೆತದ ಶಬ್ದವು ನಿಶ್ಯಬ್ದದ ನಡುವೆ ಸೀಳಿ ಬರುತ್ತಿತ್ತು. ಪ್ಯಾರಿಸ್ ದಾಳಿ ನಡೆದಾಗಿನಿಂದಲೂ ಹಗಲು ರಾತ್ರಿಯನ್ನದೇ ಉಗ್ರರಿಗಾಗಿ ಹುಡುಕಾಟ ನಡೆಸುತ್ತಿದ್ದ ಫ್ರಾನ್ಸ್‍ನ ಪೊಲೀಸರು ಮತ್ತು ವಿಶೇಷ ಪಡೆಗಳಿಗೆ ಕೊನೆಗೂ ಉಗ್ರರ ಸುಳಿವು ಸಿಕ್ಕಿಬಿಟ್ಟಿತ್ತು. 
ಅದರಂತೆ, ಬುಧವಾರ ಬೆಳಗ್ಗೆ ಉಗ್ರರು ಅಡಗಿದ್ದಾರೆನ್ನಲಾದ ಅಪಾರ್ಟ್‍ಮೆಂಟ್ ವೊಂದಕ್ಕೆ 100ಕ್ಕೂ ಅಧಿಕ ಪೊಲೀ ಸರು ದಾಳಿ ನಡೆಸಿದರು. ಸತತ 7 ಗಂಟೆಗಳ ಕಾರ್ಯಾಚರಣೆಯ ಬಳಿಕ 7 ಮಂದಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾದರು. ಪ್ಯಾರಿಸ್ ದಾಳಿಯ ಮಾಸ್ಟರ್ ಮೈಂಡ್ ಎನ್ನಲಾದ ಅಬ್ದುಲ್ ಹಮೀದ್ ಅಬೌದ್ ಕೂಡ ಅಪಾರ್ಟ್‍ಮೆಂಟ್‍ವೊಳಗಿದ್ದ. 
ಈತ ಕಾರ್ಯಾಚರಣೆ ನಡೆಯುತ್ತಿರುವಾಗಲೇ ಆತ್ಮಹತ್ಯೆ ಮಾಡಿಕೊಂಡ ಎಂದು ಪ್ಯಾರಿಸ್ ಪ್ರಾಸಿಕ್ಯೂಟರ್ ಫ್ರಾನ್ಸ್ ಸ್ವ ಮಾಲಿನ್ಸ್ ತಿಳಿಸಿದ್ದಾರೆ. ಪೊಲೀಸರು ಅಪಾರ್ಟ್‍ಮೆಂಟ್‍ಗೆ ನುಗ್ಗುತ್ತಿ-ದ್ದಂತೆ, ಅತ್ತ ಉಗ್ರರಿಂದ ಗುಂಡಿನ ಮಳೆಯಾಗತೊಡಗಿತು. ಎರಡೂ ಕಡೆ ಭಾರಿ ಗುಂಡಿನ ಚಕಮಕಿ ನಡೆಯಿತು. 
ಇತರೆ ಉಗ್ರರೊಂದಿಗೆ ಅಪಾರ್ಟ್‍ಮೆಂಟ್ ಒಳಗಿದ್ದ ಮಹಿಳಾ ಬಾಂಬರ್ ಆತ್ಮಾಹುತಿ ಬೆಲ್ಟ್ ಧರಿಸಿಕೊಂಡು, ತನ್ನನ್ನು ತಾನೇ ಸ್ಫೋಟಿಸಿಕೊಂಡಳು. ಒಟ್ಟಿನಲ್ಲಿ ಕಾರ್ಯಾಚರಣೆ ಮುಗಿಯುವ ವೇಳೆಗೆ ಇಬ್ಬರು ಶಂಕಿತ ಉಗ್ರರು ಹತರಾದರೆ, 7 ಮಂದಿ ಪೊಲೀಸರಿಗೆ ಸೆರೆಸಿಕ್ಕಿದ್ದಾರೆ. ಈ ಪೈಕಿ ಉಗ್ರರಿಗೆ ಅಪಾರ್ಟ್‍ಮೆಂಟ್ ಅನ್ನು ಬಾಡಿಗೆ ನೀಡಿದಾತ ಮತ್ತು ಆತನ ಸ್ನೇಹಿತನೂ ಸೇರಿದ್ದಾರೆ. ಕಾರ್ಯಾಚರಣೆ ವೇಳೆ, ಐವರು ಪೊಲೀಸರು ಗಾಯಗೊಂಡಿದ್ದಾರೆ. 
ಮನೆಯಿಂದ ಹೊರಬರಬೇಡಿ: ಮಂಗಳವಾರ ತಡರಾತ್ರಿಯೇ ಸೈಂಟ್ ಡೆನಿಸ್‍ನ ಎಲ್ಲ ರಸ್ತೆಗಳನ್ನೂ ಮುಚ್ಚಲಾಗಿತ್ತು. ಯಾರೂ ಹೊರಬರದಂತೆ ನಿವಾಸಿಗಳಿಗೆ ಪೊಲೀಸರು ಸೂಚಿಸಿದ್ದರು. ಕೆಲವರನ್ನು ಸ್ಥಳಾಂತರ ಮಾಡಲಾಗಿತ್ತು. ಯಾರೂ ಯಾವುದೇ ಕಾರಣಕ್ಕೂ ಕಿಟಕಿಗಳಿಂದ ಇಣುಕಬಾರದು ಎಂದೂ ಆದೇಶಿಸಲಾಗಿತ್ತು. ಶಾಲೆಗಳು, ಸಾರ್ವಜನಿಕ ಸಾರಿಗೆ ಕಾರ್ಯನಿರ್ವಹಿಸದಂತೆ ಮೊದಲೇ ಹೇಳಲಾಗಿತ್ತು. ಬೀದಿಬೀದಿಗಳಲ್ಲೂ ಖಾಕಿ ಸರ್ಪಗಾವಲಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.